Follow on Google news Follow on Google news
ಸ್ಥಳೀಯ ಸುದ್ದಿಗಳು

ಬೋಗಿಯನ್ನ ಬಿಟ್ಟು ಚಲಿಸಿದ ಇಂಜಿನ್-ಒಂದು ಗಂಟೆ ಇಂಟರ್ ಸಿಟಿ ರೈಲು ತಡ

ಸುದ್ದಿಲೈವ್/ಶಿವಮೊಗ್ಗ

ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಬೋಗಿ ಮತ್ತು ಇಂಜಿನ್ ಬೇರ್ಪಟ್ಟು 40 ನಿಮಿಷ ರೈಲು ಸಂಚಾರ ತಡವಾಗಿರುವ ಘಟನೆ ನಡೆದಿದೆ.

ಬೆಳಿಗ್ಗೆ 7-05 ಕ್ಕೆ ಹೊರಡುವ ತಾಳಗುಪ್ಪ-ಬೆಂಗಳೂರು ರೈಲು ಬಿದರೆ ರೈಲ್ವೆ ನಿಲ್ದಾಣದ ಬಳಿ ಬರುತ್ತಿದ್ದಂತೆ ತಾಂತ್ರಿಕ ದೋಷದಿಂದ ಬೋಗಿ ಮತ್ತು ಇಂಜಿನ್ ನಡುವಿನ ಕಪ್ಪಲಿಂಗ್ ಬಿಟ್ಟುಕೊಂಡು ಇಂಜಿನ್ ಮತ್ತು ಬೋಗಿ ಬೇರ್ಪಟ್ಟಿದೆ.

7-35 ರ ಸಮಯದಲ್ಲಿ ಬಿಳಕಿ ರೈಲ್ವೆ ನಿಲ್ದಾಣದ ಬಳಿ ಇಂಟರ್ ಸಿಟಿ ರೈಲು ತಲುಪುತ್ತಿದ್ದಂತೆ ಇಂಜಿನ್ ಮತ್ತು ಬೋಗಿ ಬೇರ್ಪಟ್ಟಿದೆ. 8-14 ರ ವೇಳೆಗೆ ಎರಡನ್ನೂ ಜೋಡಿಸಿ ಭದ್ರಾವತಿ ಕಡೆ ಸಂಚರಿಸಿದೆ

ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ದುರಸ್ಥಿ ಕಾರ್ಯಕ್ಕೆ 20 ನಿಮಿಷ ತಡವಾಗಿದೆ. ಒಟ್ಟಿನಲ್ಲಿ ಒಂದು ಗಂಟೆಗಳ ಕಾಲ ಇಂಟರ್ ಸಿಟಿ ರೈಲು ತಡವಾಗಿ ಚಲಿಸಿದೆ.

ಇದನ್ನೂ ಓದಿ-https://suddilive.in/?p=18079

Related Articles

Leave a Reply

Your email address will not be published. Required fields are marked *

Follow on Google news
Back to top button