ಕಳುವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಳುವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 8, 2024

ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿ ಸರಣಿ ಮನೆ ಕಳ್ಳತನ -300 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂ ಕಳುವು



ಸುದ್ದಿಲೈವ್/ಶಿವಮೊಗ್ಗ


ಬಸವನಗುಡಿಯ ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿರುವ ಒಟ್ಟು ಐದು ಮನೆಯಲ್ಲಿ ಕಳವು ಪ್ರಕರಣ ನಡೆದಿದ್ದು ಒಂದು ಮನೆಗಳಲ್ಲಿ ಕಳುವಿನ ಯತ್ನ ನಡೆದಿದೆ. 


ಡಿಸಿ ಕಚೇರಿಯ ಡಿಸಿಪಿಎ ದೀಪಕ್, ಜಡ್ಜ ಚಾಲಕ ಪ್ರಕಾಶ್  ವಾರ್ತ ಇಲಾಖೆಯ ಭಾಗ್ಯ, ಡಿಸಿ ಕಚರಿಯಲ್ಲಿ ಎಸ್ ಡಿಎ ಸಂಧ್ಯ,  ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಸ್ಟೆನೋ ನಂದಿನಿ ಸೇರಿದಂತೆ 5 ಮನೆ ಕಳುವು  ಆಗಿದೆ. ಒಂದು ಮನೆ ಕಳುವಿನ ಯತ್ನ ನಡೆದಿದೆ. 



ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಗದು ಕಳುವಾಗಿದೆ. ಪ್ರಿಂಗರ್ ಪ್ರಿಂಟ್ಸ್, ಡಾಗ್ ಸ್ಕ್ವಾಡ್, ಸ್ಥಳಕ್ಕೆ ಡಿಎಆರ್ ವಾಹನ ಸ್ಥಳಕ್ಕೆ ಧಾವಿಸಿದೆ. ಸುಮಾರು ಮೂರು ಗಂಟೆಯ ವೇಳೆಗೆ ಸರಣಿ ಕಳವು ನಡೆದಿದೆ. 



ಎರಡು ಲಕ್ಷಕ್ಕೂ ಹೆಚ್ಚು  ಕ್ಯಾಶು,  ಮೂರು ಉಂಗುರ, ಬೆಳ್ಳಿ ಕಾಯಿನ್, 300 ಗ್ರಾಂ ಚಿನ್ನಾಭರಣ, ಕಳುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ಹಾಗೂ ಕೆಲ ಕೆಲಸದ ಮೇಲೆ ಊರಿಗೆ ಹೋದಾಗ ಕಳ್ಳತನ ನಡೆದಿದೆ. ದೀಪಕ್ ಅವರು  ಅತ್ತೆ ತೀರಿಕೊಂಡ ಪರಿಣಾಮ ಕೋಲಾರದ ಬಂಗಾರಪೇಟೆಗೆ ತೆರಳಿದ್ದರು. ಜಡ್ಜ್ ಪ್ರಕಾಶ್ ಅರಸೀಕೆರೆಗೆ ಹೋಗಿದ್ದರು. 



 ಅವರ ಮನೆಯಲ್ಲಿ ಒಂದು ಉಂಗುರ, ಎರಡು ಚೈನು ಹಾಗೂ 45 ಸಾವಿರ ನಗದು ಕಳುವಾಗಿದೆ. ಸಂಧ್ಯ ಅವರ ಮನೆಯಲ್ಲಿ 1.15 ಲಕ್ಷ ಕ್ಯಾಶ್ ಕಳುವಾಗಿದೆ. ಇಷ್ಟು ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಮತ್ತೊಂದಿಷ್ಟು ಮಾಹಿತಿಗಾಗಿ ಕಾಯಲಾಗುತ್ತಿದೆ. ವಾರ್ತ ಇಲಾಖೆ ಭಾಗ್ಯ ಅವರ ಮನೆಯಲ್ಲಿ ಕಳುವಿನ ಯತ್ನ ನಡೆದಿದೆ. 


ಕ್ವಾಟ್ರಸ್ ನ ಎದಿರಿನ ಮನೆಯಲ್ಲಿ ಸಿಸಿ ಟಿವಿ ಫೂಟೇಜ್ ದೊರೆತಿದ್ದು ಮೂವರು ಮುಸುಕುಧಾರಿಯಾಗಿ ಬಂದು ಐದು ಮನೆಯನ್ನ ಇಂಟರ್  ಲಾಕರ್ ಹೊಡೆದು ಕಳುವು ಮಾಡಲಾಗಿ. ಕಳುವಾದ ಮನೆಗಳ ಬೀರುವಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಅಗಿವೆ. 

ಮಂಗಳವಾರ, ಆಗಸ್ಟ್ 27, 2024

ಖಾಸಗಿ ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳುವು



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ನೆಹರೂ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ 3 ಗ್ರಾಂ 250 ಮಿಲಿಗ್ರಾಂ ಚಿನ್ನಾಭರಣ ಖರೀದಿಸಿದ್ದ ಮಹಿಳೆಯೋರ್ವರು ಶಿವಪ್ಪ ನಾಯಕ ವೃತ್ತಕ್ಕೆ ಬಂದು ಬಸ್ ಹೊಡಿದು ಪ್ರಯಾಣಿಸುವಾಗ ಚಿನ್ನಾಭರಣ ಕಳುವಾಗಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‌ 


ಆ.6 ರಂದು ಈ ಘಟನೆ ನಡೆದಿದೆ. ಚಿನ್ನ ಆಭರಣ ಖರೀದಿಸಿ ಗಾಂಧಿ ಬಜಾರ್ ನ ಶಿವಪ್ಪ ನಾಯಕ ಪ್ರತಿಮೆಯ ಬಸ್ ಸ್ಟಾಪ್ ನಿಂದ ಖಾಸಗಿ ನಗರ ಸಾರಿಗೆಯಲ್ಲಿ ಬಸ್ ಹತ್ತಿ ಸೀಟು ಹತ್ತಿ ಕುಳಿತಾಗ ಟಿಕೇಟ್ ಪಡೆಯಲು ಮುಂದಾಗ ಈ ಘಟನೆ ನಡೆದಿದೆ. 


ನಂತರ ಬೆಂಗಳೂರಿನಲ್ಲಿರುವ ಮಗಳಿಗೆ ಅನಾರೋಗ್ಯವಾದುದರಿಂದ ಮಗಳನ್ನ‌ನೋಡಿಕೊಂಡು ಬಂದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಶನಿವಾರ, ಆಗಸ್ಟ್ 24, 2024

ಕಳುವಾಗಿದ್ದ 4 ಹಸುಗಳು ಪತ್ತೆ-ಆರೋಪಿಗಳು ಅರೆಸ್ಟ್



ಸುದ್ದಿಲೈವ್/ಶಿರಾಳಕೊಪ್ಪ


ಫಾರಂ ಹೌಸ್ ನಲ್ಲಿದ್ದ 2.40 ಲಕ್ಷ ರೂ ಮೌಲ್ಯದ 4 ಹಸುಗಳನ್ನ ಪತ್ತೆ ಮಾಡುವಲ್ಲಿ ಶಿರಾಳಕೊಪ್ಪದ ಪೊಲೀಸರು ಯಶಸ್ವಿಯಾಗಿದ್ದಾರೆ. 


ದಿನಾಂಕಃ 09-08-2024  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ ಶ್ರೀ ಮೊಹಮದ್ ಆಲಿ ಖಾನ್, 34 ವರ್ಷ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳನ್ನು ಕಳುವು ಮಾಡಲಾಗಿತ್ತು.  ಬಿಎನ್ ಎಸ್ ಕಾಯ್ದೆ ಅಡಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 


ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಮಾಲಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆರವರ ಮಾರ್ಗದರ್ಶನದಲ್ಲಿ ಶಿಕಾರಿಪುರದ ಡಿವೈಎಸ್ಪಿ ಕೇಶವ್, ಸಿಪಿಐ ರುದ್ರೇಶ್ ರವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಪ್ರಶಾಂತ್ ಕುಮಾರ್ ಟಿ.ಬಿ.ರವರ ನೇತೃತ್ವದಲ್ಲಿ ಪಿಎಸ್ಐ ಪುಷ್ಪಾ,  ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್, ಟೀಕಪ್ಪ, ಪಿಸಿ ಸಲ್ಮಾನ್, ಕಾರ್ತಿಕ್, ಅಶೋಕ್  ಮತ್ತು  ಪ್ರೇಮಾ ಬಾಯಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 


ತನಿಖಾ ತಂಡವು ದಿನಾಂಕಃ 23-08-2024  ರಂದು ಪ್ರಕರಣದ ಆರೋಪಿ ಶಿವರಾಜ್ @ ಕುಮಾರ, 26 ವರ್ಷ, ಆರಿಕಟ್ಟೆ ಗ್ರಾಮ, ಹಿರೇಕೆರೂರು ತಾ॥, ಹಾವೇರಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 2,40,000/- ರೂಗಳ 04 ಹಸುಗಳನ್ನು ವಶಪಡಿಸಿಕೊಳ್ಳಲಾಗಿತ್ತು.‌ ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.