ಗಾಂಜಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಾಂಜಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 30, 2024

ದೊಡ್ಡದಾನವಂದಿ ರಸ್ತೆಯಲ್ಲಿ ಗಾಂಜಾ ಮಾರಾಟ-ಓರ್ವನ ಬಂಧನ



ಸುದ್ದಿಲೈವ್/ಶಿವಮೊಗ್ಗ


ನಿನ್ನೆ  ರಂದು ರಾತ್ರಿ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡದಾನವಂದಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ  ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಓರ್ವನನ್ನ ಬಂಧಿಸಲಾಗಿದೆ.


ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು  ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್, ಎಂ ರವರ ಮೇಲ್ವಿಚಾರಣೆಯಲ್ಲಿ, ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಕೆ ಪಟೇಲ್, ಮತ್ತು ಪಿಎಸ್ಐ ತೊಳಚಾನಾಯಕ್, ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಲಾಯಿತು. 


ಗಾಂಜಾ ಮಾರಾಟ ಮಾಡುತ್ತಿದ್ದ ಸೂಳೆಬೈಲಿನ ನಿವಾಸಿ ಸೈಯ್ಯದ್ ಸದ್ದಾಂ, 33  ವರ್ಷ, ಇವರನ್ನ ಬಂಧಿಸಲಾಯಿತು.  ಆರೋಪಿತರಿಂದ ಅಂದಾಜು ಮೌಲ್ಯ 3,500/- ರೂ ಗಳ 120  ಗ್ರಾಂ ತೂಕದ ಒಣ ಗಾಂಜಾ ಹಾಗೂ ಅಂದಾಜು ಮೌಲ್ಯ 25,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಯಿತು. ಆರೋಪಿತನ ವಿರುದ್ಧ ಕುಂಸಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0179/2024  ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬುಧವಾರ, ಆಗಸ್ಟ್ 28, 2024

ಆಯನೂರು ಪಿಯು ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ-ಇಬ್ಬರು ಬಂಧನ



ಸುದ್ದಿಲೈವ್/ಶಿವಮೊಗ್ಗ


ಆಯನೂರು ಪಿಯು ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಕುಂಸಿ ಪೊಲೀಸರು ಬಂಧಿಸಿ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.  


ಡಿವೈ ಎಸ್ಪಿ ಸುರೇಶ್ ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್ ರವರ ತಂಡ ಇಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಆಯನೂರು ಗ್ರಾಮದ ಪಿಯು ಕಾಲೇಜ್ ಕಾಂಪೌಂಡ್ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.‌


ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಅರೋಪಿ 1) ವಿಷ್ಣು ಪಿ ತಂದೆ ಪರಶುರಾಮ್ 26 ವರ್ಷ ವಾಸ  ಶಾಂತಿನಗರ ಹಾರ್ನಳ್ಳಿ ಗ್ರಾಮ ಶಿವಮೊಗ್ಗ ತಾಲೂಕು 2) ಸುನಿಲ್ ನಾಯಕ ತಂದೆ ರಾಮ ನಾಯಕ 30 ವರ್ಷ ಬಣಜಾರ ಜನಾಂಗ ವಾಸ ನಾರಾಯಣಪುರ ಗ್ರಾಮ  ಶಿವಮೊಗ್ಗ ತಾಲ್ಲೂಕು ಇಬ್ಬರನ್ನು ಬಂಧಿಸಿ  ಬಂಧಿತರಿಂದ ಸುಮಾರು 12500 ರೂಪಾಯಿ ಮೌಲ್ಯದ 350 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. 


ದಾಳಿಯಲ್ಲಿ ಶಾಂತರಾಜ್ ಪಿಎಸ್ಐ. ತೊಳಚ್ಚನಾಯಕ್ ಪಿಎಸ್ಐ ಸಿಬ್ಬಂದಿಗಳಾದ ಹಾಲಪ್ಪ. ಪ್ರಕಾಶ್. ಶಿವಪ್ಪ. ಶಶಿಧರ್ ನಾಯಕ್.  ವಿನಾಯಕ್. ಶಶಿ.  ಆದರ್ಶ, ರವರು ಭಾಗಿಯಾಗಿದ್ದರು. 

ಸೋಮವಾರ, ಆಗಸ್ಟ್ 26, 2024

ಸುದ್ದಿಲೈವ್ ನ ಫಲಶೃತಿ-ಗಾಂಜಾ ಕಿಟ್ ಪೂರೈಕೆ

 


ಸುದ್ದಿಲೈವ್/ಶಿವಮೊಗ್ಗ


ನಿನ್ನೆ ಭದ್ರಾವತಿಯಲ್ಲಿ ಗಾಂಜಾ ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದ, ಆಸ್ಪತ್ರೆಗಳಲ್ಲಿನ ಗಾಂಜಾ ಕಿಟ್ ನ ಕೊರತೆಯ ಬಗ್ಗೆ ಮೆಗ್ಗಾನ್ ನ ಡಿಎಸ್ ಸ್ಪಂಧಿಸಿದ್ದಾರೆ. ಮುಂದಾಗಬಹುದಿದ್ದ ಮುಜುಗರದಿಂದ ಪಾರು ಮಾಡಿದ್ದಾರೆ.


ನಿನ್ನೆ ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಪ್ರಕರಣದಲ್ಲಿ ಇಬ್ಬರು ಯುವಕರನ್ನ ಗ್ರಾಮಸ್ಥರು 112 ಗೆ ಹಿಡಿದುಕೊಟ್ಟಿದ್ದರು. ಇದೇ ಆರೋಪಿಗಳನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಭದ್ರಾವತಿಯಲ್ಲೂ ಕಿಟ್ ಖಾಲಿಯಾಗಿತ್ತು.


ಇದರಿಂದ ಭದ್ರಾವತಿಯಿಂದ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿತ್ತು. ಒಬ್ಬರಿಗೆ ಪಾಸಿಟಿವ್ ಬಂದಿತ್ತು. ಮತ್ತೊಬ್ಬನಿಗೆ ಗಾಂಜಾ ಪತ್ತೆ ಮಾಡಲು ಕಿಟ್ ಕೊರತೆಯಾಗಿತ್ತು. ಈ ಘಟನೆಯ ಮೇಲೆ ನಿನ್ನ ಸುದ್ದಿಲೈವ್ ಮೆಗ್ಗಾನ್ ನಲ್ಲಿ ಗಾಂಜಾ ಪತ್ತೆ ಮಾಡುವ ಕಿಟ್ ಖಾಲಿಯಾಗಿದೆ. ಡಾ.ಸುರಗೀಹಳ್ಳಿಯವರು ನೀಡಿದ್ದ ಕಿಟ್ ಖಾಲಿಯಾಗಿದೆ.


ಹೊಸದಾಗಿ ಡಿಹೆಚ್ ಒ ಆಗಿ ಬಂದ ಡಾ.ನಟರಾಜ್ ನಾಲ್ಕು ತಿಂಗಳು ಕಳೆದರೂ ಒಂದು ಕೊಟ್ಟಿಲ್ಲ ಎಂದು ಸುದ್ದಿ ಮಾಡಲಾಗಿತ್ತು. ಸುದ್ದಿಯ ಬೆನ್ನಲ್ಲೇ ಸ್ಪಂಧಿಸಿದ ಡಾ.ಸಿದ್ದನಗೌಡ 8 ಸಾವಿರ ಕಿಟ್ ಗಳಿಗೆ ಆರ್ಡರ್ ಮಾಡಿದ್ದಾರೆ. ಗುರುವಾರದ ಒಳಗೆ ಕಿಟ್ ಪೂರೈಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ತಾತ್ಕಾಲಿಕ ಕಿಟ್ ನ್ನ ತರಲಾಗಿದೆ ಎಂದು ತಿಳಿಸಿದ್ದಾರೆ. ಇದು ಸುದ್ದಿಲೈವ್ ನ ಫಲಶೃತಿಯಾಗಿದೆ.

ಭಾನುವಾರ, ಆಗಸ್ಟ್ 25, 2024

ಒಂದು ಗಾಂಜಾ ಪ್ರಕರಣ-ಇಡೀ ಆರೋಗ್ಯ ಇಲಾಖೆಯ ಗುಟ್ಟನ್ನೇ ಬಿಚ್ಚಿಟ್ಟಿತು!




ಸುದ್ದಿಲೈವ್/ಭದ್ರಾವತಿ


ತಾಲೂಕಿನ ಅರಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 



ಅರಹಳ್ಳಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸಿತ್ತಿರುವುದನ್ನ ಗಮನಿಸಿದ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬರನ್ನ ಹಿಡಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನ ಗ್ರಾಮಸ್ಥರು ಹಿಡಿದು ಮತ್ತೆ ಪೊಲೀಸರಿಗೆ ನೀಡಿದ್ದಾರೆ. ಇದಲ್ಲಿ ಜಬೀ (19) ಎಂಬ ಯುವಕನಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. 


ಅನ್ವರ್ ಕಾಲೋನಿಯ ಮೊಹಮದ್ ಜಬೀಗೆ ಗಾಂಜಾ ಪಾಸಿಟಿವ್ ಬಂದಿದೆ. ಅಣ್ಣನಗರದ ಸಂಜಯ್(19), ಮತ್ತೀರ್ವ ಓಡಿಹೋಗಿದ್ದಾನೆ. 


ಮೆಗ್ಗಾನ್ ಮತ್ತು ಭದ್ರಾವತಿ ಅಸ್ಪತ್ರೆಗಳಲ್ಲಿ ಕಿಟ್ ಖಾಲಿಯಾಗಿದೆಯಾ?


ಗಾಂಜಾ ಸೇವಿಸಿದವರನ್ನ ಪತ್ತೆಹಚ್ಚುವ ಕಿಟ್ ಖಾಲಿಯಾಗಿದೆಯಾ ಎಂಬ ಅನುಮಾನಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಿಟ್ ಖಾಲಿಯಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. 


ಸರಿ ಎಂದು ಮೆಗ್ಗಾನ್ ಗೆ ಇಬ್ಬರು ಯುವಕರನ್ನ ಕರೆದುಕೊಂಡು ಬಂದಿದ್ದಾರೆ. ಇಬ್ಬರಲ್ಲಿ ಒಬ್ಬನಿಗೆ ಪರೀಕ್ಷಿಸಲಾಗಿದೆ. ಒಬ್ಬನಿಗೆ ಪಾಸಿಟಿವ್ ಬಂದಿದೆ. ಇನ್ನೊಬ್ಬನಿಗೆ ಪರೀಕ್ಷಿಸಲು ಕಿಟ್ ಖಾಲಿಯಾಗಿದೆ.


ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ ಜಿಲ್ಲಾ ಸರ್ಜನ್ ಡಾ.ಸಿದ್ಷನಗೌಡ, ಗಾಂಜಾ ಪತ್ತೆಹಚ್ಚುವ ಕಿಟ್ ಡಾ.ರಾಜೇಶ್ ಸುರಗೀಹಳ್ಳಿಯವರು 2000 ಸಾವಿರ ಕಿಟ್ ಕೊಟ್ಟಿದ್ದರು. 2000 ಕಿಟ್ ಗಳು ಖಾಲಿಯಾಗಿವೆ. ವಾರಕ್ಕೆ 4-5 ಜನರಿಗೆ ಮೆಗ್ಗಾನ್ ನಲ್ಲಿ ಕಿಟ್ ಖಾಲಿಯಾಗುತ್ತದೆ ಎಂದರು. 


ಗಾಂಜಾ ಪತ್ತೆ ಮಾಡುವ ಕಿಟ್ ನ್ನ  ಮೆಡಿಸಿನ್ ನಲ್ಲಿ ತರಿಸಿಕೊಳ್ಳಲು ಅವಕಾಶವಿಲ್ಲ. ಇದನ್ನ ಜಿಲ್ಲಾ ಆರೋಗ್ಯ ಇಲಾಖೆ ತರಸಿಕೊಡಬೇಕು. ಇಲ್ಲಾ ಪೊಲೀಸ್ ಇಲಾಖೆ ಕೊಡಬೇಕು. ಒಬ್ಬನಿಗೆ ಗಾಂಜಾ ಪತ್ತೆ ಮಾಡಲು 350-400 ಖರ್ಚಾಗಲಿದೆ. ಈಗಿನ ಡಿಹೆಚ್ ಒ ಅವರು ಒಂದು ಕಿಟ್ ನ್ನೂ ಮೆಗ್ಗಾನ್ ಗೆ ಕೊಡಿಸಿಲ್ಲ ಎಂಬ ಮಾತು ಕೇಳಿ ಬಂದಿದೆ. ಇನ್ನು ಇದಕ್ಕೆ ಹೇಗೆ ಪರಿಹಾರ ಸಿಗಲಿದೆ ಕಾದು ನೋಡಬೇಕು.  

ಚೊರಡಿಯ ಹಳೇ ಸೇತುವೆ ಮೇಲೆ ಗಾಂಜಾ ಸೇವನೆ-ಇಬ್ಬರು ಅರೆಸ್ಟ್




ಸುದ್ದಿಲೈವ್/ಶಿವಮೊಗ್ಗ


ಚೋರಡಿಯ ಹಳೇ ಸೇತುವೆ ಮೇಲೆ ಗಾಂಜಾ ಸೇವನೆಗೆ ಮುಂದಾಗಿದ್ದ ಇಬ್ಬರನ್ನ ಬಂಧಿಸಿ 4000 ರೂ. ಮೌಲ್ಯದ 130 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.


ಡಿವೈಎಸ್ಪಿ ಸುರೇಶ್ ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್ ರವರ ತಂಡ ಇಂದು ಸಂಜೆ ಚೋರಡಿ ಗ್ರಾಮದ ಹಳೆ ಸೇತುವೆ ಮೇಲೆ ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ ಇಬ್ಬರನ್ನ  ಬಂಧಿಸಲಾಗಿದೆ.          


ಬಂಧಿತರಿಂದ ಸುಮಾರು 4000 ರೂಪಾಯಿ ಮೌಲ್ಯದ 130 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿರುತ್ತದೆ.... ದಾಳಿಯಲ್ಲಿ ಶಾಂತರಾಜ್ ಪಿಎಸ್ಐ. ತೊಳಚ್ಚನಾಯಕ್ ಪಿಎಸ್ಐ ಸಿಬ್ಬಂದಿಗಳಾದ ಹಾಲಪ್ಪ. ಪ್ರಕಾಶ್. ಶಶಿಧರ್ ನಾಯಕ್. ಮಂಜುನಾಥ್ . ವಿನಾಯಕ್. ಶಶಿ. ಬಸವರಾಜ್ ರಾಘು. ಆದರ್ಶ, ಶಿವಪ್ಪ ರವರು ಪಾಲ್ಗೊಂಡಿರುತ್ತಾರೆ