ಮದ್ಯದಂಗಡಿಯಲ್ಲಿ ಕೌಂಟರ್ ಶಾಟ್ಸ್ ಹೊಡೆಯುವ ಹಾಗಿಲ್ಲ ಬೇಳೂರು ಖಡಕ್ ವಾರ್ನಿಂಗ್

ಸುದ್ದಿಲೈವ್/ಶಿವಮೊಗ್ಗ
ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರ್ ತನ್ನ ಕ್ಷೇತ್ರಕ್ಕೆ ಮರಳಿ ಅಧಿಕಾರಿಗಳ ಪ್ರಥಮ ಸಭೆ ನಡೆಸಿದರು. ಬಳಿಕ ಮಾತನಾಡಿ ಮದ್ಯದಂಗಡಿ ಕೌಂಟರ್ ಎದುರು ಮದ್ಯ ಸೇವಿಸುವ ಹಾಗಿಲ್ಲ. ಗಾಂಜಾ, ಓಸಿಗೆ ಆಸ್ಪದ ಇಲ್ಲ ಎಂದರು. ಮಂತ್ರಿ ಪದವಿಗೆ ಲಾಭಿ ಮಾಡಿರೋದಾಗಿಯೂ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ಇಂದು ತಾಲೂಕಿನ ಅಧಿಕಾರಿಗಳನ್ನ ಕರೆದು ಮುಂಗಾರು ಪೂರ್ವ ಕಾರ್ಯಗಳ ಬಗ್ಗೆ ಚರ್ಚಿಸಲಾಗಿದೆ. ಶಾಲೆಗಳೂ ಸಹ ಆರಂಭವಾಗುತ್ತಿದ್ದು ಸ್ಥಿತಿಗತಿಗಳನ್ನ ಪರಿಶೀಲನೆ ಮಾಡಿದ್ದೇವೆ. ವಿದ್ಯುತ್, ಕುಡಿಯುವ ನೀರು ಕೂಡ ಸಭೆಯ ಪ್ರಮುಖ ಅಂಶಗಳಾಗಿದ್ದವು.
ಗಾಂಜಾ, ಓಸಿ ಇದ್ದರೆ ಯಾವ ಕಾರಣಕ್ಕೂ ಬೇಳೂರು ಆಸ್ಪದ ನೀಡೋದಿಲ್ಲ. ಅಧಿಕಾರಿಗಳಿದ್ದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತೇನೆ. ಹೆಂಡದ ಅಂಗಡಿಯಲ್ಲಿ ಕೌಂಟರ್ ಲ್ಲಿ ಎಣ್ಣೆ ಹಾಕುವ ಹಾಗಿಲ್ಲ. ಎಲ್ಲಾ ಬಾರ್ ಒಳಗಡೆ ಕುಡೀಬೇಕು. ನಾನು ಅಬಕಾರಿ ಇಲಾಖೆ ಜೊತೆ ಮಾತನಾಡಿದ್ದೇನೆ.
ಅದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇನೆ. ಬಾರ್ ಹಾಗೂ ಮದ್ಯದ ಅಂಗಡಿಗಳು ಸಮಯಕ್ಕೆ ಸರಿಯಾಗಿ ತರೆಯಬೇಕು, ಮುಚ್ಚಬೇಕು. ನಿಯಮ ಉಲ್ಲಂಘನೆ ಮಾಡುವ ಹಾಗಿಲ್ಲ. ನನಗೆ ಜನರ ಆರೋಗ್ಯ ಮುಖ್ಯ. ಕೆಲವು MSIL ಅಂಗಡಿಗಳನ್ನ ತೆರೆದಿದ್ದಾರೆ. ಅವುಗಳಿಗೆ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಜನರಿಂದ ಎಲ್ಲೆಲ್ಲಿ ವಿರೋಧ ಇದ್ಯೋ ಅಲ್ಲಿರುವ ಮದ್ಯದ ಅಂಗಡಿಗಳನ್ನ ತೆರವು ಮಾಡುತ್ತೇನೆ ಎಂದರು.
ಇನ್ನು ಸಚಿವ ಸ್ಥಾನದ ಬಗ್ಗೆ ಮಾತನಾಡಿ,
ನಾನೂ ಕೂಡ ಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ನನ್ನ ಬೇಡಿಕೆ ರಾಜ್ಯ ರಾಷ್ಟ್ರೀಯ ನಾಯಕರ ಬಳಿ ಇಟ್ಟಿದ್ದೇನೆ. ಒತ್ತಡ ಹಾಕಿದ್ದೇನೆ. ಮಂತ್ರಿ ಪದವಿ ಕೊಟ್ಟರೆ ಮಾಡ್ತೀನಿ, ಕೊಡದಿದ್ದರೆ ನನ್ನ ಪಕ್ಷದ ಕೆಲಸ ನಾನು ಮಾಡಿಕೊಂಡು ಹೋಗ್ತೀನಿ. ಮಧು ಬಂಗಾರಪ್ಪ ಕೂಡ ಸಚಿವ ಸ್ಥಾನ ಆಕಾಂಕ್ಷಿ ಪಟ್ಟಿಯಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಯಾರಿಗಾದರೂ ಒಬ್ಬರಿಗೆ ಕೊಡಬೇಕು. ನೋಡೋಣ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ರಾಜ್ಯ ನಾಯಕರು ಏನು ತೀರ್ಮಾನ ಮಾಡುತ್ತಾರೆಂದು ಗೋಪಾಲಕೃಷ್ಣ ಹೇಳಿದರು.
ಅಂಬ್ಲಿಗೋಳ ಜಲಾಶಯದಿಂದ ಬಹುಕೋಟಿ ಖರ್ಚು ಮಾಡಿ ನೀರಾವರಿ ಯೋಜನೆ ಮಾಡಿರುವ ಬಿಜೆಪಿ ಸರ್ಕಾರ ಒಂದು ಹನಿ ನೀರನ್ನ ಜನರಿಗೆ ಹಂಚಲು ಆಗಿಲ್ಲ. ಹಿಂದಿನ ಸರ್ಕಾರದ ದುರಂತ. ಇಂತಹ ಅವ್ಯವಸ್ಥೆ ನಾನು ನೋಡಿರಲಿಲ್ಲ. ನಾನು ಶರಾವತಿಯಿಂದ ನೀರು ತಂದ ಭಗೀರಥ. ಬಿಜೆಪಿ ಸರ್ಕಾರ ವೈಫಲ್ಯಗಳಿವು ಎಂದರು.
ಇದನ್ನೂ ಓದಿ-https://suddilive.in/?p=18066
