ಕ್ರೈಂ
ಹೋಟೆಲ್ ಉದ್ದಿಮೆ ಕೈಕೊಟ್ಟಿದ್ದಕ್ಕೆ ಮಾಲೀಕಳು ನಾಪತ್ತೆಯಾದ್ರಾ?

ಸುದ್ದಿಲೈವ್/ಭದ್ರಾವತಿ
ಭದ್ರಾವತಿ ಬಿ.ಹೆಚ್ ರಸ್ತೆಯಲ್ಲಿರುವ ಮಗಳ ಮನೆಯಿಂದ ಮೊಮ್ಮಗನಿಗೆ ಬಿಸ್ಕತ್ ತರುವುದಾಗಿ ಹೇಳಿ 48 ವರ್ಷದ ಮಹಿಳೆಯೊಬ್ಬಳು ಕಾಣೆಯಾಗಿದ್ದಾರೆ.

ನಗರದ ಸಿ.ಎನ್ ರಸ್ತೆಯಲ್ಲಿ ಗೋಕುಲ್ ಹೋಟೆಲ್ ನಡೆಸುತ್ತಿದ್ದ ಶಾಂತಿ ಎಂಬ ಮಹಿಳೆ ಒಂದು ತಿಂಗಳ ಹಿಂದೆ ಹೋಟೆಲ್ ಉದ್ದಿಮೆ ನಷ್ಟವಾಗಿದ್ದಕ್ಕೆ ಬಂದ್ ಮಾಡಿದ್ದರು. ಆದರೆ ಅವರಿವರಿಂದ ಮಹಿಳೆ ಕೈ ಸಾಲ ಮಾಡಿಕೊಂಡಿದ್ದರು.
ಸಾಲಗಾರರು ಮನೆಯ ಬಳಿ ಬಂದು ಮರುಪಾವತಿಗೆ ಒತ್ತಾಯಿಸುತ್ತಿದ್ದರು ಎಂದು ಪತಿ ದೂರಿನಲ್ಲಿ ದಾಖಲಿಸಿದ್ದಾರೆ. ಬಿ.ಹೆಚ್ ರಸ್ತೆಯಲ್ಲಿರುವ ಮಗಳ ಮನೆಗೆ ಪತಿ ಪತ್ನಿಯರು ಬಂದಿದ್ದು ಮೊಮ್ಮಗನಿಗೆ ಬಿಸ್ಕತ್ ತರುವುದಾಗಿ ಹೇಳಿ ಹೋದ ಮಹಿಳೆ ಶಾಂತಿ ವಾಪಾಸಾಗಲಿಲ್ಲ
ಈ ಬಗ್ಗೆ ಕುಟುಂಬದವರೆಲ್ಲಾ ಹುಡುಕಾಡಿದ್ದಾರೆ. ಆದರೆ ಮಹಿಳೆ ನಾಪತ್ತೆಯಾಗಿದ್ದಾರೆಂದು ಮಹಿಳೆಯ ಪತಿ ರವಿ ಎಂಬುವರು ಭದ್ರಾವತಿ ಹಳೇ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/?p=18157
