ಕ್ರೈಂ
ಸತತ ಎರಡು ತಿಂಗಳಿಂದ ನಾಲ್ಕು ಗೋವುಗಳ ಕಳ್ಳತನ

ಸುದ್ದಿಲೈವ್/ಶಿವಮೊಗ್ಗ
ಕಳೆದ ಎರಡು ತಿಂಗಳಿಂದ ಸತತವಾಗಿ ಒಂದೇ ಮಾಲೀಕನ ಗೋವುಗಳನ್ನ ಕದ್ದುರುವ ಘಟನೆ ರಾಗಿಗುಡ್ಡದಲ್ಲಿ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳನ್ನ ಕದ್ದುಕೊಂಡು ಹೋಗಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಗಿಗುಡ್ಡದ ಅಮಾನುಲ್ಲಾ ಖಾನ್ ಎಂಬುವರು ನಾಲ್ಕು ಹಸುಗಳನ್ನ ಸಾಕಿಕೊಂಡು ಬಂದಿದ್ದಾರೆ. ಮಾರ್ಚ್ ತಿಂಗಳಲ್ಲಿ 60 ಸಾವಿರ ರೂ.ಮೌಲ್ಯದ ಮೂರು ಹಸುಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದಾಗ ಕಳುವಾಗಿತ್ತು.
ಕೊಟ್ಟಿಗೆಯಲ್ಲಿದ್ದ ಹಸುಗಳನ್ನ ಕದ್ದಿದ್ದ ದನಗಳ್ಳರು ಮತ್ತೆ ಮೇ.19 ರಂದು ಕೊಟ್ಟಿಗೆಯಲ್ಲಿದ್ದ 20 ಸಾವಿರ ರೂ ಮೌಲ್ಯದ ಹಸುಗಳನ್ನ ಕಳವು ಮಾಡಲಾಗಿದೆ ಎಂದು ಅಮಾನುಲ್ಲಾ ನಿನ್ನೆ ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/?p=18148
