ಸ್ಥಳೀಯ ಸುದ್ದಿಗಳು

ಜನರಿಗೆ ಸಿಹಿ ಹಂಚಿಕೆ

ಸುದ್ದಿಲೈವ್/ಶಿವಮೊಗ್ಗ

ನಗರದ ಶಿವಪ್ಪ ನಾಯಕನ ವೃತ್ತದಲ್ಲಿ ಅಯೋಧ್ಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಿಹಿ ಹಂಚಲಾಯಿತು.

ಹಿಂದೂ ಸಂಘಟನೆಗಳ ಜೊತೆಗೆ ಮ್ಯಾಕ್ಸ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಸಮೂಹ ಲಾಡು ಹಂಚುವಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಐದು ಸಾವಿರ ಜನರಿಗೆ ಲಾಡು ಹಂಚುವ ವ್ಯವಸ್ಥೆ ಮಾಡಲಾಗಿದೆ.

ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಾಲನೆ ನೀಡುವ ಮುನ್ನಾ ಮಾತನಾಡಿದ ಸ್ವಾಮಿಗಳುಭಾರಕ್ಕೆ ಮಹತ್ವ‌ಬಂದಿರುವುದೇ ಸಂಸ್ಕೃತಿಯಿಂದ. ರಾಮಲಲ್ಲಾನನ್ನ‌ ಪ್ರತಿಷ್ಠಾಪಿಸಿ ರಾಮ ರಾಜ್ಯವನ್ನ ಬಯಸಲಾಗುತ್ತಿದೆ. ಸೌಹಾರ್ಧತೆಯಿಂದ ಬದುಕುವುದೇ ರಾಮ ರಾಜ್ಯದ ಕಲ್ಪನೆ. ದೇವರು ಎಲ್ಲಕಡೆ ಕಾಣಲ್ಲ. ಆದರೆ‌ ಮಹಾಪುರುಷರ ರೂಪದಲ್ಲಿ ಜನರಿಗೆ ಸಹಾಯವಾಗುತ್ತಾನೆ ಎಂದರು.

ಜನ್ಮ ಸ್ಥಳದಲ್ಲಿ ರಾಮನ ಪ್ರಾಣ ಪ್ರತಿಷ್ಠಾನ ಮಾಡಲಾಗುತ್ತಿದೆ. ಸಿಹಿ ಹಂಚುವುದು ಕೇವಲ ಬಾಯಿ ಸಿಹಿ ಮಾಡಿಕೊಳ್ಳುವುದಕ್ಕಲ್ಲ. ಸುಖ ಶಾಂತಿ ನೆಮ್ಮದಿ ಕಾರಣವಾಗಲಿ ಎಂದು ಸಹ ಸಿಹಿ ಹಂಚಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್, ಶ್ರೀರಾಮ ಜಯ ರಾಮ‌ಜಯ ರಾಮ ಎಂದು 13 ಭಾರಿ ಸ್ಥಳದಲ್ಲೇ ಮಂತ್ರ ಪಠಿಸಲಾಯಿತು. ನಂತರ ಮಾತನಾಡಿದ ಆರ್‌ಎಸ್ ಎಸ್ ನ ದಕ್ಷಿಣ ಪ್ರಾಂತ್ಯ ಸಹಸಂಚಲಾಕರಾದ ಪಟ್ಟಭಿರಾಮ್ ಮಾತನಾಡಿ,‌ ಅದು ಕೇವಲ ರಾಮ‌ಮಂದಿರ ಅಲ್ಲ ರಾಷ್ಟ್ರಮಂದಿರ ಆಗಬೇಕು. ರಾಮನ ನಡವಳಿಕೆಯನ್ನ‌ ನೈಜ ಜೀವನದಲ್ಲಿ ಅಳವಡಿಸಿಕೊಳ್ಳೋಣ. ರಾಮನೇ ಧರ್ಮ, ರಾಮನೇ ರಾಷ್ಟ್ರ ಪುರುಷನಾಗವೇಕು. ರಾಮ ಮಂದಿರ ನಿರ್ಮಾಣ ಲೋಕಾರ್ಪಣೆಯಲ್ಲಿ‌ಮುಸ್ಲೀಂ ರು ಪಾಲ್ಗೊಂಡಿದ್ದಾರೆ. ಹಾಗಾಗಿ ರಾಮ ಎಲ್ಲರಿಗೂ ಸೇರಿದವನು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ, ಪುತ್ರ ಕಾಂತೇಶ್, ಸಂಸದ ಬಿ.ವೈ.ರಾಘವೇಂದ್ತ, ಶಾಸಕರಾದ ಚೆನ್ನ ಬಸಪ್ಪ, ಡಿ.ಎಸ್.ಅರುಣ್, ರುದ್ರೇಗೌಡ, ಮೊದಲಾದವರು ಭಾಗಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button