ಕ್ರೈಂ ನ್ಯೂಸ್

ನಾಲೆಯ ದಂಡೆಯ ಮೇಲೆ ಮಕ್ಕಳ ಬಟ್ಟೆ ಪತ್ತೆ-ಶೋಧಕಾರ್ಯ ಆರಂಭ

ಸುದ್ದಿಲೈವ್/ಶಿವಮೊಗ್ಗ

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆನವೇರಿಯಲ್ಲಿರುವ ಭದ್ರ ಉಪ ಚಾನೆಲ್ ನಲ್ಲಿ ಅಗ್ನಿಶಾಮಕದಳ ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಚಾನೆಲ್ ನೀರಿನಲ್ಲಿ ಇಳಿದಿದ್ದ ಮಕ್ಕಳು ನೀರು ಪಾಲಾಗಿದ್ದಾರೆ ಎಂಬ ಸುದ್ದಿಯ ಹಿನ್ನಲೆಯಲ್ಲಿ ಈ ಶೋಧಕಾರ್ಯವನ್ನ ತಂಡ ಆರಂಭಿಸಿರುವುದಾಗಿ ತಿಳಿದು ಬಂದಿದೆ. ದಂಡೆಯ ಮೇಲೆ ಮಕ್ಕಳ ಬಟ್ಟೆ ಪತ್ತೆಯಾಗಿರುವುದು ಮಕ್ಕಳು ನೀರು ಪಾಲಾಗಿರುವ ಬಗ್ಗೆ ಪುಷ್ಠಿಕರಿಸಿವೆ.

ಮನೆಗೆ ಬಾರದ ಮಕ್ಕಳ ಬಗ್ಗೆ ಪೋಷಕರು ಹುಡುಕಾಡಿದ್ದಾರೆ. ಮಕ್ಕಳ ಬಟ್ಟೆ ನಾಲೆಯ ದಂಡೆಯ ಮೇಲೆ ಪತ್ತೆಯಾದ ಹಿನ್ನಲೆಯಲ್ಲಿ ಮಕ್ಕಳು ನೀರಿಗೆ ಇಳಿದಿದ್ದಾರೆ ಎಂಬ ಸಂಶಯಕ್ಕೆ ಅನುವು ಮಾಡಿಕೊಟ್ಟಿದೆ. ಶೋಧಕಾರ್ಯ ಆರಂಭವಾಗಿದೆ.

ಇಬ್ಬರ ಹೆಸರು ಗೊತ್ತಾಗಬೇಕಿದೆ.‌ ಒಬ್ವರದು 6 ವರ್ಷ ಮತ್ತು 10 ವರ್ಷದ ಮಕ್ಕಳು ನೀರುಪಲಾಗಿರುವುದಾಗಿ ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಶೋಧಕಾರ್ಯಕ್ಕಾಗಿ ನಾಲೆಯ ನೀರನ್ನೂ ತಗ್ಗಿಸಲಾಗಿದೆ.

ಇದನ್ನೂ ಓದಿ-https://suddilive.in/archives/13448

Related Articles

Leave a Reply

Your email address will not be published. Required fields are marked *

Back to top button