ತೀರ್ಥಹಳ್ಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತೀರ್ಥಹಳ್ಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 4, 2024

ತೀರ್ಥಹಳ್ಳಿಯ ಕಾರ್ ಬೈಲು ಗುಡ್ಡ ಕುಸಿತ



ಸುದ್ದಿಲೈವ್/ತೀರ್ಥಹಳ್ಳಿ


ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಮಂಗಳವಾರ ಬೆಳಿಗ್ಗೆ ಕುಸಿದಿದೆ. ಸುತ್ತಮುತ್ತಲೂ ಗದ್ದೆ, ತೋಟ, ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.


ದಟ್ಟ ಕಾಡುಗಳಿಂದ ಆವರಿಸಿರುವ ಗುಡ್ಡ ಪ್ರದೇಶದಲ್ಲಿ ಜನರ ಓಡಾಟ ಇಲ್ಲ. ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅತಿಯಾದ ಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರ, ಸೆಪ್ಟೆಂಬರ್ 2, 2024

ವಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!



ಸುದ್ದಿಲೈವ್/ತೀರ್ಥಹಳ್ಳಿ


ತೀರ್ಥಹಳ್ಳಿ  ಡಿಗ್ರಿಯಲ್ಲಿ ಚೆನ್ನಾಗಿ ಓದುತ್ತಿದ್ದ ರ‌್ಯಾಂಕ್ ತೆಗೆದುಕೊಳ್ಳುವಂತ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕೆಲವೊಂದು ಮಾಹಿತಿ ಹಂಚಿಕೊಂಡು ತುಂಗಾ ನದಿಗೆ ಹಾರಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಇಂದು ಆತನ ಮೃತದೇಹ ಪತ್ತೆಯಾಗಿದೆ.


ಇಂದಾವರ ಗ್ರಾಮದ ಜಯದೀಪ್ ( 24 ವರ್ಷ ) ದ ಯುವಕ ತುಂಗಾ ನದಿಗೆ ಹಾರಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಶನಿವಾರ ಬೆಳಗ್ಗೆ ವಾಟ್ಸಪ್ ಸ್ಟೇಟಸ್ ಹಾಕಿ ತುಂಗಾ ನದಿಯ ಸಮೀಪ ಬೈಕ್ ನಿಲ್ಲಿಸಿ ಆತ ಕಣ್ಮರೆಯಾಗಿದ್ದ. ನಂತರ ತುಂಗಾ ನದಿಗೆ ಹಾರಿರಬಹುದು ಎಂಬ ಅನುಮಾನದಿಂದ ಅಗ್ನಿಶಾಮಾಕದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಆದರೆ ಸ್ವಲ್ಪ ದೂರದಲ್ಲಿರುವ ಸ್ಮಶಾನಕಟ್ಟೆ ಸಮೀಪ ಆತನ ಶವ ಸಿಕ್ಕಿದೆ.


ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆತ ಆನ್ಲೈನ್ ಟ್ರೇಡಿಂಗ್ ನಲ್ಲಿ ಸಿಲುಕಿಹಾಕಿಕೊಂಡಿದ್ದ ಎಂಬುದಾಗಿ ಮಾತು ಕೇಳಿ ಬಂದಿತ್ತು. ಒಟ್ಟಿನಲ್ಲಿ ಬದುಕಿ ಬಾಳ ಬೇಕಿದ್ದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಶನಿವಾರ, ಆಗಸ್ಟ್ 31, 2024

ನಿಗೂಢವಾಗಿ ಯುವಕ ನಾಪತ್ತೆ-ಮುಂದುವರೆದ ಶೋಧಕಾರ್ಯ



ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಪದವಿ ಓದುತ್ತಿದ್ದ ಯುವಕನೋರ್ವ ತುಂಗಾ ನದಿಯ ದಡದಲ್ಲಿ ಬೈಕ್ ಬಿಟ್ಟು ಕಣ್ಮರೆಯಾಗಿದ್ದಾನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.


ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಯದೀಪ್ (24 ವರ್ಷ) ನಾಪತ್ತೆಯಾಗಿದ್ದು, ಆತನ ವಾಟ್ಸಾಪ್ ಸ್ಟೇಟಸ್‌ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ.  ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.


ಜಯದೀಪ್ ತನ್ನ ವಾಟ್ಸಾಪ್ ಸ್ಟೇಟಸ್ಸಿನಲ್ಲಿ “ಇನ್ನುಸ್ವಲ್ಪ ದಿನದಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಳ್ಳೆಯ ವಿದ್ಯಾರ್ಥಿ ಕೂಡ, ಬ್ಯಾಂಕ್ ಪರೇಕ್ಷೆ ಬರೆಯುವ ಚಾನ್ಸ್ ಕೂಡ ಇತ್ತು. ಆದರೆ ಅದು ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಿದ್ದೀನಿ ಅಂತ ಬೇಜಾರಾಗಬೇಡಿ, ನನ್ನಸಾಲ ನಿಮ್ಮ ಮೇಲೆ ಹಾಕುತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ ನನ್ನ ಬೈಕ್ ಮಾರಿ ಸ್ವಲ್ಪ ಅಡ್ಡಸ್ಟ್ ಮಾಡಿ ಎಲ್ಲರಿಗೂ ಕೊಡಿ.


ನನ್ನ ಜೀವನನೇ ಒಂದು ರೀತಿಯ ಉಪ್ಪಿಲ್ಲದ ಊಟದ ರೀತಿ, ಸುಮಾರು 3 ವರ್ಷದಿಂದ ಆಗಿದೆ. ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ, ಸಣ್ಣ ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು, ಒನ್ ಸೈಡ್ ನಾನು ಲವ್ ಮಾಡಿದ್ದೆ ಅವಳು ಒಪ್ಪಿಲ್ಲ. ಒಂದು ಸಣ್ಣ ತಪ್ಪು ಇವತ್ತು ನನ್ನ ಸಾವಿನ ಕಡೆ ತಳ್ಳುತ್ತಿದೆ.


ಒಳ್ಳೆ ಕೆಲಸ ಹುಡುಕುವುದರಲ್ಲೂ ವಿಫಲನಾದೆ ಇತ್ತೀಚಿನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೆರೇಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ ಊರು ಬಿಡೊದಕ್ಕಿಂತ ಸಾವೇ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ ಸಾರೀ ಫೀಸ್ ಕ್ಷಮಿಸಿ ಬಿಡಿ ನನ್ನ ಸಾವಿಗೆ ನನ್ನ ಕೆಟ ನಿರ್ಧಾರಗಳೇ ಕಾರಣ” ಎಂದು ವಾಟ್ಸಪ್ ಸ್ಟೇಟಸ್ ನಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ. 


ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ  ಹುಡುಕುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವ ಹುಡುಕುವಲ್ಲಿ ನಿರತವಾಗಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿಯನ್ನು ಎದುರು ನೋಡಲಾಗುತ್ತಿದೆ.

ಮಂಗಳವಾರ, ಆಗಸ್ಟ್ 27, 2024

ತೀರ್ಥಹಳ್ಳಿಯ ಪಪಂನಲ್ಲಿ ಹೈಡ್ರಾಮಾ-ಧರಣಿ



ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯಲ್ಲಿ ಹೈಡ್ರಾಮಾ ನಡೆದಿದೆ. ಅಧ್ಯಕ್ಷ ಮತ್ತು ಉಪಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೊಂದಲ ಮೂಡಿದೆ. ಕಾಂಗ್ರೆಸ್ ಸದಸ್ಯರಿಙದಲೇ ಧರಣಿ ನಡೆದಿದೆ. 


ಚುನಾವಣೆ ಅಧಿಕಾರಿಗಳ ನಿಲುವಿಗೆ ಆಕ್ಷೇಪಿಸಿ ಧರಣಿ ನಡೆದಿದೆ. ಪಟ್ಟಣಪಂಚಾಯಿತಿಯ ಸಭಾಂಗಣದಲ್ಲಿಯೇ ಧರಣಿ ನಡೆಸಲಾಗುತ್ತಿದೆ. ತಕ್ಷಣವೇ ಚುನಾವಣೆ ನಡೆಸುವಂತೆ ಧರಣಿ ನಡೆದಿದೆ. ಆದರೆ ಚುನಾವಣೆ 1 ಗಂಟೆಯ ನಂತರ ಚುನಾವಣೆ ನಡೆಸುವ ಅವಧಿ ನಿಗದಿಪಡಿಸಿದೆ.



ಮುಂದಿನ 2 ವರೆ ವರ್ಷಕ್ಕೆ ನಿಗದಿಯಾದ ಚುನಾವಣೆಯಾಗಿದೆ. ಚುನಾವಣೆಯನ್ನ  ಪ್ರಕ್ರಿಯಿಯೆನ್ನ ಕೆಲಸಮಯದ ವರೆಗೆ ತಹಶೀಲ್ದಾರ್ ಮುಂದೂಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕೈತಪ್ಪುವ ಭೀತಿಯಲ್ಲಿ ಕಾಂಗ್ರೆಸ್ ಪಕ್ಷವಿದ್ದುದ್ದರಿಂದ ಈ ರೀತಿ ಪ್ರತಿಭಟನೆ ನಡೆದಿದೆ.   


ಒಟ್ಟು 15 ಸ್ಥಾನವಿರುವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 6 ಸ್ಥಾನವಿದ್ದರೆ. ಕಾಂಗ್ರೆಸ್ 8 ಸ್ಥಾನದಲ್ಲಿದೆ.  ಒಬ್ಬ ಪಕ್ಷೇತರವಿದ್ದಾರೆ. ಆದರೆ ಬಿಜೆಪಿಯ ಸಂಸದ, ಶಾಸಕರು ಸೇರಿ 8 ಸ್ಥಾನ ಪಡೆಯಲಿದ್ದಾರೆ. ಒಂದು ವೇಳೆ ಬಿಜೆಪಿ ಪರಿಸ್ಥಿಯ ಲಾಭ ಪಡೆದುಕೊಂಡರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಒಂದು ಸ್ಥಾನ ಹೆಚ್ಚು ಕಮ್ಮಿಯಾದರೂ ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ಕೂರಲಿದೆ. 


ಶಾಸಕರು ಮತ್ತು ಸಂಸದರು ಇನ್ನೂ ಸ್ಥಳಕ್ಕೆ ಬಂದಿಲ್ಲ. ಇಬ್ಬರು ಬಾರದಿದ್ದರೆ. ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಈ ಬಾರಿ ಕುತೂಹಲ ಕೆರಳಿಸಿದೆ. 

ಶನಿವಾರ, ಆಗಸ್ಟ್ 24, 2024

ಗ್ರಂಥಾಲಯಗಳ ಮೇಲ್ವಿಚಾರಕರ ವೇತನದ ವ್ಯತ್ಯಾಸ ಮೊತ್ತವನ್ನು ಗ್ರಾಮ ಪಂಚಾಯಿತಿಗಳು ಭರಿಸುವ ಆದೇಶ ಖಂಡನೆಯ



ಸುದ್ದಿಲೈವ್/ಶಿವಮೊಗ್ಗ


ಗ್ರಂಥಾಲಯಗಳ ಮೇಲ್ವಿಚಾರಕರ ವೇತನದ ವ್ಯತ್ಯಾಸ ಮೊತ್ತವನ್ನು ಗ್ರಾಮ ಪಂಚಾಯಿತಿಗಳು ಬರಿಸುವ ಆದೇಶ ಖಂಡನೆಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಅನಿಲ್ ಆಗ್ರಹಿಸಿದ್ದಾರೆ. 


 ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯದ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲ್ವಿಚಾರಕರುಗಳಿಗೆ ವೇತನದ ವ್ಯತ್ಯಾಸ ಮೊತ್ತವನ್ನು ಗ್ರಾಮ ಪಂಚಾಯಿತಿಗಳು ಪಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು  ಆದೇಶಿಸಿದ್ದು ಖಂಡನಯವಾಗಿದೆ.  ಈ ಆದೇಶವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.


2023 24 ನೇ ಸಾಲಿಗೆ ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ 16,382 ರೂಪಾಯಿ 52 ಪೈಸೆಗಳು ಮತ್ತು ವ್ಯತ್ಯಾಸವಾಗುವ ತುಟಿ ಭತ್ಯೆ 1542 ಗಳನ್ನು 1924 52 ಪೈಸೆ ಗಳನ್ನು ಪಾವತಿಸಲು ಸರ್ಕಾರ ಆದೇಶಿಸಿದೆ ಅದರಂತೆ ಗ್ರಾಮ ಪಂಚಾಯಿತಿಗಳು ವಸೂಲಿ ಮಾಡುವ ಗ್ರಂಥಾಲಯ ಉಪಕರವನ್ನು ಜಿಲ್ಲಾ ಪಂಚಾಯತಿಗಳಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದು ಮತ್ತು ವೆಚ್ಚ ಮಾಡುವುದಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಹೇಳಿ ಆದೇಶಿಸಿರುವ ಆಯುಕ್ತರು ಗ್ರಂಥಾಲಯ ಉಪಕಾರದ ಮತ್ತು ಗ್ರಂಥಾಲಯ ಮೇಲ್ವಿಚಾರಕರ ವೇತನ ಪಾವತಿ ಮತ್ತು ಗ್ರಂಥಾಲಯದ ಇತರೆ ಚಟುವಟಿಕೆಗಳ ವೆಚ್ಚಗಳಿಗೆ ಸಾಲದೇ ಇರುವಂತಹ ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲದಿಂದ ಅಥವಾ ಗ್ರಾಮ ಪಂಚಾಯಿತಿಯ ರಾಜ್ಯ ಹಣಕಾಸು ಆಯೋಗದ ಅನುದಾನದಿಂದ ಗ್ರಂಥಾಲಯ ಮೇಲ್ವಿಚಾರಕರ ವೇತನ ಪಾವತಿ ಮತ್ತು ಗ್ರಂಥಾಲಯದ ಇತರೆ ಚಟುವಟಿಗಳ ವೆಚ್ಚಗಳಿಗೆ ಅಗತ್ಯವಿರುವಷ್ಟು ಮೊತ್ತವನ್ನು ಜಿಲ್ಲಾ ಪಂಚಾಯಿತಿಗಳಲ್ಲಿ ತೆರೆಯಲಾದ ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮಾ ಮಾಡತಕ್ಕದ್ದು ಎಂದು ಆದೇಶವಾಗಿದೆ. 


ಅದರಂತೆ ಆದ್ದರಿಂದ ಪ್ರತಿ ಮಾಹಿಯ ಗ್ರಾಮ ಪಂಚಾಯಿತಿಯಿಂದ 2023-24ನೇ ಸಾಲಿಗೆ ಸಂಬಂಧಿಸಿದಂತೆ 6,000 ಮತ್ತು ಪ್ರಸಕ್ತ ಸಾರಿಗೆ ಸಂಬಂಧಿಸಿದಂತೆ ಆಗಸ್ಟ್ 2024ರ ವರೆಗೆ 6000 ಒಟ್ಟೂರು 12,000 ಮತದ ಉಪಕರವನ್ನು ಸಂಬಂಧಿತ ಖಾತೆಯ ಕಡ್ಡಾಯವಾಗಿ ಜಮೆ ಮಾಡುವಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳು ಸೂಚಿಸಿದ್ದಾರೆ. 


ತಾಲೂಕಿನ ಶೇಕಡ 90% ಗ್ರಾಮ ಪಂಚಾಯತಿಗಳು ಸ್ವಂತ ಸಂಪನ್ಮೂಲವಿಲ್ಲದೆ ಆಡಳಿತಾತ್ಮಕ ವೆಚ್ಚವನ್ನು ಬಯಸಲಾಗದೆ ಹೈರಾಣಾಗಿದ್ದಾರೆ ಇದರೊಂದಿಗೆ ಈ ಆದೇಶ ಗ್ರಾಮ ಪಂಚಾಯಿತಿಯ ಆಡಳಿತವನ್ನು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಪಂಚಾಯಿತಿಗಳ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಗ್ರಂಥಾಲಯದ ಮೇಲ್ವಿಚಾರಕರ ವೇತನದ ವ್ಯತ್ಯಾಸ ಮೊತ್ತವನ್ನು ಬಯಸುವ ಪರಿಸ್ಥಿತಿಯಲ್ಲಿಲ್ಲ ಆದ್ದರಿಂದ ಈ ಕೂಡಲೇ ಈ ಆದೇಶವನ್ನು ಹಿಂಪಡಬೇಕೆಂದು ಒತ್ತಾಯಿಸಲಾಗುತ್ತಿದೆ. 


ತಾಲೂಕಿನ ಯಾವ ಗ್ರಾಮ ಪಂಚಾಯತಿಗಳು ಈ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಅಧಿಕಾರಿಗಳ ಮೂಲಕ ಒತ್ತಡ ಏರಿಯಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ

ಬುಧವಾರ, ಆಗಸ್ಟ್ 21, 2024

ಪತ್ರಕರ್ತರ ಮೇಲೆ ಇನ್ ಸ್ಪೆಕ್ಟರ್ ಅಶ್ವಥ್ ಗೌಡ ದರ್ಪ



ಸುದ್ದಿಲೈವ್/ತೀರ್ಥಹಳ್ಳಿ


ಪತ್ರಕರ್ತನ ಮೇಲೆ ತೀರ್ಥಹಳ್ಳಿ ಪಿಎಸ್ಐ ಅಶ್ವಥ್ ಗೌಡ ದರ್ಪ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲಾ ಎಸ್ಪಿ ಭೇಟಿ ನೀಡಿದ ವೇಳೆಯಲ್ಲೇ ಸ್ಥಳೀಯ ಪೊಲೀಸರು ಅಟ್ಟಹಾಸ ಮೆರೆದಿದ್ದಾರೆ. 


ತೀರ್ಥಹಳ್ಳಿಗೆ ಎಸ್ಪಿ ಭೇಟಿ ನೀಡಿದ್ದಾರೆ.  ಸ್ಟೇಷನ್‌ಗೆ ತೆರಳುವಾಗ ದಾರಿಯಲ್ಲಿ ಜನಸಂದಣಿಯಾಗಿದೆ. ನಿಯಂತ್ರಿಸುವ ಭರಾಟೆಯಲ್ಲಿ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಪತ್ರಕರ್ತರನ್ನ ಅವ್ಯಾಚ್ಯ ಶಬ್ದಗಳ ಪದ ಬಳಕೆ ಮಾಡಿದ್ದಾರೆ. 


ಸಾರ್ವಜನಿಕರಿಗೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ಧಗಳಲ್ಲಿ  ಇನ್ಸ್‌ಪೆಕ್ಟರ್‌ ಅವ್ಯಾಚ್ಯಶಬ್ದಗಳನ್ನ ಬಳಸುತ್ತಿರುವುದನ್ನ ಪತ್ರಕರ್ತ ವಿ ನಿರಂಜನ್ ಈ ದೃಶ್ಯಾವಳಿಗಳನ್ನ  ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ‘ಪ್ರಜಾವಾಣಿ’ಯ ತೀರ್ಥಹಳ್ಳಿ ತಾಲೂಕು ಅರೆಕಾಲಿಕ ವರದಿಗಾರ ನಿರಂಜನ್  ವಿಡಿಯೋ ಡಿಲೀಟ್‌ ಮಾಡುವಂತೆ ಇನ್ಸ್‌ಪೆಕ್ಟರ್, ಜೀಪು ಚಾಲಕ ಸಿಬ್ಬಂದಿಯಿಂದ ಬೆದರಿಕೆ ಹಾಕಿದ್ದಾನೆ. 


ಬಳಿಕ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಮಯದಲ್ಲಿ ದೈಹಿಕ ಹಲ್ಲೆಗೂ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಮುಂದಾಗಿದ್ದಾರೆ. ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ತಿಳಿದು ಬಂದಿದೆ. ಸದ್ಯ ಠಾಣೆಯ ಮುಂದೆ  ತೀರ್ಥಹಳ್ಳಿಯ ಪತ್ರಕರ್ತರು ಧರಣಿಗೆ ಮುಂದಾಗಿದ್ದಾರೆ. 


ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆಯೂ ಸುದ್ದಿಲೈವ್ ನ್ಯೂಸ್ ವೆಬ್ ಪೇಜ್ ನ್ನ ತಡೆದು ವಾಪಾಸ್ ಕಳುಹಿಸಿದ್ದ ಅಶ್ವಥ್ ಗೌಡ ಪತ್ರಕರ್ತರು ಸುದ್ದಿ ಮಾಡಲು ಬಿಡಿ ಎಂದು ಕೇಳಿದರೂ ಬಿಟ್ಟಿರಲಿಲ್ಲ. ಖಡಕ್ ಅಧಿಕಾರಿ ಎನಿಸಿಕೊಳ್ಳಬೇಕೆಂಬ ಭ್ರಮೆಯಲ್ಲಿ ಇಂದು ಈ ರೀತಿ ನಡೆದು‌ಕೊಂಡಿರಬಹುದು.