ಉದ್ಯೋಗ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉದ್ಯೋಗ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 23, 2024

ಚಂಪಕಸರಸಿನಲ್ಲಿ ಈಜಲು ಹೋಗಿ ಇಂಜಿನಿಯರ್ ಸಾವು



ಸುದ್ದಿಲೈವ್/ಶಿವಮೊಗ್ಗ


ಆನಂದಪುಂನ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ  ಎಂಜಿನಿಯರ್‌ ಮೃತಪಟ್ಟಿದ್ದಾನೆ. ಶಿವಮೊಗ್ಗದ ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ.


ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು. 


ಸ್ನೇಹಿತರೊಂದಿಗೆ ಈಜಾಡಲು ಬಂದ ಕುಶಾಲ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗುರುವಾರ, ಆಗಸ್ಟ್ 22, 2024

ಕೆರೆಗೆ ಇಳಿದ ದಳಪತಿ



ಸುದ್ದಿಲೈವ್/ಶಿಕಾರಿಪುರ


ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಖಾಸಗಿ ಬಸ್ಸ್ ಚುರ್ಚುಗುಂಡಿ-ಚಿಕ್ಕಜೋಗಿಹಳ್ಳಿ ಮದ್ಯ ಬರುವ ಹೆಗ್ಗೆರಿ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದಿದೆ.‌ ಸಣ್ಣಪುಣ್ಣ ಗಾಯಗಳಿಂದ ಪ್ರಯಾಣಿಕರು ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



ಕೆರೆ ತುಂಬಿಕೊಂಡಿದ್ದು ಸ್ವಲ್ಪ ಎಡವಟ್ಟಾಗಿದ್ದರೂ ಬಸ್ ಸಂಪೂರ್ಣ ಮುಳುಗುವ ಆತಂಕ ಎದುರಾಗಿತ್ತು.  ಪೂರ್ತಿ ಬೀಳದೆ ಬಸ್ ನ ಮುಂಭಾಗ ನೀರಿಗೆ ಇಳಿದಿದೆ.‌ 15 ವರ್ಷದಿಂದ ಕೆರೆ ಏರಿ ಎಷ್ಟು ಸರಿ ಮಾಡಿದರೂ  ಮಳೆಗಾಲದಲ್ಲಿ ಮಣ್ಣು ಕುಸಿಯುವುದರಿಂದ  ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಕೂಡ ಸಿಕ್ಕಿಲ್ಲ.


ಪ್ರತಿದಿನ ಇಲ್ಲಿ ಚಾಲಕರು ಮತ್ತು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಭಯ ಎದುರಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವಂತೆ ಸ್ಞತಳೀಯರು ಕೇಳಿಕೊಂಡಿದ್ದಾರೆ. 

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ-ಹೈಕೋರ್ಟ್ ಮೆಟ್ಟಿಲೇರುವುದಾಗಿ ಪತ್ನಿ ಕವಿತಾ ಹೇಳಿಕೆ


ಸುದ್ದಿಲೈವ್/ಶಿವಮೊಗ್ಗ


ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣವವನ್ನ ಹೆಚ್ಚು ತನಿಖೆ ನಡೆಸಬೇಕು ಎಂದು ಅವರ ಪತ್ನಿ ಕವಿತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 


ತನಿಖೆ ಸರಿಯಾಗಿ ನಡೆಸದಿದ್ದರೆ ಹೈಕೋರ್ಟ್ ಮೊರೆ ಹೋಗ್ತೀವಿ. ಸಿಬಿಐ ತನಿಖೆ ಆಗಬೇಕು ಅಂತಾ ಆಗ್ರಹಿಸುತ್ತೇನೆ. ಚಂದ್ರಶೇಖರ್ ಹಣ ತಿಂದಿಲ್ಲ. ಹಣ ತಿಂದಿದ್ದಾರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ನಾನು ಜೀವನ ನಡೆಸಲು ಪರದಾಡ್ತಿದ್ದೇವೆ.‌ನಮ್ಮ ತಾಯಿ ಮನೆಯಲ್ಲಿ ವಾಸ ಮಾಡ್ತಿದ್ದೇವೆ ಎಂದು ಹೇಳಿದರು. 


ಸರಕಾರದಿಂದ ಪರಿಹಾರ ಕೊಡ್ತೀವಿ ಅಂದ್ರು ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ.ತನಿಖೆ ನಡೆಸಲಿ, ನಮ್ಮ ಮನೆಯವರು ಹಣ ತಿಂದಿದ್ದಾರೋ ಇಲ್ವಾ ಹೊರಗೆ ಬರಲಿ. ಸರಕಾರ ಸರಿಯಾಗಿ ತನಿಖೆ ನಡೆಸಿಲ್ಲ. ನ್ಯಾಯಯುತವಾಗಿ ತನಿಖೆ ನಡೆಸಲಿ. ಕೇಸ್ ಕೊಟ್ಟವರು ನಾವೇ ನಮ್ಮ ಮನೆಯವರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌


ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಅವತ್ತು ಎಲ್ಲಾ ಮಾತನಾಡಿಸಿಕೊಂಡರು ಹೋದ್ರು, ಇದುವರೆಗೆ ಯಾರು ನಮ್ಮ ಮನೆ ಕಡೆ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.‌

ಮಠದಲ್ಲಿ ಚಿನ್ನದ ಪಾದುಕೆ ಕಳವು



ಸುದ್ದಿಲೈವ್/ಶಿವಮೊಗ್ಗ


ಕೂಡಲಿ ಮಠದ ಶಾರದಾಂಬೆ ದೇವಿಗೆ ಮಾಡಿಸಿರುವ ಚಿನ್ನದ ಪಾದುಕೆಗಳು ಕಳವಾಗಿದ್ದು ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ಮಠದ ರಮೇಶ್ ಹುಲ್ಮನಿಯವರು ದೂರು ದಾಖಲಿಸಿದ್ದಾರೆ. 


ಕೂಡ್ಲಿ ಶ್ರೀಮಠದಲ್ಲಿ ಪರಂಪರಗತವಾಗಿ ಬಂದಿರುವ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಯು (ಒಂದು ದೊಡ್ಡ ವಿ ಮುದ್ರೆ ಇನ್ನೊಂದು ಸಣ್ಣ ಮುದ್ರೆ ಜೊತೆಗೆ ಶ್ರೀ ಮನ್ನಾರಾಯಣ ಸ್ಮೃತಯ ಅನ್ನುವ ಬೆಳ್ಳಿಯ ಸೀಲು) ಸುರಕ್ಷಿತವಾಗಿ ಬಿರುವಿನಲ್ಲಿಡಲಾಗಿತ್ತು, ಆ.08 ರಂದು ಶ್ರೀಮಠದ ಭಕ್ತರೋರ್ವರು ಪೂಜೆಗೆ ಎಂದು ಬೀಗ  ಕೇಳಿದಾಗ ಪೀಠಾಧಿಪತಿಗಳಾದ ಶ್ರೀಮಹಾಸ್ವಾಮಿಗಳ ಬಳಿ ಇದ್ದ ಬೀಗವನ್ನು ಉಪಯೋಗಿಸಿ ತೆಗೆಯಲು ಹೋದಾಗ ಆ ಬೀಗವು ಬಳಸಲು ಬಾರದೆ ಇರುವುದು ಕಂಡು ಬಂದಿದೆ. 



ನಂತರ ಶ್ರೀ ಮಠದ ಅರ್ಚಕರು ಇದರ

ಬೀಗದ ಕೈ ಇಲ್ಲಿ ಇದೆ ಎಂದು ತಂದು ಕೊಟ್ಟಿರುತ್ತಾರೆ. ನಂತರ ರಮೇಶ್ ಹುಲಮನಿಯವರು ತಾವು ಬೀರುವನ್ನು ತೆಗೆದಾಗ ಸುವರ್ಣ ಪಾದುಕೆಯು ಇರಲಿಲ್ಲ.


ಕಳೆದ ವರ್ಷ ಜುಲೈ 23 ರಿಂದ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳವರು ಹಿಂದಿನ ಚಾರ್ತುಮಾಸ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತವಾಗಿ ದಾವಣಗೆರೆಯ ಶಾಖ ಮಠದಲಿ ಹಾಗೂ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗವನ್ನು ಒಡೆದಿದ್ದು ತಿಳಿದು ಬಂದಿದ್ದರಿಂದ ಹುಲಮನಿಯವರು ಮೂರನೇ ದಿನದಂದು ಮಠಕ್ಕೆ ತೆರಳಿ ಬೇರೆ ಬೀಗವನ್ನು ಹಾಕಿ ಖಾತ್ರಿ ಪಡಿಸಿಕೊಂಡು ಬಂದಿರುತ್ತಾರೆ, 


ಕಳೆದ ಎಂಟು ತಿಂಗಳಿಂದ ಶ್ರೀಗಳು ದಾವಣಗೆರೆಯ ಶಾಖ ಮಠದಲ್ಲಿ ಇದ್ದಿದ್ದು ಈ ಮಠದಲ್ಲಿ ಯಾವುದೇ ಆಗು ಹೋಗುವ ವಿಚಾರ ತಮ್ಮ ಗಮನಕ್ಕೆ ಬಂದಿರುವುದಿಲ್ಲ. ನಂತರ ಚಾರ್ತುಮಾಸ ಕಾರ್ಯಕ್ರಮ ನಿಮಿತ್ತ ದಿನಾಂಕ:20/07/2024 ರಂದು ಶ್ರೀ ಮಠಕ್ಕೆ ಬಂದು ವಾಸ್ತವ್ಯವಿದ್ದರು. 


ಆಗ ಶಾರದಂಬ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕಿಗೆ ಪಾವತಿ ಮಾಡುವ ಸಮಯ ಮೀರಿದ್ದರಿಂದ ಸದರಿ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿ ಇದ್ದ ಬಿರುವಿನ ಬೀಗವನ್ನು ಕೊಟ್ಟಿರುತ್ತಾರೆ. ಆದರೆ ಆ ಬೀಗದ ಕೈಯಿಂದ ಬೀರು ತೆಗೆಯಲು ಆಗಿರುವುದಿಲ್ಲ. 


ಆಗ ಮಠದ ಆರ್ಚಕರಾದ ದತ್ತಾತ್ರಿಶಾಸ್ತ್ರಿ ರವರು ಈ ಬೀಗದ ಕೈಯಿಂದ ಬೀರು ಬೀಗ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಯನ್ನು ಕೊಟ್ಟರು ಅದೇ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಲಾಗಿದೆ. 


ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬಿರುವಿನ ಬೀಗವನ್ನು ತೆಗೆಸಿನೋಡಿದಾಗ ಬಿರುವಿನಲ್ಲಿಟ್ಟಿದ್ದ ಬಂಗಾರದ ಎರಡು ಪಾದುಕೆಗಳು ಕಾಣೆ ಆಗಿದ್ದು ಕಂಡು ಬಂದಿರುತ್ತದೆ. ನಂತರ ಎಲ್ಲಾರು ಹುಡುಕಾಡಿದರೂ ಅವು ಸಿಕ್ಕಿರುವುದಿಲ್ಲ ಈ ಬಗ್ಗೆ ಗುರುಗಳೊಂದಿಗೆ ಚರ್ಚಿಸಿ ತಡವಾಗಿ ಈದಿನ ಕಾಣೆಯಾಗಿರುವ ಸುಮಾರು ಅಂದಾಜು 1 ಕೆ.ಜಿ 50 ರಿಂದ 60 ಲಕ್ಷ ಮೌಲದ ಬಂಗಾರದ ಪಾದುಕೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಜೈಲಿನಿಂದಲೇ ಶಾಸಕರ ಮಗನ ಹತ್ಯೆಗೆ ಸ್ಕೆಚ್ ಅಂಡ್ ಡೀಲ್

 


ಸುದ್ದಿಲೈವ್/ಭದ್ರಾವತಿ


ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ರನ್ನ ಮುಗಿಸಲು ಡೀಲ್ ನಡೆದಿತ್ತಾ? ಎಂಬ ಪ್ರಶ್ನೆಗೆ ಈ ಎಫ್ಐಆರ್ ಉತ್ತರವಾಗಿದೆ. ಜೈಲಿನಿಂದಲೇ ಬಸವನ ಹತ್ಯೆಗೆ ಸ್ಕೆಚ್ ನಡೆದಿದೆ.  ಹಾಗಾದರೆ ಎಫ್ಐಆರ್ ಏನು ಹೇಳುತ್ತೆ?


ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೇದ 17 ನೇ ತಾರೀಖು ಗುತ್ತಿಗೆದಾರನ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್‌ ಜೈಲಿನಿಂದ  ಎರಡು ಪ್ರತ್ಯೇಕ ಫೋನ್‌ ನಂಬರ್‌ನಿಂದ ಕರೆ ಮಾಡಿ, ಬಸವರನ್ನ ಮುಗಿಸುವ ಡೀಲ್‌ ನಡೆದಿರುವ ಬಗ್ಗೆ ಹೇಳಿದ್ದಾನೆ.ಇದನ್ನ ಕೇಳಿಸಿಕೊಂಡ ವ್ಯಕ್ತಿಯು ಪೊಲೀಸರಿಗೆ ದೂರು ನೀಡಿದ್ದಾರೆ. 


ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್‌ ಬಸವನ ಹತ್ಯೆಗೆ ಸ್ಕೆಚ್‌ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್‌ ಕೊಟ್ಟಿದ್ದಾನೆ. ಗಾಂದಿ ಸರ್ಕಲ್‌ನಲ್ಲಿ ಬಸವನನ್ನ ಹೊಡೆದು ಹಾಕಿ ಎಂದು ಟಿಪ್ಪು ಆಂಡ್‌ ಟೀಂಗೆ ಹೇಳಿದ್ದ ಎಂದು ಮುಬ್ಬು ತಿಳಿಸಿದ್ದಾಗಿ ದೂರುದಾರರು ಹೇಳಿದ ಪ್ರಕಾರ ಎಫ್‌ಐಆರ್‌ ದಾಖಲಾಗಿದೆ. 


ಇಷ್ಟೆ ಅಲ್ಲದೆ ಕಳೇದ 17 ತಾರೀಖು ರಂಗಪ್ಪ ಸರ್ಕಲ್‌ ಬಳಿ ಸಿಕ್ಕ ಟಿಪ್ಪು ಬಾರ್‌ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್‌ ಡೀಲ್‌ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ. 


ಒಟ್ಟಾರೆ ಕೊಲೆಗೆ ಸ್ಕೆಚ್‌, ಅಕ್ರಮ ಕೂಟು, ಸಂಚು ರೂಪಿಸಿದ ಆರೋಪ ಸೇರಿದಂತೆ ಬಿಎನ್‌ಎಸ್‌ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿದೆ.  

ಬುಧವಾರ, ಆಗಸ್ಟ್ 21, 2024

ವಿದ್ಯುತ್ ತಂತಿ ತಗುಲಿ ಯುವಕ ಸಾವು



ಸುದ್ದಿಲೈವ್/ಶಿವಮೊಗ್ಗ


ಹಳೆ ಜಂಬರಗಟ್ಟೆಯಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ  ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. 


ಹೊಳೆಹೊನ್ನುರಿನ  ಉಪ್ಪಾರ್ ಕೇರಿಯ ವಾಸಿ ಶರಥ್ ಮೃತ ಪಟ್ಟ ಯುವಕನಾಗಿದ್ದಾನೆ. ಹಳೇ ಜಂಬೂರಗಟ್ಟೆಯಲ್ಲಿ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವಾಗಿದೆ. 

ವಿಲ್ಸನ್ ಬಾಬು ಹತ್ಯೆಯೂ ಹಾಗೂ ಕೇರಂ ಜೂಜಾಟವೋ

 


ಸುದ್ದಿಲೈವ್/ಭದ್ರಾವತಿ


ಅನುಮಾನಸ್ಪದ ಸಾವಾದ ಬೆನ್ನಲ್ಲೇ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ವಿಲ್ಸನ್ ಬಾಬು ಎಂಬ 32 ವರ್ಷದ ಹುಡುಗನನ್ನು ಹಳೇ ಬುಳ್ಳಾಪುರದ ಪಿರಿಯಾಪಟ್ನದಮ್ಮನ ದೇವಸ್ಥಾನದ ಬಳಿ ಹೀನಾಮಾನವಾಗಿ ಹೊಡೆದು ನಂತರ ಆತನ ಸ್ನೇಹಿತನಿಗೆ ಕರೆ ಮಾಡಿ ವಿಲ್ಸನ್ ಬಾಬು ಕುಡಿದು ಮಲಗಿದ್ದಾನೆ ಎಂದು ತಿಳಿಸಿದ್ದಾರೆ.




ವಿಲ್ಸನ್ ಬಾಬು ಅವನ ಸ್ನೇಹಿತ ಸಂತೋಷ್ ಬಂದು ಎದ್ದೇಳಿಸಿದರೂ ಏಳದ ಬಾಬುವನ್ನ ಇದೇ ಜೋಯೆಲ್, ಜೋಶ್ವಾ, ಜೋಸೆಫ್ ಎತ್ತಾಕಿಕೊಂಡು ಬೈಕ್ ನಲ್ಲಿ ಕೂರಿಸಿದ್ದಾರೆ. ಈ ವೇಳೆ ವಿಲ್ಸನ್ ಉಸಿರಾಡುತ್ತಿದ್ದನು.


ಇತ್ತ ಮಗ ಬಂದಿಲ್ಲವೆಂದು ತಡರಾತ್ರಿ ಹುಡುಕಾಡಿದ ತಂದೆ ಮನೆಗೆ ವಾಪಾಸ್ ಬಂದಾಗ ಮನೆಯ ಮೊದಲನೇ ಹಾಲ್ ನಲ್ಲಿದ್ದಕಾಟ್ ಮೇಲೆ ಮಲಗಿಸಿ ಹೋಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಿಲ್ಸನ್ ಬಾಬು ಕೊನೆ ಉಸಿರೆಳಿದಿದ್ದಾನೆ.


ಆತನನ್ನ ಸ್ನೇಹಿತರಾದ ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ಅವರೆ ಹೊಡೆದು ಕೊಂದಿರುವುದಾಗಿ ಎಫ್ಐಆರ್ ದಾಖಲಾಗಿದೆ. ದೇವಸ್ಥಾನದ ಆವರಣದಲ್ಲಿ ಕೇರಂ ಜೂಜಾಟದಲ್ಲಿ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ನಾಯಿ ಬೊಗಳಿದ ವಿಚಾರದಲ್ಲಿ ಗಲಾಟೆ

 

ಗಾಯಾಳು ಷಡಾಕ್ಷರಿ

ಸುದ್ದಿಲೈವ್/ಶಿವಮೊಗ್ಗ


ನಾಯಿ ಬೊಗಳಿದ ವಿಚಾರದಲ್ಲಿ ಗಲಾಟೆಯಾಗಿದೆ. ಶಾರು ಯಾನೆ ಲಂಗ್ಡಾ,  ಇರ್ಫಾನ್ ಯಾನೆ ಪಾಪ, ಸಬೀನಾ ರೇಷ್ಮಾ ಹಾಗೂ ಹೀನಾರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ನಲ್ಲಿ ದೂರು ದಾಖಲಾಗಿದೆ. 


ನ್ಯೂ ಸೀಗೆಬಾಗಿಯಲ್ಲಿ ಮನೆಯ ಮುಂದೆ ನಾಯಿ ಬೊಗಳುವ ವಿಚಾರದಲ್ಲಿ ಶಾರು ಯಾನೆ ಲಂಗ್ಡಾ, ಇರ್ಫಾನ್ ಯಾನೆ ಪಾಪ ಎಂಬುವರು ಇಬ್ಬರು ಷಡಾಕ್ಷರಿಯವರ ಮನೆಗೆ ಬಂದು ನಾಯಿ ಕಟ್ಟುಹಾಕುತ್ತೀರೋ ಅಥವಾ ನಿನ್ನ ಹೆಂಡತಿಯನ್ನ ಬೀದಿಗೆ ಬಿಡುತ್ತೀರೋ ಎಂದು ಗಲಾಟೆ ತೆಗೆದಿದ್ದಾರೆ. 


ಅದು ನಮ್ಮ ನಾಯಿ ಅಲ್ಲ ಸರಿಯಾಗಿ ಮಾತನಾಡಿ ಎಂದು ಷಡಾಕ್ಷರಿ ತಿಳಿಸಿದ್ದಾರೆ. ಇಷ್ಟಕ್ಕೆ ಗಲಾಟೆ ಮುಂದು ವರೆದಿದೆ. ಅಲ್ಲೇ ಇದ್ದ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಷಡಾಕ್ಷರಿಯವರ ಪತ್ನಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಬೀನ, 


ಹೀನಾ ಮತ್ತು ರೇಷ್ಮ ಎಂಬುವರು ಶಾರೂ ಮತ್ತು ಇರ್ಫಾನ್ ಜೊತೆ ಸೇರಿ ಷಡಾಕ್ಷರಿಯವರ ಪತ್ನಿಯನ್ನ ಎಳೆದಾಡಿ ಅವಮಾನಗೊಳಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಎಳೆದಾಟದಲ್ಲಿ ಪತ್ನಿಯ ಚಿನ್ನದ ಸರವೊಂದು ಕಳೆದು ಹೋಗಿದೆ. ನಂತರ ಪರಿಚಯಸ್ಥರು ಜಗಳ ಬಿಡಿಸಿದ್ದಾರೆ. 


ಹೆಂಡತಿಯ ಗೌವಕ್ಕೆ ದಕ್ಕೆ ಬರುವ ಹಾಗೆ ವರ್ತಿಸಿ ಎಳೆದಾಡಿದ ವಿಚಾರದಲ್ಲಿ ಐವರ ವಿರುದ್ಧ ಭದ್ರಾವತಿ ಹಳೆ ನಗರದಲ್ಲಿ ದೂರು ದಾಖಲಾಗಿದೆ. ಗಾಯಾಳು ಷಡಾಕ್ಷರಿ ಮತ್ತು ಅವರ ಪತ್ನಿಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ, ಆಗಸ್ಟ್ 20, 2024

ಜಿಲ್ಲೆಯಲ್ಲಿ ಮತ್ತೊಂದು ಅನುಮಾನಸ್ಪದ ಸಾವು ಪ್ರಕರಣ ದಾಖಲು



ಸುದ್ದಿಲೈವ್/ಸೊರಬ


ಮೊನ್ನೆ ಭಾನುವಾರ ಭದ್ರಾವತಿಯಲ್ಲಿ ಅನುಮಾನಸ್ಪದ ಸಾವು ಸಂಭಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಅದೇ ರೀತಿ ಅನುಮಾನಕರವಾದ ಸಾವಿನ ಪ್ರಕರಣ  ನಡೆದಿದೆ. 


ಸೊರಬ ತಾಲೂಕು ತಾವರೆಕೊಪ್ಪ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಮಂಜುನಾಥ್ (36) ಅನುಮಾನಕರವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ಗದ್ದೆಯಲ್ಲಿ ತಂದೆ ಯುವರಾಜ್ ಎಂಬುವ ಜೊತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಣಬೆಯನ್ನ ಹುಡುಕಿಕೊಂಡು ಸಾಗಿದ್ದಾರೆ. 


ಮಧ್ಯಾಹ್ನದ ಹೊತ್ತಾದ ಕಾರಣ ತಂದೆ ಊಟಕ್ಕೆಂದು ಮನೆಗೆ ತೆರಳಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆದು ನಂತರ ಮಗ ಊಟಕ್ಕೆ ಬರಲಿಲ್ಲವೆಂದು ಹುಡುಕಿಕೊಂಡು ಹೊರಟಿದ್ದಾರೆ. ಹುಡುಕಿಕೊಂಡು ಹೋದಾಗ ಮಗ ತಮ್ಮ ಹೊಲದಲ್ಲೇ ಶವವಾಗಿ ಬಿದ್ದಿದ್ದು ಕಂಡು ದಿಗ್ಬ್ರಾಂತರಾಗಿದ್ದಾರೆ. 


ನಂತರ ಮಗನನ್ನ ಅಂಗಾತ ಮಲಗಿಸಿ ನೋಡಿದಾಗ ಹಿಂಬದಿ ಸುಟ್ಟಗಾಯಗಳು ಪತ್ತೆಯಾಗಿದೆ. ಈ ಸುಟ್ಟಗಾಯಗಳೆ ಅನುಮಾನಕ್ಕೆ  ಕಾರಣವಾಗಿದೆ. ಯುವರಾಜ್ ಅವರಿಗೆ ಮಂಜುನಾಥ ಸೇರಿ ಮೂವರು ಮಕ್ಕಳಿದ್ದಾರೆ. 


2022 ರಲ್ಲಿ ಮತ್ತೋರ್ವ ಮಗ ಮಹೇಶ್ ಟ್ರ್ಯಾಕ್ಟರ್ ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಅವರ ಸಹೋದರ ಮಹೇಶ್ ಸಹ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಅವರು ಸಹೋದರಿಯಾಗಿದ್ದಾರೆ. ಈಗ ಯುವರಾಜ್ ಹೊರತುಪಡಿಸಿ ಅವರ ಜೊತೆ ಕುಟುಂಬದ ಯಾವ ಸದಸ್ಯರೂ ಯಾರು ಇಲ್ಲವಾಗಿದೆ.


ಮಂಜುನಾಥ್  ಸಾವಿಗೆ ಕಾರಣ ಏನುಎಂಬುದರ ಬಗ್ಗೆ ಪೊಲೀಸ್ ಬೆನ್ನುಬಿದ್ದಿದೆ. ಇವರ ಮಧ್ಯೆ ಆಸ್ತಿ ವಿಚಾರದಲ್ಲಿ ದಾಯಾದಿ ಕಲಹದ ವಾಸನೆಯೂ ಹೊಡೆಯುತ್ತಿದೆ. ಮಂಜುನಾಥ್ ವಿದ್ಯುತ್ ಶಾಕ್ ನಿಂದ ಸತ್ತಿರುವುದಾಗಿ ಕುಟುಂಬ ಆರೋಪಿಸಿದೆ. 

ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

 


ಸುದ್ದಿಲೈವ್/ಸಾಗರ


ತಾಲ್ಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. 


ತಾಲ್ಲೂಕಿನ ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ಯುವಕನಾಗಿದ್ದಾನೆ. ಜಡ್ಡಿನಬೈಲು ಶರಾವತಿ ಹಿನ್ನೀರಿನಲ್ಲಿ ಮೀನುಗಾರ ರವಿ ಎಂಬುವವರು ಸೋಮವಾರ ಸಂಜೆ ಮೀನಿಗಾಗಿ ಬಲೆ ಹಾಕಿ ಬಂದಿದ್ದರು. 


ಮಂಗಳವಾರ ಬೆಳಿಗ್ಗೆ ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. 
ವಿಪರೀತ ಮಳೆಯಿಂದಾಗಿ ಶರಾವತಿ ಹಿನ್ನೀರಿನಲ್ಲಿ ರಭಸ ಹೆಚ್ಚಿದ್ದು, ಜೊತೆಗೆ ಮರಮಟ್ಟಿ ವಿಪರೀತವಾಗಿದೆ. 

ಮರಮಟ್ಟಿಗಳಿಗೆ ಬಲೆ ಸಿಕ್ಕಿದ್ದನ್ನು ರವಿ ಬಿಡಿಸಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್ ಗಳ ಪಾರ್ಟ್ಸ್ ಗಳು ಕಳುವು


 

ಸುದ್ದಿಲೈವ್/ಶಿವಮೊಗ್ಗ


ಗುರುಪುರದಲ್ಲಿರುವ ಖಾಸಗಿ ಶಾಲಾ ಬಸ್ ನ ಟಯರ್, ಟೂಲ್, ಸ್ಟೆಪ್ನಿ, ಲಿವರ್, ಜಾಕ್ ಮೊದಲಾದ ಸ್ಪೇರ್ ಪಾರ್ಟ್ಸ್ ಗಳನ್ನ ಕದ್ದೊಯ್ದಿರುವ ಬಗ್ಗೆ ಶಿವಮೊಗ್ಗ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಶಿವಮೊಗ್ಗ ನಗರದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ  ಬಸ್ಸುಗಳನ್ನು ಶಾಲಾ ಆವರಣದಲ್ಲಿರುವ ಪಾರ್ಕನ ಲಾಟ್ ನಲ್ಲಿ ನಿಲ್ಲಿಸಲಾಗಿತ್ತು. ಪ್ರತಿ ದಿನ ಮ್ಯಾನೇಜರ್ ಆದ ಚೇತನ ಬಿ ಸಿಂಗ್ ರವರು ಸಂಜೆ 07.00 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಾರೆ. 


ಮರುದಿನ  ಬೆಳಿಗ್ಗೆ 07.00 ಗಂಟೆಗೆ ಚೇತನ ಬಿ ಸಿಂಗ್ ರವರು ಶಾಲಾ ಆವರಣಕ್ಕೆ ಬಂದು ಪರಿಶೀಲನೆ ಬಡೆಸಿ ತೆರಳುವುದು ಅವರ ಕಾಯಕವಾಗಿದೆ.  ಇತ್ತೀಚೆಗೆ  ಶಾಲೆಯ ಗೇಟಿನ ಬೀಗವನ್ನು ಮುರಿದು ಓಳ ಪ್ರವೇಶ ಮಾಡಿ ಶಾಲಾ ಆವರಣದಲ್ಲಿ ಅಳವಡಿಸಿದ್ದ, ಸಿ.ಸಿ.ಟಿ.ವಿ ಕ್ಯಾಮರದ ವೈರ್ ಗಳನ್ನು ಕಿತ್ತು ಹಾಕಿದ್ದಾರೆ.


ಪಾರ್ಕನಲ್ಲಿ ನಿಲ್ಲಿಸಿದ್ದ 11 ಶಾಲಾ ಬಸ್ಸುಗಳಲ್ಲಿ ಸುಮಾರು 07-08 ಬಸ್ಸುಗಳಿಗೆ ಸೇರಿದ 1) ಬಸ್ಸಿನ ಸೈಷ್ಟಿ-02 ಅಂದಾಜು ಬೆಲೆ-7000/- 2) ಬಸ್ಸಿನ ಜಾಕ್-02 ಅಂದಾಜು 5000/- 3) ಬಸ್ಸಿನ 02 ಲಿವರ್ ಅಂದಾಜು ಬೆಲೆ-1000 4) ಬಸ್ಸಿಗೆ ಅಳವಡಿಸುವ ಬೆಂಕಿ ಆರಿಸುವ 02 ಟ್ಯಾಂಕ್ ಅಂದಾಜು ಬೆಲೆ-6000 5) ಬಸ್ಸಿನ 02 ಟೈರ್ ಗಳು ಅಂದಾಜು ಬೆಲೆ 17000/- ಹಾಗೂ 6) ಕಳೆ ಕಟ್ ಮಾಡುವ ಯಂತ್ರ ಅಂದಾಜು ಬೆಲೆ 20000/- ರೂ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಒಟ್ಟು ಅಂದಾಜು ಬೆಲೆ 56,000/- ರೂಗಳಾಗಿವೆ.


ನಂತರ  ಶಾಲೆಯ ಮುಂಬಾಗದ ಮನೆಯ ವಾಸಿ ಪ್ರದೀಪರವರನ್ನು ವಿಚಾರ ಮಾಡಿದಾಗ ಪ್ರದೀಪರವರು ರಾತ್ರಿ 10.30 ಗಂಟೆ ಸಮಯದಲ್ಲಿ ಸುಮಾರು 4-5 ಜನರು ಶಾಲಾ ಕಾಂಪೌಂಡ ಒಳಭಾಗದಲ್ಲಿದ್ದು, ನಂತರ ಎಲ್ಲರು ಕೆ.ಎ 15 ಎ 2372 ಸಂಖ್ಯೆ ಆಟೋದಲ್ಲಿ ನಮ್ಮ ಮನೆಯ ಮುಂಬಾಗದ ಕಾಂಪೌಂಡ ಪಕ್ಕದ ರಸ್ತೆಯಲ್ಲಿ ಹೋಗುತ್ತಿರುವಾಗಿ ತಿಳಿಸಿದ್ದಾರೆ. 


ಆಟೋದಲ್ಲಿ, ವೈರ್, ಟೈರುಗಳು ನನಗೆ ಕಂಡಿದ್ದು, ಈ ಹಿಂದೆ ನಿಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ, ಶಂಕರಪ್ಪ, ರವಿಕುಮಾ‌ರ್, ಮಾಲತೇಶರವರಾಗಿದ್ದರೆಂದು ತಿಳಿಸಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಕಳ್ಳತನವಾಗಿದ್ದು ಇದರಲ್ಲಿ ಇವರುಗಳೇ ಆರೋಪಿಗಳಾಗಿದ್ದಾರೆ.  ಈ ಬಾರಿಯ ಕಳ್ಳತನಲ್ಲಿ  ಅರುಣ, ಶಂಕರಪ್ಪ, ರವಿ ಕುಮಾರ, ಮಾಲತೇಶ ಹಾಗೂ ಇತರರ ಮೇಲೆ ಅನುಮಾನವಿದೆ ಎಂದು ಶಾಲೆಯ ಜಗದೀಶ್ ಗೌಡರ್ ತಿಳಿಸಿದ್ದಾರೆ.

ಬೆಚ್ಚಿ ಬೀಳಿಸುವ ವಿಡಿಯೋ ವೈರಲ್-ಅರಣ್ಯ ಇಲಾಖೆಯಿಂದ ಸ್ಪಷ್ಟನೆ

 


ಸುದ್ದಿಲೈವ್/ಶಿವಮೊಗ್ಗ


ಕರಡಿಯನ್ನ ಹೊಡೆದು ಕೊಂದು ಹಾಕಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಗೊಲ್ಲರಹಟ್ಟಿಯ ದೃಶ್ಯ ಎಂದು ಬಿಂಬಿಸಲಾಗಿದೆ.


ಆದರೆ ಅರಣ್ಯ ಇಲಾಖೆಯು ಇದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಯಾವುದೇ ಗ್ರಾಮದಲ್ಲಿ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ವಾಟ್ಸಪ್ ಸ್ಟೇಟಸ್ ಗೆ ಈ ವಿಡಿಯೋ ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ ಎಂದು ಬಿಂಬಿಸಿ ವಾಟ್ಸಪ್ ಸ್ಟೇಟಸ್ ಗೆ ಕೆಲ ಯುವಕರು ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲವೆಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದ್ದಾರೆ.



ತೆಂಗಿನ ತೋಟಕ್ಕೆ ನುಗ್ಗಿದ ಕರಡಿಯನ್ನ ಸ್ಥಳೀಯ ಗ್ರಾಮಸ್ಥರು ಹೊಡೆದು ಕೊಲ್ಲುವ ಪ್ರಯತ್ನ ನಡೆಸಿದ್ದಾರೆ. ಹೊಡೆಯುವ ವೇಳೆ ಯುವಕನ ಮೈಮೇಲೆ ಎಗರಿದ ಕರಡಿ ಆತನನ್ನ ಕಚ್ಚುತ್ತದೆ. ಆ ವೇಳೆ ಸ್ಥಳೀಯರು ದೊಣ್ಣೆ ಹಿಡಿದು ಮತ್ತು ಕೆಲವರು ಎಳನೀರು ಬಿಸಾಕಿ ಸಾಯಿಸಿದ್ದಾರೆ.


ಈ ವಿಡಿಯೋ ಭದ್ರಾವತಿ ತಾಲೂಲು ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿರುವುದಾಗಿ ಬಿಂಬಿಸಲಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಈ ವಿಡಿಯೋ ಉತ್ತರ ಭಾರತದ ಕಡೆಯಲ್ಲಿ ನಡೆದಘಟನೆ ಎಂದು ಸ್ಪಷ್ಟಪಡಿಸಿದೆ. ಈವಿಡಿಯೋವನ್ನ ವೈರಲ್ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. 

ಸಿದ್ದರಾಮಯ್ಯ ಆರೋಪ ಮುಕ್ತರಾಗಿ ಬರಲಿ ನಾವು ಕಾಲು ತೊಳೆಯುತ್ತೇವೆ-ಬಿಜೆಪಿ ಶಾಸಕ ಚೆನ್ನಬಸಪ್ಪ

 


ಸುದ್ದಿಲೈವ್/ಶಿವಮೊಗ್ಗ

 

ಪ್ರಜಾಪ್ರಭುತ್ವದ ಬುಡವನ್ನೇ ಕಾಂಗ್ರೆಸ್ ಅಲುಗಾಡಿಸಲು ಹೊರಟಿದ್ದಾರೆ. ಸಂಯಮವಾಗಿ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಬೇಕಿದ್ದ ಕಾಂಗ್ರೆಸ್ ದಾಷ್ಟ್ಯರ ರೀತಿ ಮುನ್ನುಗ್ಗುತ್ತಿದೆ ಎಂದು ಶಾಸಕ ಚೆನ್ನ ಬಸಪ್ಪ ಆತಂಕ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿ ನಡೆಸಿದ ಅವರು ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರಶ್ನಿಸ ಬೇಕಿದ್ದ ಕಾಂಗ್ರೆಸ್ ತಾನು ಹೇಳಿದ್ದೇ ಅಂಬೇಡ್ಕರ್ ಕಾನೂನು ಎಂಬಂತೆ ಬಿಂಬಿಸುತ್ತಿದೆ. ರಾಜ್ಯಪಾಲರನ್ನ ಅವಮಾನಿಸಲಾಗಿದೆ. ಐವಾನ್ ಡಿಸೋಜರ ವಾಗ್ದಾಳಿ ಅಚ್ಚರಿ ಮೂಡಿಸಿದೆ. 


ಅವರು ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಕರೆದ ಶಾಸಕರು ಬಾಂಗ್ಲಾ ರೀತಿಯಲ್ಲಿ ರಾಜ್ಯಪಾಲರ ಮೇಲೆ ದಾಳಿ ನಡೆಸಲಾಗುವುದು ಎಂಬ ಅವರ ಹೇಳಿಕೆ ಆತಂಕ ಮೂಡಿಸುತ್ತದೆ.  ರಾಜ್ಯದಲ್ಲಿ ಕಾನೂನು ಅಸ್ಥಿತ್ವದಲ್ಲಿ ಇದೆಯೋ ಇಲ್ಲೆವೋ. ಕಾನೂನು ಸುವ್ಯವಸ್ಥೆ ಇದ್ದರೆ ಮೊದಲು ಬಂಧಿಸಿ ಎಂದು ಆಗ್ರಹಿಸಿದರು. 


ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಖಾಸಗಿ ಬಸ್ ಜಖಂಗೊಳಿಸಲಾಗಿದೆ.  ಹಾಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ಹೋರಾಟ ಪ್ರಜಾಪ್ರಭುತ್ವದಲ್ಲಿ ಸಿಕ್ಕ ಹಕ್ಕು. ಆದರೆ ಅದನ್ನ ಹೇಗಾಯಿತೋ ಹಾಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು. ಯಾರು ಯಾರ  ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದಾಗ ಅವರೆಲ್ಲ ಹೇಗೆ ನಡೆದುಕೊಂಡರು ಎಂಬುದನ್ನ‌ ವಿವರಿಸಿದರು. 


ಸಿದ್ದರಾಮಯ್ಯ ಎಲ್ಲಿ ಉತ್ತರ ಕೊಡಬೇಕಿತ್ತೋ ಅಲ್ಲಿ ಕೊಡಲಿಲ್ಲ. ಸದನದಿಂದ ಓಡಿ ಹೋದರು. ಹಾಗಾಗಿ ನಮಗೆ ಈ ಪ್ರಕರಣದಲ್ಲಿ ಅನುಮಾನ ಹುಟ್ಟಿದೆ. ಯಾರು ನಿಮಗೆ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಗೊತ್ತಿಲ್ಲ. ರಾಜ್ಯ ಪಾಲರ ನಡೆ ಸ್ವಾಗತಾರ್ಹ ನಡೆ. ಅವರು ಏಕಾಏಕಿ ಪ್ರಾಸಿಕ್ಯೂಷನ್ ನೀಡಿಲ್ಲ. ರಾಜ್ಯಪಾಲರು ಸರ್ಕಾರದ ಭಾಗವಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವಾಗ‌ ಒಳ್ಳೆಯವರಾಗಿದ್ದ  ರಾಜ್ಯಪಾಲರು ಮಾಡಬಾರದ ಕೆಲಸ ಮಾಡುವಾಗ ಪ್ರಾಸಿಕ್ಯೂಷನ್ ಗೆ ನೀಡಿದಾಗ ಕೆಟ್ಟವರಾಗುತ್ತಾರಾ? ಎಂದು ಕೇಳಿದರು.


ಸಿದ್ದರಾಮಯ್ಯ ನಿರಪರಾಧಿ ಎಂದ ಮೇಲೆ ಭಯವೇಕೆ. ಅವರು ಆರೋಪ ಮುಕ್ತರಾಗಿ ಬರಲಿ ನಾವು ಪಾದ ತೊಳೆಯುತ್ತೇವೆ. ಹೊಸ ಶಾಸಕರಿಗೆ ಮೂರು ಮೂರು ದಿನ ಪಾಠ ಮಾಡಿದ ಕೃಷ್ಣೇಭೈರೇಗೌಡರು ರಾಜ್ಯಪಾಲರ ವಿರುದ್ಧ ಅವಾಚ್ಯ‌ಶಬ್ದ ಬಳಕೆ ಮಾಡುತ್ತಾರೆ. ಇದು ಯಾವ ರೀತಿಯ ನಡತೆ ಎಂದು ದೂರಿದರು. 


ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನ ಬಿಜೆಪಿ ಮಾಡಿಲ್ಲ. 136 ಜನ ಕಾಂಗ್ರೆಸ್ ಶಾಸಕ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಇಲ್ಲವೆಂದರೆ ಅವರ ಜಾಗಕ್ಕೆ ಬೇರೆ ಅವರು ಬಂದು ಆಡಳಿತ ನಡೆಸುತ್ತಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾನಯ್ಯ 1093 ಸಮುದಾಯ ಭವನ, ಹಾಸ್ಟೆಲ್ ಗಳಿಗೆ ಬಿಜೆಪಿ ಬಿಡುಗಡೆ ಮಾಡಿದ ಅನುದಾನಗಳನ್ನ  ತಡೆ ಹಿಡಿದಿದ್ದಾರೆ. 


ತಡೆಹಿಡಿದ ಆದೇಶವನ್ನ ಸಂಪೂರ್ಣ ರದ್ದು ಮಾಡಿ 300 ಕೋಟಿ ಹಣ ವಾಪಾಸ್ ಪಡೆದಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನ ಗುರುತಿಸಿ 10 ಲಕ್ಷ ರೂ.ಗಳಿಂದ ಕೋಟಿಗಟ್ಟಲೆ ಹಣ ಅನುದಾನ ನೀಡಲಾಗಿತ್ತು. ಅದನ್ನ ಸಂಪೂರ್ಣ ರದ್ದು ಮಾಡಿದ್ದೀರಿ. ಶಿವಮೊಗ್ಗದ ವಿದ್ಯಾರ್ಥಿ ನಿಲಯಗಳು ಸೇರಿ 99  ಸಮುದಾಯ ಭವನಗಳಿಗೆ ನೀಡಿದ ಹಣ ರದ್ದಾಗಿದೆ. 


ಇದು ಅನಾಗರೀಕ ವರ್ತನೆ. ಸಮುದಾಯಗಳಿಗೆ ಶಕ್ತಿ ನೀಡುವ ಜಾಗದಲ್ಲಿ ತಡೆಹಿಡಿದು ನಂತರ ರದ್ದು ಮಾಡಿದ್ದೇಕೆ? ಆ ಸಮಾಜವನ್ನ ಕಟ್ಟಿಕೊಂಡು ಬಿಹೆಪಿ ಹೋರಾಟ ಮಾಡಲಿದೆ. ಸರ್ಕಾರ ಪಾಪರ್ ಎದ್ದು ಹೋಗಿದೆ. ಗ್ಯಾರೆಂಟಿ ಗಾಗಿ ಹಣವನನ್ನ ಹೊಂದಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಿ ಎಂದು ತಿಳಿದಿದ್ದಿವಿ ಅದನ್ನೂ ಗಾಳಿಗೆ ತೂರಿದ್ದೀರಿ ಎಂದು ಗುಡುಗಿದರು. 


ದೇವರಾಜ್ ಅರಸ್ ಅಭಿವೃದ್ಧಿ ಒಕ್ಕಲಿಗ ಅಭಿವೃದ್ಧಿ ನಿಗಮ ವೀರಶೈವ ಅಭಿವೃದ್ಧಿ ನಿಗಮ, ಸೇರಿದ ಹಲವು ನಿಗಮಗಳಿಗೆ ಹಣ ನೀಡೇ ಇಲ್ಲ.  ಹೋಗಲಿ ರದ್ದು ಮಾಡುದ್ರಿ ಯಾವುದಾದರೂ ಹೊಸ ನಿಗಮಗಳಿಗೆ ನಾಲ್ಕಾಣೆ ನೀಡುದ್ರಾ ಎಂದು ಪ್ರಶ್ನಿಸಿದ ಶಾಸಕರು ಸುಖಾಸುಮ್ಮನೆ ಹಿಂದುಳಿದ ವರ್ಗಗಳ ವಿರೋಧಿ ಎಂದು ಯಾಕೆ ಬಿಜೆಪಿಯನ್ನ ದೂರುತ್ತೀರಿ. ನಿಮ್ಮ ಸಾಧನೆ ಏನು ಹೇಳಿ ಎಂದು ಪ್ರಶ್ನಿಸಿದರು. 


ಕಾಂಗ್ರೆಸ್ ಹೈಕಮಾಂಡ್ ಗೆ ಕಿಂಚಿತ್ತು ಸ್ವಾಭಿಮಾನವಿಲ್ಲ. ಯಾಕೆ ಸಿದ್ದರಾಮಯ್ಯನವರ ಸರ್ಕಾರ ಬೇಕು? ಕಾಂಗ್ರೆಸ್ ನಲ್ಲಿ ಯಾರೂ ನಾಯಕರಿಲ್ವಾ? ಅವರ ಹೈಕಮಾಂಡ್ ಮೇಲಿಂದ ಕೆಳಗೆ ಓಡಿ ಬಂದಿದೆ. ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.


ನ್ಯಾಯಾಲಯ 10 ದಿನ ಕಾಲಕೊಟ್ಟಿದ್ದು ಯೋಚಿಸಿ ರಾಜೀನಾಮೆ ನೀಡಿ ಬನ್ನಿ ಎಂದು ನನಗೆ ಅನಿಸುತ್ತಿದೆ. 10 ದಿನಗಮದ ಒಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ.  ನಿಮ್ಮ‌ಮೂಗಿನ ಅಡಿ ನಡೆದ ಅನೇಕ ಘಟನೆಗಳು ಆತಂಕ ಹುಟ್ಟಿಸುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಬೇರೆ ರಾಜ್ಯದ ಚುನಾವಣೆ ಜಾಹೀರಾತು ನೀಡಿದ್ದೂರಿ. ಇದು ಭ್ರಷ್ಠಾಚಾರದ ಪರಮಾವಧಿ ಎಂದು ಬಣ್ಣಿಸಿದರು‌ 


ಬಿಜೆಪಿ ಸಗಣಿ ತಿಂದಿದ್ದಕ್ಕೆ ಕಾಂಗ್ರೆಸ್ ಗೆ ಅಧಿಕಾರ ಬಂತು. ಬಿಜೆಪಿ ಭ್ರಷ್ಠಾಚಾರ ನಡೆಸಿಲ್ಲವಾ ಎಂದು ಕೇಳುವ ಕಾಂಗ್ರೆಸ್ ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ ಎಂದಿದ್ದಕ್ಕೆ ಪ್ರಾಸಿಕ್ಯೂಷನ್ ಗೆ ನೀಡಲಾಗಿದೆ. ಕುಮಾರ್ ಸ್ವಾಮಿಗೂ ಪ್ರಾಸಿಕ್ಯೂಷನ್ ಗೆ ಕೊಡಿ,  ಯಾರು ತಡೆದವರು ನಿಮ್ಮನ್ನ ಎಂದು ಗುಡುಗಿದರು. 


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಸೋಮವಾರ, ಆಗಸ್ಟ್ 19, 2024

ಬಾಡಿ ಮಸಾಜ್ ಪಾರ್ಲರ್ ಮೇಲೆ ಪೊಲೀಸ್ ರೈಡ್



ಸುದ್ದಿಲೈವ್/ಶಿವಮೊಗ್ಗ


ಹರ್ಬಲ್ ಬಾಡಿ ಮೆಸಾಜ್ ಪಾರ್ಲರ್  ಮೇಲೆ ಪೊಲೀಸರ ದಾಳಿ ನಡೆದಿದೆ. ದಾಳಿಯಲ್ಲಿ ಮೂವರು ಹುಡುಗರು ಹಾಗೂ ಇಬ್ವರು ಯುವತಿಯನ್ನ ರಕ್ಷಿಸಲಾಗಿದೆ. 


ವೇಶ್ಯವಾಟಿಕೆ ಆರೋಪದ ಮೇರೆಗೆ ವಿನೋಬ ನಗರ ಬಾಡಿ ಮೆಸಾಜ್ ಮೇಲೆ ವಿನೋಬ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ವಿನೋಬ ನಗರ ಪೊಲೀಸ್ ಚೌಕಿ ಬಳಿಯ ಲೈರಾ ಹರ್ಬಲ್ ಬಾಡಿ ಮೆಸಾಜ್ ಮೇಲೆ ದಾಳಿಯಾಗಿರುವುದಾಗಿ ತಿಳಿದು ಬಂದಿದೆ. 


ಭದ್ರಾವತಿಯಲ್ಲಿ ಅನುಮಾನಸ್ಪದದಲ್ಲಿ ಯುವಕನ ಶವಪತ್ತೆ, ಕೊಲೆಯ ಶಂಕೆ

 


ಸುದ್ದಿಲೈವ್/ಭದ್ರಾವತಿ


ಅನುಮಾನ ಸ್ಪದದ ರೀತಿಯಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು ಆತನ ಮೃತದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.


ಹುಡ್ಕೋ ಕಾಲೋನಿಯಲ್ಲಿದ್ದ ಮನೆಯಲ್ಲಿ ಊಟ ಮುಗಿಯುವ ತನಕ ಮನೆಯಲ್ಲೇ ಇದ್ದ ವಿಲ್ಸನ್ ಎಂಬ ಯುವಕ ಊಟವಾದ ಮೇಲೆ ಹೊರಗಡೆ ಹೋಗಿದ್ದಾನೆ. ಮನೆಯಿಂದ ಹೊರಗಡೆ ಹೋಗುವಾಗ ಇಷ್ಟು ಹೊತ್ತಿಗೆ ಬೇಡ ಎಂದು ಹೇಳಿದ್ದ ಮಾತಿಗೆ ಹೀಗೆ ಹೋಗಿ ಹಾಗೆ ಬರ್ತೇನೆ ಎಂದು ಹೇಳಿ ಹೊರಗೆ ಹೋಗಿದ್ದ. 


ಸಮಯ ಕಳೆದರು ಮಗ ಮನೆಗೆ ಬಂದಿಲ್ಲವೆಂಬ ಆತಂಕದಿಂದ ಹುಡುಕಿಕೊಂಡು ಹೊರಟ ತಂದೆ ಮಗ ಎಲ್ಲೂ ಸಿಗಲಿಲ್ಲ ಎಂಬ ಕಾರಣಕ್ಕೆ ಮನೆಗೆ ವಾಪಾಸ್ ಆಗ್ತಾನೆ. ಮನೆಗೆ ವಾಪಾಸ್ ಆದಾಗ ಮಗ ಅಂಗಾತ ಮಲಗಿದ್ದನು. ಆಸ್ಪತ್ರೆಗೆ ಕರೆದುಕೊಂಡು ಹೋದ ಅಪ್ಪನಿಗೆ ಆತನ ಸಾವು ಖಚಿತಗೊಂಡಿದೆ. ಹೀಗೆ ವಿಲ್ಸನ್ ಸಾವು ಅನುಮಾನ ಸ್ಪದವಾಗಿ ನಡೆದು ಹೋಗಿದೆ. 


ಪೇಪರ್ ಟೌನ್ ಠಾಣಾ ವ್ಯಾಪ್ತಿಯ ಹುಡ್ಕೋ ಕಾಲೋನಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತನಾದವನನ್ನ ವಿಲ್ಸನ್ ಸುಮಾರು 28-30 ವರ್ಷದೊಳಗಿನ ಯುವಕನಿರಬಹುದು ಎಂದು ಹೇಳಲಾಗುತ್ತಿದೆ.


ಆದರೆ ಆತನ ಸಾವು ಕೇರಂ ಆಟದಲ್ಲಿ ನಡೆದ ಗಲಾಟೆಯಿಂದಾಗಿ ಕೊಲೆಯಾಗಿದೆ ಎಂಬ ಮಾಹಿತಿಯೂ ತಿಳಿದು ಬಂದಿದೆ. ಭದ್ರಾವತಿಯಲ್ಲಿ ಜೂಜಾಟದ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಸಾವು ಮತ್ತಷ್ಟು ಅನುಮಾನವನ್ನ ಹೆಚ್ಚಿಸಿದೆ. 

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ-ಆಕ್ಷೇಪಣೆ ಆಹ್ವಾನ

 ತಾತ್ಕಾಲಿಕ-ಆಯ್ಕೆ-ಪಟ್ಟಿ-ಪ್ರಕಟ-ಆಕ್ಷೇಪಣೆ-ಆಹ್ವಾನ


ಸುದ್ದಿಲೈವ್/ಶಿವಮೊಗ್ಗ


ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವೈದ್ಯಕೀಯ/ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಆಯೋಜಿಸಲಾಗಿದ್ದ ಮೂಲ ದಾಖಲಾತಿ ಪರಿಶೀಲನೆ ನೇರ ಸಂದರ್ಶನದಲ್ಲಿ ಭಾಗವಹಿಸಿದ್ದ ವೈದ್ಯಾಧಿಕಾರಿಗಳು, ಶೂಶ್ರೂಷಕಿಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು (ಪಿಹೆಚ್‌ಸಿಓ), ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಾಲೂಕು ಆಶಾ ಮೇಲ್ವಿಚಾರಕರು, ನೇತ್ರ ಸಹಾಯಕರರು ಈ ಎಲ್ಲಾ ಅಭ್ಯರ್ಥಿಗಳ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸೂಚನೆ ಫಲಕದಲ್ಲಿ ಪ್ರಕಟಿಸಲಾಗಿದೆ.


ಅಭ್ಯರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಲಿಖಿತ ರೂಪದಲ್ಲಿ ಆ.26 ರೊಳಗಾಗಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಎನ್.ಹೆಚ್.ಎಂ. ವಿಭಾಗಕ್ಕೆ ಸಲ್ಲಿಸುವಂತೆ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಅವಕಾಶ





ಸುದ್ದಿಲೈವ್/ಶಿವಮೊಗ್ಗ


ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ, 


ಈ ಹಿನ್ನೆಲೆಯಲ್ಲಿ  ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ ಸಾರ್ವಜನಿಕರು ದಿನಾಂಕಃ 21-08-2024  ರ ವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ. 


ಆದ್ದರಿಂದ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಶಿವಮೊಗ್ಗ-ಎ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ಭದ್ರಾವತಿ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಭದ್ರಾವತಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, 


ಸಾಗರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಸಾಗರ  ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ, ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ತೀರ್ಥಹಳ್ಳಿ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ಮತ್ತು ಸೊರಬ ಹಾಗೂ ಶಿಕಾರಿಪುರ ತಾಲ್ಲೂಕು ವ್ಯಾಪಿಗೆ ಒಳಪಡುವ ಸಾರ್ವಜನಿಕರು ಶಿಕಾರಿಪುರ ಪೊಲೀಸ್  ಉಪಾಧೀಕ್ಷಕರ ಕಛೇರಿಯಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳ ಬಹುದಾಗಿರುತ್ತದೆ.

ಅಂದರ್ ಬಾಹರ್ ಅಡ್ಡೆ ಮೇಲೆ ದಾಳಿ



ಸುದ್ದಿಲೈವ್/ಶಿವಮೊಗ್ಗ


ಕುಂಸಿ ಸಮೀಪದ ಚಿಕ್ಕದಾ ನಂದಿ ಗ್ರಾಮದ ಹತ್ತಿರ ನೀಲಿಗಿರಿ ಪ್ಲಾಂಟೇಶನ್ ನಲ್ಲಿ  ಅಂದರ್ ಬಾಹಾರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಕುಂಸಿ ಪೊಲೀಸರು ದಾಳಿ ನಡೆಸಿ 21 ಸಾವಿರ ರೂ ಹಣ ಹಾಗೂ 10 ಜನರನ್ನ ವಶಕ್ಕೆ ಪಡೆದಿದ್ದಾರೆ.


ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್. ರವರು ತಮ್ಮ ಸಿಬ್ಬಂದಿಗಳಾದ ಪಿಎಸ್ಐ ಶಾಂತರಾಜ್. ಹೆಡ್ ಕಾನ್ಸ್ಟೇಬಲ್ ಪ್ರಕಾಶ್. ಕಾನ್ಸ್ಟೇಬಲ್ ಶಶಿಧರ್ ನಾಯಕ್. ವಿನಾಯಕ್. ರಘು. ನಿತಿನ್. ಪ್ರಶಾಂತ್ ನಾಯ್ಕ. ಆದರ್ಶ. ಶಶಿ. ಜಿ ಚಾಲಕ ಶಿವಪ್ಪ. ಹೋಮ್ ಗಾರ್ಡ್ ಮುರುಳಿಧರ್ ಈ ಕಾರ್ಯಾಚರಣೆಯಲ್ಲಿದ್ದರು.  


ನಿನ್ನೆ ನಡೆದ ಇಸ್ಪೀಟ್ ಅಡ್ಡ ಮೇಲೆ ದಾಳಿಯ ವೇಳೆ 21,190 ರೂ. ಹಣ ಹಾಗೂ 10 ಜನರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ.‌ ಈ ಬಗ್ಗೆ   ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ಭಾನುವಾರ, ಆಗಸ್ಟ್ 18, 2024

ಗನ್ ಕಳುವು

 

ಸಾಂದರ್ಭಿಕ ಚಿತ್ರ

ಸುದ್ದಿಲೈವ್/ಶಿವಮೊಗ್ಗ


ವನ್ಯಜೀವಿಯಿಂದ ರಕ್ಷಣೆಗಾಗಿ ಇಟ್ಟುಕೊಂಡ ಪರವಾನಗಿ ಗನ್ ನ್ನೇ ಕದ್ದುಕೊಂಡು ಹೋಗಿರುವ ಘಟನೆ ಕಾಕನಹೊಸೂಡಿಯಲ್ಲಿ ನಡೆದಿದೆ.


ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಉದಯ ಕುಮಾರ್ ಅವರ ಪತ್ನಿ ಹೆಸರಿನಲ್ಲಿ  ಶಿವಮೊಗ್ಗ ತಾಲೂಕಿನ ಕಾಕನಹೊಸೂಡಿ ಗ್ರಾಮದಲ್ಲಿ  ಆಸ್ತಿಯನ್ನ ಹೊಂದಿದ್ದರು. ಇವರು ವನ್ಯಜೀವಿಗಳ ದಾಳಿ, ಫಸಲು ರಕ್ಷಣೆಗೆ ಮತ್ತು   ಆತ್ಮರಕ್ಷಣೆಗಾಗಿ ಪರವಾನಗಿ ಉಳ್ಳ ಗನ್ ನ್ನ ಹೊಂದಿದ್ದರು.


ಉದಯ ಕುಮಾರ್ ತೋಟಕ್ಕೆ ಹೋಗುವಾಗ‌ ಗನ್ ಇಟ್ಟುಕೊಂಡು ಓಡಾಡುತ್ತಿದ್ದರು. ಅದರಂತೆ ಕಾಕನಹೊಸೂಡಿಯಲ್ಲಿ ಅಡಿಕೆ ಶುಂಠಿ ಕೆಲಸ ಮಾಡಿಸಲು ಬೊಲೆರೋ ಪಿಕಪ್ ವಾಹನದಲ್ಲಿ ಬಂದಿದ್ದರು.


ಜಮೀನಿನ ಗೇಟ್ ಮುಂಭಾಗದಲ್ಲಿ ವಾಹನ ನಿಲ್ಲಿಸಿ ಜಮೀನಿನ ಕಡೆ ಹೋದಾಗ ವಾಹನದ ಬಾಗಿಲನ್ನ ಯಾವುದೋ ಕೀಯಿಂದ ತೆಗೆದು ಸೀಟಿನ ಹಿಂಭಾಗದಲ್ಲಿll



ಇಟ್ಟಿದ್ದ ಗನ್ ನ್ನ ಕದ್ದುಕೊಂಡು ಹೋಗಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಚ್ಚು ಬೀಸಿದ ವಿಡಿಯೋ ವೈರಲ್



ಸುದ್ದಿಲೈವ್/ಶಿವಮೊಗ್ಗ


ವಾಣಿಜ್ಯ ಸಂಕೀರ್ಣದ ಸಿಬ್ಬಂದಿಯ ಮೇಲೆ ವ್ಯಕ್ತಿಯೋರ್ವ  ಮಚ್ಚು ಹಿಡಿದುಕೊಂಡು ಬಂದು ಬೀಸಿದ ವಿಡಿಯೋವೊಂದು ವೈರಲ್ ಆಗಿದ್ದು, ಮಚ್ಚು ಬೀಸಿದಾತನನ್ನ ರೌಡಿ ಶೀಟರ್ ಎಂದು ಹೇಳಲಾಗುತ್ತಿದೆ.  ಪ್ರಕರಣ ವಿನೋಬ ನಗರ ಠಾಣೆಯಲ್ಲಿ ನಡೆದಿದ್ದು ಘಟನೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತವಾಗುತ್ತಿದೆ. 



ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ  ಒಂದು ಗಂಟೆಯ ವೇಳೆಗೆ  ತನಕ  ಗಲಾಟೆ ನಡೆದಿದೆ ಎನ್ನಲಾಗಿದೆ. 12:30 ಕ್ಕೆ   ದ್ವಿಚಕ್ರ ವಾಹನದಲ್ಲಿ ಮೂರು ಜನ ಬಂದಿದ್ದು, ಇದರಲ್ಲಿ ಓರ್ವ  ಮಚ್ಚು ಹಿಡಿದುಕೊಂಡು ಬಂದು ಪೊಲಾರ್ ಬೇರ್ ಸಿಬ್ಬಂದಿ ಮೇಲೆ ಏಕಾಏಕಿ ಅಟ್ಯಾಕ್ ಗೆ ಮುಂದಾಗುತ್ತಾನೆ.

ಇದಲ್ಲಿ ಓರ್ವ ಯುವತಿ ಸಹ ದ್ವಿಚಕ್ರವಾಹನದಲ್ಲಿ ಬರುತ್ತಾಳೆ. ಯುವತಿಯ ಹಾಜರಾತಿ ಕುತೂಹಲ ಮೂಡಿಸಿದೆ. 

ಕ್ಷಣಾರ್ಧದಲ್ಲಿ ಸಿಬ್ಬಂದಿ ಆತನಿಂದ ಎಸ್ಕೇಪ್ ಆಗುತ್ತಾನೆ.   ಕೈಯಲ್ಲಿ ಲಾಂಗು ಹಿಡಿದು  ಅಟಾಕ್ ಮಾಡಲು ಯತ್ನಿಸಿದ ವಿಡಿಯೋ ಸಿಸಿಟಿವಿನಲ್ಲಿ ರೆಕಾರ್ಡ್ ಆಗಿದೆ.. ಅದೃಷ್ಟ ವಶಾತ್ ಸಿಬ್ಬಂದಿ ಶೆಟ್ಟರ್ ಎತ್ತು ಒಳಗಡೆ ಓಡಿ ಹೋಗುತ್ತಾನೆ. 


ನಂತರ ಮಚ್ಚು ಹಿಡಿದ ವ್ಯಕ್ತಿ  ಶೆಟ್ಟರ್ ಮತ್ತು ಡೋರ್ ಕೆಳಗೆ ಲಾಂಗು ನಿಂದ ಬೀಸುತ್ತಾನೆ. ಪ್ರಕರಣ ವಿನೋಬನಗರ ನಗರ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.  ಮಚ್ಚುಬೀಸಿದಾತ ಓರ್ವ ರೌಡಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.