ಡಾ.ಧನಂಜಯ ಸರ್ಜಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಡಾ.ಧನಂಜಯ ಸರ್ಜಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 12, 2024

ನೂತನ ಶಾಸಕ ಡಾ.ಸರ್ಜಿಗೆ 47 ರ ಸಂಭ್ರಮ

 



ಸುದ್ದಿಲೈವ್/ಶಿವಮೊಗ್ಗ


ನೂತನವಾಗಿ ರಾಜಕೀಯಕ್ಕೆ ಕಾಲಿಟ್ಟ ಶಾಸಕ ಡಾ.ಧನಂಜಯ್ ಸರ್ಜಿ ಗೆ ಇಂದು 47 ರ ಸಂಭ್ರಮ, ರಾಜಕೀಯದಲ್ಲಿ ಕಿರಿಯ ವಯಸ್ಸಿಗೆ ಪ್ರವೇಶ ಮಾಡಿರುವ ಡಾಕ್ಟರ್ ಅವರ ಹುಟ್ಟುಹಬ್ಬವನ್ನ ಅವರ ಅಭಿಮಾನಿ ಬಳಗ ಸರಳವಾಗಿ ಆಚರಿಸಲಾಗಿದೆ. 


46 ವಸಂತಗಳನ್ನ ಕಳೆದು 47ರ ವಸಂತಕ್ಕೆ ಕಾಲಿಟ್ಟಿರುವ ಡಾ.ಸರ್ಜಿ ಅವರ ವೈದ್ಯಕೀಯ ಜೀವನ, ರಾಜಕೀಯ ಜೀವನ ಅತ್ಯಂತ ಸುಲಭವಾಗಿರಲಿಲ್ಲ. ಮಿಡ್ಲಕ್ಲಾಸ್ ಕುಟುಂಬದಲ್ಲಿ ಹುಟ್ಟಿಬೆಳದ ಸರ್ಜಿ ವೈದ್ಯಕೀಯ ಜೀವನದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ಹೆಸರು ವಾಸಿಯಾದವರು.  ಆದರೆ ಅವರ ರಾಜಕೀಯ ಜೀವನ ಸಹ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. 


ಎನಿವೇ...! ರಾಜಕೀಯ ಜೀವನದಲ್ಲಿಯೂ ಸರ್ಜಿ ಯಶಸ್ವಿಯಾಗಿ ಬೆಳೆದಿದ್ದಾರೆ.  ಡಾ.ಸರ್ಜಿ ಅವರ 47 ರ ಸಂಭ್ರಮವನ್ನ ಅವರ ಅಭಿಮಾನಿಗಳ ಬಳಗ ಅತ್ಯಂತ ಸರಳವಾಗಿ ಆಚರಿಸಿದೆ. ಬೆಳಿಗ್ಗೆ ವಿನೋಬ ನಗರದ ಶಿವಾಲಯದಲ್ಲಿ ದೇವರಿಗೆ ವಿಶೇಷ ಅಭಿಷೇಕ ಮಾಡಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. 


ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಪಹಾರದ ವ್ಯವಸ್ಥೆ



ಅದರಂತೆ, ಅಭಿಮಾನ ಬಳಗದವತಿಯಿಂದ ಡಾ.ಧನಂಜಯ ಸರ್ಜಿರವರ ಹುಟ್ಟುಹಬ್ಬದ ಪ್ರಯುಕ್ತ ಮೆಗನ್ ಆಸ್ಪತ್ರೆ ಆವರಣದಲ್ಲಿ ನೂರಾರು ಬಡ ಕೂಲಿ ಕಾರ್ಮಿಕರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ನೂರಾರು ಬಡ ರೋಗಿಗಳಿಗೆ ಉಪಹಾರ ಹಂಚಲಾಗಿದೆ.  


ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಪ್ರಮುಖರದ ಸಂದೀಪ್ ಬೇಡರ ಹೊಸಳ್ಳಿ ಹರೀಶ , ಮಧು ,ಪ್ರಕಾಶ ಕೃಷ್ಣಮೂರ್ತಿ ಕಿಟ್ಟ ,ಮನು ಚನ್ನಬಸಪ್ಪ, ಲೋಹಿತ್, ನಿಶಾಂತ್, ಶರತ್, ಶಮಂತ ಅಭಿಲಾಶ್, ನಿಖಿಲೇಶ್, ಪ್ರವೀಣ್ ಗಾಮನಗದ್ದೆ, ಜೀವನ್ ಸವಿತಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು

ಬುಧವಾರ, ಸೆಪ್ಟೆಂಬರ್ 11, 2024

ವಿಧಾನ ಪರಿಷತ್ತಿನ ಶಾಸಕ ಡಾ.ಧನಂಜಯ ಸರ್ಜಿ ತೀವ್ರ ಖಂಡನೆ



ಸುದ್ದಿಲೈವ್/ಶಿವಮೊಗ್ಗ 


ಉಡುಪಿ ಜಿಲ್ಲೆ ಕುಂದಾಫುರ ತಾಲ್ಲೂಕಿನ ಶಿಕ್ಷಕರೊಬ್ಬರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಮಣಿಪಾಲದಲ್ಲಿ ಪ್ರತಿಭಟಿಸಿದ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ 11 ಮುಖಂಡರ ಮೇಲೆ ಕೇಸ್ ದಾಖಲಿಸಿರುವುದನ್ನು ವಿಧಾನ ಪರಿಷತ್ತಿನ ಶಾಸಕ ಡಾ.ಧನಂಜಯ ಸರ್ಜಿ ಅವರು ತೀವ್ರವಾಗಿ  ಖಂಡಿಸಿದ್ದಾರೆ. 


ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಹೋರಾಟ ಮಾಡುವ ಹಕ್ಕಿದೆ. ಪ್ರತಿಭಟನೆಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಸರ್ಕಾರ ಬಂದು ಕೇವಲ 16 ತಿಂಗಳುಗಳ ಒಳಗೆ ಸಾಲು ಸಾಲು ಭ್ರಷ್ಟಾಚಾರ ಮಾಡಿ ನಾಡಿನ ಜನತೆಯ ಆಕ್ರೋಶಕ್ಕೆ ಕಾರಣರಾಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರ, ಇದೀಗ ಒಬ್ಬ ಪ್ರಾಮಾಣಿಕ ಶಿಕ್ಷಕನ ಮೇಲೆ ಗದಾಪ್ರಹಾರ ಮಾಡುತ್ತಿದೆ. ಅದನ್ನು ಪ್ರಶ್ನಿಸಿಲು ಹೋದರೆ ಎಫ್.ಐ.ಆರ್ ದಾಖಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. 


ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಇತ್ತೀಚೆಗೆ ಮಣಿಪಾಲದಲ್ಲಿ ಪ್ರತಿಭಟಿಸಿದ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ 11 ಮುಖಂಡರ ಮೇಲೆ ಕೇಸ್ ದಾಖಲಿಸಿರುವುದು ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಕ್ಕೆ ಅವಕಾಶವಿಲ್ಲ. ಶಿಕ್ಷಕರ ಸೇವೆ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವೇ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಬಳಿಕ ಮತೀಯವಾದಿಗಳ ಒತ್ತಡಕ್ಕೆ ಮಣಿದು ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ, 


ಪ್ರಜಾಪ್ರಭುತ್ವದಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು, ಧ್ವನಿ ಎತ್ತುವುದು ಮೂಲ ಹಕ್ಕು. ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ನಾನಾ ಹಗರಣಗಳಿಂದಾಗಿ ಸರ್ಕಾರದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಅಲ್ಲದೇ ಅತಿವೃಷ್ಟಿಯಿಂದ ಸಂತ್ರಸ್ತರ ನೆರವಿಗೂ ಬಂದಿಲ್ಲ, ಇದು ನಿಜಕ್ಕೂಖಂಡನೀಯ. 11 ಮಂದಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ತಕ್ಷಣವೇ ವಾಪಾಸು ಪಡೆಯಬೇಕು. ವಾಪಾಸು ಪಡೆಯದಿದ್ದಲ್ಲಿ ಮುಂದಿನ ಹೋರಾಟಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಡಾ.ಧನಂಜಯ ಸರ್ಜಿ ಅವರು ಎಚ್ಚರಿಸಿದ್ದಾರೆ.

ಸೋಮವಾರ, ಸೆಪ್ಟೆಂಬರ್ 2, 2024

ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದು ಅವೈಜ್ಞಾನಿಕ


 

ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನ ಜೀವನದಿಯಾದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವುದು ಅವೈಜ್ಞಾನಿಕವಾಗಿದ್ದು, ಇದನ್ನು ಕೈ ಬಿಡಬೇಕು ಎಂದು ಆನಂದಪುರಂ ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಆಗ್ರಹಿಸಿದರು. 


ನಗರದ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಗುರು ಬಸವ ಅಧ್ಯಯನ ಪೀಠ ಬೆಕ್ಕಿನಕಲ್ಮಠದಲ್ಲಿ ಭಾನುವಾರ  ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಆತಿಥ್ಯದೊಂದಿಗೆ ಹಮ್ಮಿಕೊಂಡಿದ್ದ ಶ್ರಾವಣ ಚಿಂತನ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಕಳೆದ 45 ವರ್ಷಗಳಿಂದ ಶ್ರಾವಣ ಮಾಸ ಆಚರಣೆಯನ್ನು ನಡೆಸಿಕೊಂಡು ಬರುತ್ತಿದೆ. ಸ್ಮರಣೀಯ ಸಾಧಕರು, ಮೌಲಿಕ ಚಿಂತನಾ ಉಪನ್ಯಾಸ ಮಾಲಿಕೆಯು ಮನೆ-ಮನಗಳಲ್ಲಿ ಇಂತಹ ಶ್ರಾವಣ ಚಿಂತನ ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ಅವಶ್ಯಕತೆ ಇದೆ ಎಂದು ಹೇಳಿದರು. 


ಅಂತರಂಗ ಶುದ್ಧಿಗೋಸ್ಕರ  ಚಿಂತೆನಗಳು, ಕೀರ್ತನೆಗಳು,ಪುರಾಣ, ಪುಣ್ಯ ಕತೆಗಳನ್ನು ಈ ಮಾಸದಲ್ಲಿ ಹೇಳುವ ಮತ್ತು ಕೇಳುವ ರೂಢಿ ಬಹಳಷ್ಟು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಸದ್ವಿಚಾರಗಳನ್ನು ಮೈ-ಮನಗಳಿಗೆ ತುಂಬುವ ಮೂಲಕ ಆಂತರ್ಯದ ಕಲ್ಮಶವನ್ನು ತೊಳೆಯುವ ಮಾಸವೇ ಶ್ರಾವಣ ಮಾಸ ಪ್ರತಿಯೊಬ್ಬರೂ ಸದ್ವಿಚಾರಗಳನ್ನುಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಯುವ ಉದ್ಯಮಿ ಹರ್ಷ ಬಾಸ್ಕರ್ ಕಾಮತ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ , ಪರಂಪರೆಗಳು ಉಳಿಯಬೇಕಾದರೆ ಇಂತಹ ಧಾರ್ಮಿಕ ಚಿಂತನಾ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಸನ್ನಡತೆ, ಆಚಾರ- ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. 

 

 ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು, ದಕ್ಷಿಣ ಪ್ರಾಂತ ಕಾರ್ಯವಾಹ ಪಟ್ಟಾಭಿರಾಮ್, ಜಿಲ್ಲಾ ಕೈಗಾರಿಕಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷರಾದ ಹರ್ಷ ಬಾಸ್ಕರ್ ಕಾಮತ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್, ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಪೊನ್ನಪ್ಪ, ಮುಖಂಡರಾದ ಅನಂತರಾಮ್  ಸೇರಿದಂತೆ ಪ್ರಮುಖರು ಹಾಜರಿದ್ದರು.