ಕುಂಸಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುಂಸಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 3, 2024

ಬೈಕ್ ನಡುವೆ ಮುಖಾಮುಖಿ ಡಿಕ್ಕಿ-ಓರ್ವ ಸಾವು




ಸುದ್ದಿಲೈವ್/ಶಿವಮೊಗ್ಗ


ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿಯಿಂದ ಓರ್ವ ಸವಾರ ಮೃತಪಟ್ಟಿರುವ ಘಟನೆ ಕುಂಸಿ ಠಾಣೆ ವ್ಯಾಪ್ತಿಯ ಕಲ್ಲುಕೊಪ್ಪದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮಂಜುನಾಥ್ (೨೫) ಮೃತಪಟ್ಟಿದ್ದಾರೆ. ತಲೆಗೆ ತೀವ್ರ‌ಪೆಟ್ಟು ಬಿದ್ದ ಇವರನ್ನು‌ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಶನಿವಾರ, ಆಗಸ್ಟ್ 31, 2024

ದೀಪಕ್ ಎಂಎಸ್ ಕುಂಸಿ ಪೊ.ಠಾಗೆ, ಕುಂಸಿಯಲ್ಲಿದ್ದ ಹರೀಶ್ ಪಟೇಲ್ ಕೋಟೆಗೆ ವರ್ಗ

 


ಸುದ್ದಿಲೈವ್/ಶಿವಮೊಗ್ಗ


ಮೊನ್ನೆ ತಾನೆ 15 ಜನ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮುಂದಯವರೆದ ಬೆನ್ನಲ್ಲೇ ಇಂದು ಮತ್ತೆ 12 ಜನ ರಾಜ್ಯದ ವಿವಿಧ ಪೊಲೀಸ್ ಇನ್ ಸ್ಪೆಕ್ಟರ್ ವರ್ಗವಾಗಿದ್ದಾರೆ. 


ಸೆನ್ ಪೊಲೀಸ್ ಠಾಣೆಯಿಂದ ಸ್ಥಳ ನಿರೀಕ್ಷೆಯಲ್ಲಿದ್ದ ದೀಪಕ್ ಎಂ ಎಸ್ ಕುಂಸಿ ಪೊಲೀಸ್ ಠಾಣೆ ಪಿಐ ಆಗಿ ವರ್ಗವಾಗಿದ್ದಾರೆ. ಅದರಂತೆ ಕುಂಸಿ ಠಾಣೆ ಪಿಐ ಆಗಿದ್ದ ಹರೀಶ್ ಪಟೇಲ್ ಕೋಟೆ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ. 


ಎಸ್ ಬಿ ಆರ್ ಬಿಗೆ ವರ್ಗವಾಗಿದ್ದ ಶ್ರೀಕಾಂತ್ ಎಫ್ ತೋಟಗಿ ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಗೆ, ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿದ್ದ ಶೈಲ ಗಾಬಿ ಖಡೇ ಬಜಾರ್ ಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ರಮೇಶ್ ಜಿ.ಎನ್ ಡಿಸಿಆರ್ ಇ ಮೈಸೂರಿಗೆ


ಕರ್ನಾಟಕ ಲೋಕಾಯುಕ್ತದಲ್ಲಿದ್ದ ಆಂಜನೇಯ ನೀಲಪ್ಪ ಹರಿಜನ ಹಾವೇರಿ ಜಿಲ್ಲೆಯ ಹಾನಗಲ್ ವೃತ್ತಕ್ಕೆ, ಸಂಗಪ್ಪ ಎಂ ಶಿರಗುಪ್ಪಿ ಗದಗ ಜಿಲ್ಲೆ ಸೆನ್ ಠಾಣೆಯಿಂದ ವಿಜಯಪುರ ಸೆನ್ ಠಾಣೆಗೆ ವರ್ಗವಾಗಿದ್ದವರು, ಗದಗಿನ ಸೆನ್ ಠಾಣೆಯಲ್ಲೇ ಮುಂದು ವರೆಯಲಿದ್ದಾರೆ. 


ವಿಜಯಪುರ ಸೆನ್ ಠಾಣೆಯಿಂದ ಸ್ಥಳ ನಿರೀಕ್ಷಣೆಯಲ್ಲಿದ ರಮೇಶ್ ಸಿ ಅವಜಿ‌ ಅವರನ್ನ ವಿಜಯಪುರ ಸೆನ್ ಠಾಣೆಯಲ್ಲಿಯೇ ಪಿಐ ಆಗಿ ಮುಂದುವರೆಯಲಿದ್ದಾರೆ. ಹೊಸಪೇಟೆ ಸಂಚಾರ  ಪೊಲೀಸ್ ಠಾಣೆಯಲ್ಲಿದ್ದ ಶ್ರೀನಿವಾಸ ಚಂದ್ರಪ್ಪ ಮೇಟಿ ಅವರನ್ನ ಲೋಕಸಭೆ ಚುನಾವಣೆ ವೇಳೆ ಹುಬ್ಬಳ್ಳಿ-ಧಾರವಾಡ ನಗರ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಅಲ್ಲೇ‌ ಪಿಐಆಗಿ ಮುಂದುವರೆಯಲಿದ್ದಾರೆ. 


ರಾಜ್ಯ ಗುಪ್ತವಾರ್ತೆಯಲ್ಲಿದ್ದ ಹುಬ್ಬಳ್ಳಿ-ಧಾರವಾಡದ ಬೆಂಡೆಗೆರೆ ಪೊಲೀಸ್ ಠಾಣೆ ಪಿಐ ಆಗಿ, ರಾಧಕೃಷ್ಣ ಟಿ.ಎಸ್ ಹೊಸದಾಗಿ ಸೃಜನವಾದ ಜೆಪಿ ನಗರ ಪೊಲೀಸ್ ಠಾಣೆ ಪಿಐ ಆಗಿ, ಬೆಳಗಾವಿ ಡಿಎಸ್ ಬಿಯಿಂದ ಖಾನಾಪುರದ ಪಿಟಿಎಸ್ ಗೆ ವರ್ಗವಾಗಿದ್ದ ಬಜವರಾಜ್ ಭೋಜಪ್ಪ ಲಮಾಣಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ

ಶುಕ್ರವಾರ, ಆಗಸ್ಟ್ 30, 2024

ದೊಡ್ಡದಾನವಂದಿ ರಸ್ತೆಯಲ್ಲಿ ಗಾಂಜಾ ಮಾರಾಟ-ಓರ್ವನ ಬಂಧನ



ಸುದ್ದಿಲೈವ್/ಶಿವಮೊಗ್ಗ


ನಿನ್ನೆ  ರಂದು ರಾತ್ರಿ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡದಾನವಂದಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ  ಬೈಕ್ ನಿಲ್ಲಿಸಿಕೊಂಡು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಓರ್ವನನ್ನ ಬಂಧಿಸಲಾಗಿದೆ.


ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು  ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್, ಎಂ ರವರ ಮೇಲ್ವಿಚಾರಣೆಯಲ್ಲಿ, ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಕೆ ಪಟೇಲ್, ಮತ್ತು ಪಿಎಸ್ಐ ತೊಳಚಾನಾಯಕ್, ಹಾಗೂ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಲಾಯಿತು. 


ಗಾಂಜಾ ಮಾರಾಟ ಮಾಡುತ್ತಿದ್ದ ಸೂಳೆಬೈಲಿನ ನಿವಾಸಿ ಸೈಯ್ಯದ್ ಸದ್ದಾಂ, 33  ವರ್ಷ, ಇವರನ್ನ ಬಂಧಿಸಲಾಯಿತು.  ಆರೋಪಿತರಿಂದ ಅಂದಾಜು ಮೌಲ್ಯ 3,500/- ರೂ ಗಳ 120  ಗ್ರಾಂ ತೂಕದ ಒಣ ಗಾಂಜಾ ಹಾಗೂ ಅಂದಾಜು ಮೌಲ್ಯ 25,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಯಿತು. ಆರೋಪಿತನ ವಿರುದ್ಧ ಕುಂಸಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0179/2024  ಕಲಂ 20(ಬಿ), 8(ಸಿ) NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.