ಜಿಲ್ಲಾರಕ್ಷಣಾಧಿಕಾರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜಿಲ್ಲಾರಕ್ಷಣಾಧಿಕಾರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 31, 2024

ಇನ್ಮುಂದೆ ವಾಹನ ಇನ್ಸು ರೆನ್ಸ್ ಇಲ್ಲವೆಂದರೆ ಬೀಳುತ್ತೆ ಕೇಸ್!




ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲೆಯ ವಾಹನ ಸವಾರರಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮನವಿ ಮಾಡಿಕೊಂಡಿದ್ದಾರೆ. ಇನ್ಸುರೆನ್ಸ್ ಇಲ್ಲದ ವಾಹನ ಸವಾರರಿಗೆ ಸೆ.10 ಒಳಗೆ ಇನ್ಸುರೆನ್ಸ್ ಮಾಡಿಸಿಕೊಳ್ಳಲು ಕೋರಿದ್ದಾರೆ.


ಅನೇಕ ವಾಹನ ಅಪಘಾತಗಳಲ್ಲಿ ಇನ್ಸುರೆನ್ಸ್ ಇಲ್ಲದೆ ಚಲಾಯಿಸುತ್ತಿರುವುದು ಕಂಡು ಬಂದಿದ್ದು, ನೊಂದವರಿಗೆ ಪರಿಹಾರದ ಮೊತ್ತ ಸಿಗುತ್ತಿಲ್ಲ. ಕಾರಣ ಸೆ.10 ಒಳಗೆ ವಾಹನ ಸವಾರರು ಇನ್ಸುರೆನ್ಸ್ ಮಾಡಿಕೊಳ್ಳದಿದ್ದರೆ ಕೇಸ್ ಬೀಳಲಿದೆ

ಶುಕ್ರವಾರ, ಆಗಸ್ಟ್ 23, 2024

ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಷಯ ಸುಳ್ಳು-ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆಮಾಡಿ-ಎಸ್ಪಿ ಸ್ಪಷ್ಟನೆ

 


ಸುದ್ದಿಲೈವ್/ಶಿವಮೊಗ್ಗ


ವಾಟ್ಸಪ್ ಗಳಲ್ಲಿ ಗಾಳಿ ಸುದ್ದಿ ಹರಡುತ್ತಿದ್ದು ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂತಹ ಯಾವುದೇ ವ್ಯವಸ್ಥೆಯನ್ನ ಪೊಲೀಸ್ ಇಲಾಖೆ ಮಾಡುತ್ತಿಲ್ಲ.‌ ತುರ್ತು ಪರಿಸ್ಥಿತಿಗೆ 112 ಗೆ ಕರೆ ಮಾಡುವಂತೆ ಸ್ಪಷ್ಟನೆ ನೀಡಿದ್ದಾರೆ.


ವಾಟ್ಸಪ್ ಗಳಲ್ಲಿ ಹರಡುತ್ತಿರುವ ಸುದ್ದಿ ಏನು?


ಯಾವುದೇ ಮಹಿಳೆ ಒಂಟಿಯಾಗಿರುವಾಗ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮನೆಗೆ ಹೋಗಲು ವಾಹನ ಸಿಗದಿದ್ದಾಗ ಪೊಲೀಸ್ ಪಡೆ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದೆ. 


ಅವರು ಪೊಲೀಸ್ ಸಹಾಯವಾಣಿ ಸಂಖ್ಯೆಗಳು: 1091 ಮತ್ತು 7837018555 ಅನ್ನು ಸಂಪರ್ಕಿಸಿ ಮತ್ತು ವಾಹನಕ್ಕಾಗಿ ವಿನಂತಿಸಬಹುದು. ಅವರು 24x7 ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ PCR ವಾಹನ/SHO ವಾಹನವು ಅವಳನ್ನು ಸುರಕ್ಷಿತವಾಗಿ ಆಕೆಯ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು.  ದಯವಿಟ್ಟು ಈ ಸಂದೇಶವನ್ನು ನಿಮಗೆ ತಿಳಿದಿರುವ ಎಲ್ಲರಿಗೂ ಹರಡಿರಿ.

 
ಹೆಂಡತಿಯರು, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ಸಂಖ್ಯೆಗಳನ್ನು ಉಳಿಸಲು ಅವರನ್ನು ಕೇಳಿ.. ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಮಹಿಳೆಯರೊಂದಿಗೆ ಹಂಚಿಕೊಳ್ಳಿ .
 

ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ಅನ್ನು ಸಹ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ತಿಳಿದುಕೊಳ್ಳುತ್ತಾರೆ ಮತ್ತು ನಿಮಗೆ ಸಹಾಯ ಮಾಡುತ್ತಾರೆ. ಭಾರತದಾದ್ಯಂತ ಅನ್ವಯಿಸುತ್ತದೆ ಎಂದು ವಾಟ್ಸಪ್ ಗಳಲ್ಲಿ ಹರಡುತ್ತಿದೆ.


7837018555 ನಂಬರ್ ಗೆ ಕರೆ ಮಾಡಿದರೆ ಲೂದಿಯಾನ ಎಂದು ಬರುತ್ತದೆ. ಆದರೆ ಇಂತಹ ಯಾವುದೇ ವ್ಯವಸ್ಥೆಯನ್ನ ಶಿವಮೊಗ್ಗದಲ್ಲಿ ಮಾಡಿಲ್ಲ. ಯಾರಾದರೂ ಈ ರೀತಿ ಹೇಳಿಕೊಂಡು ವಾಹನಗಳು ಬಂದರೆ 112 ಗೆ ಕರೆ ಮಾಡಬಹುದಾಗಿದೆ. ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಬೇಕೆಂದು ಶಿವಮೊಗ್ಗ ಪೊಲೀಸ್ ಇಲಾಖೆ ವಿಂತಿಸಿಕೊಂಡಿದೆ.