ಆಯನೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಯನೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 18, 2024

ಆಯನೂರಿನಲ್ಲಿ ಸೌಹಾರ್ಧತೆಯಿಂದ ನಡೆದ ಗಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ



ಸುದ್ದಿಲೈವ್/ಶಿವಮೊಗ್ಗ


ಆಯನೂರಿನ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ರಾತ್ರಿ 12 ಗಂಟೆಗೆ ಆಯನೂರು-ಕೋಟೆಯ ತಾವರೆಕೆರೆಯಲ್ಲಿ ಉತ್ಸವ ಮೂರ್ತಿಯನ್ನ ವಿಸರ್ಜನೆ ಮಾಡುವ ಮೂಲಕ ಸಂಪನ್ನಗೊಂಡಿದೆ. 


ನಿನ್ನೆ ಆಯನೂರು ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ನಿನ್ನೆ ಬೆಳಿಗ್ಗೆ ಸುಮಾರು 11-30ಕ್ಕೆ ಆರಂಭಗೊಂಡಿದೆ.  ಅತ್ಯಂತ ವಿಜೃಂಭಣೆಯಿಂದ ಹೊರಟ ಮೆರವಣಿಗೆಯಲ್ಲಿ ಮುಸ್ಲೀಂ‌ಬಾಂಧವರು ಸಹ ಪಾಲ್ಗೊಂಡು ವಿಶೇಷವಾಗಿತ್ತು. 


ಹಿಂದೂ ಹಾಗೂ ಮುಸ್ಲಿಂ  ಸಮುದಾಯದವರು ಸೌಹಾರ್ದತೆ ಸಾಕ್ಷಿಯಾದ ಗಣೇಶನ ಮೆರವಣಿಗೆಯಲ್ಲಿ ಭಜನೆ, ಕೀಲು ಕುದುರೆ, ಡೊಳ್ಳು ಕುಣಿತ, ನೃತ್ಯ, ಪಟಾಕಿ ಸಿಡಿಸುವ ಮೂಲಕ ಗಣಪತಿ ವಿಸರ್ಜನಾ ಮೆರವಣೆಗೆ ನಡೆದಿದೆ.  ಹಿಂದೂ ಹಾಗೂ ಮುಸ್ಲಿಂ ಬಾಂಧವರು ಆನಂದಿಸಿ ಶಾಂತಿಯುತವಾಗಿ  ಗಣೇಶ ವಿಸರ್ಜನೆಗೆ ಸಹಕಾರಿಸಿದ್ದಾರೆ. ಕುಂಸಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ರವರು ಗಣಪತಿ ಕಮಿಟಿಯವರಿಗೂ, ಹಾಗೂ ಎರಡು ಸಮುದಾಯದವರಿಗು ಧನ್ಯವಾದಗಳು ತಿಳಿಸಿದ್ದಾರೆ. 

ಬುಧವಾರ, ಆಗಸ್ಟ್ 28, 2024

ಆಯನೂರು ಪಿಯು ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ-ಇಬ್ಬರು ಬಂಧನ



ಸುದ್ದಿಲೈವ್/ಶಿವಮೊಗ್ಗ


ಆಯನೂರು ಪಿಯು ಕಾಲೇಜಿನ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಕುಂಸಿ ಪೊಲೀಸರು ಬಂಧಿಸಿ 350 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.  


ಡಿವೈ ಎಸ್ಪಿ ಸುರೇಶ್ ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ಕುಂಸಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್ ರವರ ತಂಡ ಇಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಆಯನೂರು ಗ್ರಾಮದ ಪಿಯು ಕಾಲೇಜ್ ಕಾಂಪೌಂಡ್ ಹಿಂಭಾಗದ ಹಾಸ್ಟೆಲ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.‌


ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಅರೋಪಿ 1) ವಿಷ್ಣು ಪಿ ತಂದೆ ಪರಶುರಾಮ್ 26 ವರ್ಷ ವಾಸ  ಶಾಂತಿನಗರ ಹಾರ್ನಳ್ಳಿ ಗ್ರಾಮ ಶಿವಮೊಗ್ಗ ತಾಲೂಕು 2) ಸುನಿಲ್ ನಾಯಕ ತಂದೆ ರಾಮ ನಾಯಕ 30 ವರ್ಷ ಬಣಜಾರ ಜನಾಂಗ ವಾಸ ನಾರಾಯಣಪುರ ಗ್ರಾಮ  ಶಿವಮೊಗ್ಗ ತಾಲ್ಲೂಕು ಇಬ್ಬರನ್ನು ಬಂಧಿಸಿ  ಬಂಧಿತರಿಂದ ಸುಮಾರು 12500 ರೂಪಾಯಿ ಮೌಲ್ಯದ 350 ಗ್ರಾಂ ಗಾಂಜಾ ಸೊಪ್ಪನ್ನು ಹಾಗೂ ಗಾಂಜಾ ಸೇವನೆ ಮಾಡಲು ಬಳಸುತ್ತಿದ್ದ ಕೊಳವೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. 


ದಾಳಿಯಲ್ಲಿ ಶಾಂತರಾಜ್ ಪಿಎಸ್ಐ. ತೊಳಚ್ಚನಾಯಕ್ ಪಿಎಸ್ಐ ಸಿಬ್ಬಂದಿಗಳಾದ ಹಾಲಪ್ಪ. ಪ್ರಕಾಶ್. ಶಿವಪ್ಪ. ಶಶಿಧರ್ ನಾಯಕ್.  ವಿನಾಯಕ್. ಶಶಿ.  ಆದರ್ಶ, ರವರು ಭಾಗಿಯಾಗಿದ್ದರು.