ಎರಡು ಪ್ರತ್ಯೇಕ ರಸ್ತೆ ಅಪಘಾತ-ಅಂಬಾರಗೊಪ್ಪದಲ್ಲಿ ಯುವಕ ಸಾವು-ರೇಲಿಂಗ್ ಮೇಲೆ ಹತ್ತಿಕುಳಿತ ಕಾರು

ಸುದ್ದಿಲೈವ್/ಶಿಕಾರಿಪುರ/ಶಿವಮೊಗ್ಗ
ಶಿಕಾರಿಪುರ ತಾಲೂಕು ಅಂಬರಗೊಪ್ಪ ಗ್ರಾಮದ ಬಳಿ ರಸ್ತೆ ಅಪಘಾತವಾಗಿದ್ದು ಹಾವೇರಿ ಜಿಲ್ಲೆ ಸವಣೂರು ತಾಲೂಕು ಹತ್ತಿಮತ್ತೂರು ಗ್ರಾಮದ ನಿವಾಸಿ ಸಾವನ್ನಪ್ಪಿದ್ದಾನೆ.

ಶಿಕಾರಿಪುರದಿಂದ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದ ಹನುಮಂತಪ್ಪ ಎಂಬ 37 ವರ್ಷದ ವ್ಯಕ್ತಿ ಬೈಕ್ ನಲ್ಲಿ ತೆರಳುವಾಗ ರಸ್ತೆ ಅಪಘಾತವಾಗಿದ್ದು ಇದು ಸಹ ಹಿಟ್ ಅಂಡ್ ರನ್ ಪ್ರಕರಣದ ಶಂಕೆ ವ್ಯಕ್ತವಾಗಿದೆ.
ಘಟನೆ ನಡೆದಿದ್ದು ಹೇಗೆ?
ಅಂಬಾರಗೊಪ್ಪದ ಗ್ರಾಮ ಬಳಿ ಪ್ಯಾಸೆಂಜರ್ ವಾಹನವೊಂದು ಜನರನ್ನ ಇಳಿಸುತ್ತಿದ್ದ ವೇಳೆ ಹಿಂದಿನಿಂದ ಬೈಲ್ ನಲ್ಲಿ ಬಂದ ಹನುಮಂತಪ್ಪ ಬಲಭಾಗದಿಂದ ಬಂದು ಓವರ್ ಟೇಕ್ ಮಾಡಲು ಎತ್ತಿಸಿದ್ದಾನೆ.
ಫವರ್ ಟೇಕ್ ಮಾಡುವ ವೇಳೆ ಎದುರಿನಿಂದ ಬಂದ ವಾಹನವನ್ನ ತಪ್ಪಿಸಲು ಯತ್ನಿಸಿದ ಹನುಮಂತು ಎದುರುನಿಂದ ಬಂದ ವಾಹನಕ್ಕೆ ಹ್ತಾಂಡಲ್ ತಗುಲಿ ಹನುಮಂತು ಚಲಿಸುತ್ತಿದ್ದ ವಾಹನದಿಂದ ಪಲ್ಟಿ ಹೊಡೆದಿದ್ದಾನೆ.
ತಲೆಗೆ ಹೊಡೆತಬಿದ್ದ ಹನುಮಂತಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಹತ್ತಿರದ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ಮಲಗೊಪ್ಪದ ಬಳಿ ರೇಲಿಂಗ್ ಮೇಲೆ ಹತ್ತಿಕುಳಿತ ಕಾರು
ಶಿವಮೊಗ್ಗದ ಮಲವಗೊಪ್ಪ ಮತ್ತು ಹರಿಗೆ ಮಧ್ಯೆ ಮಾರುತಿ ಸ್ವಿಫ್ಟ್ ಕಾರೊಂದು ರಸ್ತೆ ಬದಿಗೆ ನಿರ್ಮಿಸಿರುವ ರೇಲಿಂಗ್ ಮೇಲೆ ಹತ್ತಿ ನಿಂತಿದೆ. ಈ ಅಪಘಾತದಲ್ಲಿ ಚಾಲಕ ವಿನಾಯಕ ಎಂಬಾತನಿಗೆ ಗಾಯಗಳಾಗಿದೆ. ಆದರೆ ಪ್ರಕರಣ ಹತ್ತಿರದ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಇದನ್ನೂ ಓದಿ-https://suddilive.in/?p=18073
