ಯುವಕನೋರ್ವನಿಂದ ಬಲತ್ಕಾರಕ್ಕೆ ಯತ್ನ ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲೊಂದು ಯುವಕನೋರ್ವನಿಂದ ಅನ್ಯ ಕೋಮಿನ ಮಹಿಳೆಯನ್ನ ಬಲತ್ಕಾರಕ್ಕೆ ಯತ್ನಿಸಿದ ಪ್ರಕರಣವೊಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶಿವಮೊಗ್ಗದಲ್ಲಿ ಓಲ್ಡ್ ಮಂಡ್ಲಿ ನಿವಾಸಿಯಾಗಿರುವ ಮಹಿಳೆಯೋರ್ವರು ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ಮಹಿಳೆಯರ ಸಂಘ ರಚಿಸಿ ಸಾಲ ಕೊಡಿಸುವ ವೃತ್ತಿ ನಡೆಸುತ್ತಿದ್ದರು. ಈ ವೃತ್ತಿಯಲ್ಲಿರುವಾಗ ಯುವಕನೋರ್ವ ಪರಿಚಯವಾಗಿರುತ್ತಾನೆ.
ಮಹಿಳೆಗೂ ಮದುವೆಯಾಗಿದ್ದರೂ, ಯುವಕ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದನು ಎಂದು ಮಹಿಳೆ ತಾನು ದಾಖಲಿಸಿದ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾಳೆ. ಮೇ. ೨೩ ರಂದು ಯುವಕ ಮಹಿಳೆಗೆ ಕರೆ ಮಾಡಿದ ಯುವಕ ಅರ್ಜೆಂಟಾಗಿ ಮಾತನಾಡುವುದಿದೆ ಎಂದಿದ್ದಾನೆ.
ಅರ್ಜೆಂಟಾಗಿ ಮಾತನಾಡಬೇಕಿತ್ತು ಎಂದು ಕರೆ ಮಾಡಿದ ಯುವಕ ಮನೆಗೆ ಬಂದು ಮಹಿಳೆಯನ್ನ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಮಹಿಳೆಯ ಗಂಡನಿಗೆ ಮತ್ತು ಗಂಡನ ಸ್ನೇಹಿತನಿಗೆ ಕರೆ ಮಾಡಿ ಯುವಕನ ಬಗ್ಗೆ ವಿವರಿಸಿದ್ದಾಳೆ.
ತಕ್ಷಣ ಮನೆಗೆ ಬಂದ ಗಂಡ ಮತ್ತು ಆತನ ಸ್ನೇಹಿತನನ್ನ ಕಂಡು ಯುವಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಫ್ಐಆರ್ ನಲ್ಲಿ ಮಹಿಳೆ ಒತ್ತಾಯಿಸಿದ್ದಾಳೆ.
ಇದನ್ನೂ ಓದಿ-https://suddilive.in/?p=18132
