ರಾಜಕೀಯ ಸುದ್ದಿಗಳು

ನಾನು ಬಿಜೆಪಿ ಬಿ ಟೀಂ ಅಲ್ಲ ಎ ಟೀಂ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪ ನಾಮಪತ್ರ ಸಲ್ಲಿಸೊಲ್ಲ ಎನ್ನುವವರಿಗೆ ನಿನ್ನೆ ಉತ್ತರ ಸಿಕ್ಕಿದೆ. ಗುರುಶಕ್ತಿ, ನಾರಿ ಶಕ್ತಿ ರೈತ‌ಶಕ್ತಿಯ ನೆರವಿನಿಂದ 25 ಸಾವಿರ ಜನರೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಅಪಪ್ರಚಾರ ನಡೆಸುವವರು ಏನು ಉತ್ತರ ಕೊಡ್ತಾರೆ ಎಂದು ಕಾಯುತ್ತಿರುವುದಾಗಿ ಈಶ್ವರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಈಶ್ವರಪ್ಪನವರಿಗೆ ಕಾಲ ಮಿಂಚಿಲ್ಲ ಎನ್ನುತ್ತಿದ್ದಾರೆ ಏ.19 ರವರೆಗೆ ಅವಕಾಶವಿದೆ ಎಂದಿದ್ದಾರೆ. ಇನ್ನು ಕೆಲವರು ಈಶ್ವರಪ್ಪನವರಿಗೆ ಎಂಎಲ್ ಸಿ ಮತ್ತು ವಿಪಕ್ಷ ನಾಯಕ ಸ್ಥಾನ ದೊರೆಯಲಿದೆ ನಂತರ ಅಖಾಡ ಖಾಲಿ ಮಾಡ್ತಾರೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ನಾನು ಎಲ್ಲೂ ಸ್ಪರ್ಧೆಯಿಂದ ಹಿಂಪಡೆಯಲ್ಲ ಎಂದು ದುರಿದರು.

ನಿನ್ನೆ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಬಸ್ ನ್ನ ತಡೆಯಲಾಗಿದೆ. ಕಾಂಗ್ರೆಸ್ ಮತ್ತು ಸಂಸದರಿಂದ ತಡೆಯಲಾಗಿದೆ ಎಂಬ ಅನುಮಾನವಿದೆ. ಹೀಗೆ ಮಾಡುದ್ರೆ ಜನರನ್ನ ಸಿಟ್ಟಿಗೇಳಿಸಲಾಗುತ್ತದೆ. ಬಿಜೆಪಿಗರು ನೇರ ಚುನಾವಣೆ ನಡೆಸಿ. ದಾರಿ ತಪ್ಪುವ ವ್ಯವಸ್ಥೆ ಮಾಡಬೇಡಿ ಎಂದು ಸವಾಲು ಎಸೆದರು.

ಮಧು ಬಂಗಾರಪ್ಪ ಈಶ್ವರಪ್ಪ ಬಿಜೆಪಿ ಬಿ ಟೀಂ ಎಂದು ಕರೆದಿದ್ದಾರೆ. ಆದರೆ ನನ್ನನ್ನದೇ ನೈಜ ಬಿಜೆಪಿ. ನನ್ನದು ಎ ಟೀಮ್ ಬಿಜೆಪಿಯ ಬಿ ಟೀಂ‌ ಅಲ್ಲ. ಗೀತಾ ಶಿವರಾಜ್ ಕುಮಾರ್ ನನ್ನ ಸಹೋದರಿ ಸಮಾನ. ಆದರೆ ನನ್ನ ಮೇಲೆ ಆರೋಪಿಸುವ ಸಚಿವ ಮಧು ಬಂಗಾರಪ್ಲ ಗೀತಾ ಶಿವರಾಜ್ ಕುಮಾರ್ ನ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲವಾ? ವಿಧಾನ ಸಭೆಯಲ್ಲಿ ನಾಗರಾಜ್ ಗೌಡರನ್ನ ಬದಿಗೊತ್ತಿ ಗೋಣಿ ಮಾಲ್ತೇಶ್ ನ್ನ ಕಣಕ್ಕಿಳಿಸಿ ವಿಜೇಂದ್ರರ ಗೆಲವಿಗೆ ಸಹಕರಿಸಿದ್ದು ನೀವೆ ಅಲ್ವಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮತ್ತು ಮಧು ಬಂಗಾರಪ್ಪ ಎಷ್ಟು ಪಕ್ಷವನ್ನ ಬದಲಾಯಿಸಿಲ್ಲ. ನಾನು ಆರ್ ಎಸ್ ಎಸ್ ನ ಸೇವಕ. ಡಿಸಿಎಂ, ಸಚಿವ ವಿಪಕ್ಷ ನಾಯಕ‌ನಾಗಿ ಬಿಜೆಪಿಯಿಂದಲೇ ಆಗಿದ್ದೇನೆ. ನಾನು ನಿಷ್ಠಾವಂತ ಕಾರ್ಯಕರ್ತನೇ. ಶುದ್ಧೀಕರಣ ಮಾಡಿ ಮತ್ತೆ ಬಿಜೆಪಿಗೆ ಹೋಗುವೆ. ಆದರೆ ಎಟೀಂ ಬಿ ಟೀಮ್ ಎಂದು ಕರೆಯಬೇಡಿ ಎಂದು ಗರಂ ಆದರು.

25 ಸಾವಿರ ಜನ ನಾಮಪತ್ರ ಸಲ್ಲಿಸಿದವರೆಲ್ಲಾ ಹಿಂದೂ ಹುಲಿಗಳು. ಕಾಂಗ್ರೆಸ್ ಮತ್ತು ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಚಿಂತಿಸಬೇಡಿ. ನಾನು ಪಕ್ಷೇತರ‌ ಅಭ್ಯರ್ಥಿಯಾಗಿರುವೆ. ಚಿಹ್ನೆ ಸಿಗುವುದನ್ನ ಕಾಯುತ್ತಿರುವೆ. ಚಿಹ್ನೆ ಸಿಕ್ಕ ನಂತರ ಸಾಮಾನ್ಯ ಮತದಾರರನ್ನ‌ ತಲುಪುವ ಕೆಲಸ ಆರಂಭವಾಗಲಿದೆ ಎಂದರು.

ಬಿಜೆಪಿ ಹೈಕಮ್ಯಾಂಡ್ ರಾಧ ಮೋಹನ್ ಅಗರ್ ವಾಲ್ ಈಶ್ವರಪ್ಪ ಯಾರು ಎಂದಿದ್ದಾರೆ. ಅವರು ಮನೆಗೆ ಯಾಕೆ ಬಂದರು? ಗೆದ್ದ ಮೇಲೆ ಇದೇ ರಾಧ ಮೋಹನ್ ರನ್ನ ಕರೆದುಕೊಂಡು ದೆಹಲಿಗೆ ಹೋಗುವೆ ಎಂದು ಈಸ್ವರಪ್ಪ ತಿಳಿಸಿದರು.‌

ಒರಿಜನಲ್ ಹಿಂದುತ್ವವನ್ನ ಹಿಂದೆ ಸರಿಸುವ ಮೂಲಕ ಬಿಎಸ್ ವೈ ಮಗ ವಿಜೇಂದ್ರನಿಗೆ ಸಿಎಂ ಆಗಲು ಪಕ್ಷದಲ್ಲಿ ಸ್ಪರ್ಧಿಗಳು ಆಗದಂತೆ ನಿರ್ಮಾಣ ಮಾಡುವ ಹುನ್ನಾರವಾಗಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪನವರ ಹೆಸರು ಕೇಳಿಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ನಾವು ನಾಯಕ ಬಿಎಸ್ ವೈ ಎಂದು ನಂಬಿ ಸಹಕರಿಸಿದ್ವಿ. ಸಹಕರಿಸಿದರೆ ಅಭಿವೃದ್ಧಿಯಲ್ಲಿ ಪಾಲು ಇಲ್ಲ ಅಂತನಾ ಎಂದು ಪ್ರಶ್ನಿಸಿದರು.

ಹಿಂದುತ್ವ ಉಳಿಯುವಿಕೆ, ಬಿಜೆಪಿ ಪಕ್ಷ ಶುದ್ದೀಕರಣ, ಅಪ್ಪಮಗನಿಂದ ಪಕ್ಷವನ್ನ ಮುಕ್ತಗೊಳಿಸಿ ಶಿವಮೊಗ್ಗವನ್ನ ಅಭಿವೃದ್ಧಿ ನನ್ನ ಪ್ರನಾಳಿಕೆ ಆಗಿದೆ. ಎಂಪಿ ಆದ ಮೇಲೆ ಅಙಿವೃದ್ಧಿ ಮಾಡೋದು ನನ್ನ‌ ಡ್ಯೂಟಿ. ಆದರೆ ನಾನು ಕೇವಲ ಅಭಿವೃದ್ಧಿ ಎಂದು ಸ್ಪರ್ಧಿಸಿದರೆ ನನ್ನ ಸ್ಪರ್ಧೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗ್ತಿತ್ತಾ ಎಂದು ಪ್ರಶ್ನಿಸಿದರು.

ನಿನ್ನೆ ನನ್ನ ನಾಮಪತ್ರ ಸಲ್ಲಿಜೆ ವೇಳೆ ಬಂದಿದ್ದ ಮೋದಿಯನ್ನ ಆಹ್ವಾನಿಸಿರಲಿಲ್ಲ. ಅವರಿಗೂ ಚುನಾವಣೆಯಲ್ಲಿ ಈಶ್ವರಪ್ಪ ಸ್ಪರ್ಧಿಸಿ ಪಕ್ಷ ಶುದ್ಧೀಕರಣವಾಗಲಿ ಎಂಬುದು ಅವರ ಮನದಲ್ಲಿಯೂ ಇದೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಬಂದಿದ್ದ ಮೋದಿಗೂ ಇದೆ ಎಂದರು.

ನಾಳೆ 288 ಬೂತ್ ಗೂ ನಮ್ಮ ಕಾರ್ಯಕರ್ತರು ಮನೆ ಮನೆ ಪ್ರಚಾರಕ್ಕೆ ತೆರಳಿ ಕರಪತ್ರ ಹಂಚುತ್ತಾರೆ ಎಂದರು.

ಇದನ್ನೂ ಓದಿ-https://suddilive.in/archives/12715

Related Articles

Leave a Reply

Your email address will not be published. Required fields are marked *

Back to top button