Follow on Google news Follow on Google news
ಸ್ಥಳೀಯ ಸುದ್ದಿಗಳು

ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನ ತಕ್ಷಣವೇ ರದ್ದು ಪಡಿಸಲು ರಾಜ್ಯ ರೈತ ಸಂಘ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ನಾಗಸಮುದ್ರದಲ್ಲಿ ಇಂದು ರೈತರ 41 ನೇ ಹುತಾತ್ಮ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದ್ದು ರೈತರು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಹೊಸ ಸರ್ಕಾರಕ್ಕೆ ರಾಜ್ಯ ರೈತ ಸಂಘ ರವಾನಿಸಿದೆ.

ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನ ತಕ್ಷಣವೇ ರದ್ದು ಪಡಿಸಬೇಕು, ರೈತನ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್‌ರವರ ವರದಿ ಪ್ರಕಾರ ಬೆಲೆ ನಿಗಧಿ ಪಡಿಸಬೇಕು. ಬಗರ್‌ಹುಕ್ಕುಂ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆಯನ್ನ ರಾಜ್ಯದ ನೂತನ ಸರ್ಕಾರದ ಮುಂದೆ ಸಂಘ ಬೇಡಿಕೆನಿಟ್ಟಿದೆ.

1982 ಮೇ 25ರಂದು ಭದ್ರಾವತಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ 3ಜನ ರೈತರು ಗೋಲಿಬಾರ್ ನಲ್ಲಿ ಪೊಲೀಸ್‌ರ ಗುಂಡಿಗೆ ಹುತಾತ್ಮರಾಗಿದ್ದರು. ಇಂದು ನಾಗಸಮುದ್ರದ ಹುತಾತ್ಮರ ಸ್ಮಾರಕದ ಬಳಿ 41ನೇ ವರ್ಷದ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಹಾಜರಿದ್ದ ರೈತರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರು ಹುತಾತ್ಮರಿಗೆ ಪುಷ್ಪನಮನವನ್ನು ಸಲ್ಲಿಸಿ, ಧ್ವಜಾರೋಹಣ ನಡೆಸಿ ಮಾತನಾಡಿ 2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಬಹುಮತ ಪಡೆದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ, ಡಿ.ಕೆ ಶಿವಕುಮಾರ್‌ರವರು ಉಪಮುಖ್ಯಮಂತ್ರಿಗಳಾಗಿ ಜೊತೆಗೆ 8ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದನ್ನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಭಿನಂದಿಸುತ್ತದೆ ಎಂದರು.

ಕರ್ನಾಟಕದಲ್ಲಿ ವಿಶೇಷವಾಗಿ ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದ ಜನರು, ಬಡವರು ಎಲ್ಲಾ ಜಾತಿಯ, ಧರ್ಮದ ಜನರು ಸರ್ಕಾರದ ಮೇಲೆ ತುಂಬಾ ಅಕಾಂಕ್ಷೆಗಳನ್ನ ಇಟ್ಟು ಮತವನ್ನು ಹಾಕಿ ಗೆಲ್ಲಿಸಿದ್ದಾರೆ. ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸುವುದು, ರೈತ ವಿರೋಧಿ 3ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದು, ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡುವುದು,

ರೈತರಿಂದ ದವಸ ಧಾನ್ಯಗಳನ್ನ ಖರೀದಿ ಮಾಡಲು ಆವರ್ತನಿಧಿಯನ್ನು ಮೀಸಲಿಡುವುದು, ಬಗರ್‌ಹುಕ್ಕುಂ ರೈತರಿಗೆ ಹಕ್ಕುಪತ್ರ ವಿತರಿಸಬೇಕು, ಮಲೆನಾಡು ಭಾಗದ ಭೂಮಿ ಸಮಸ್ಯೆಯನ್ನ ಪರಿಹರಿಸಬೇಕು, ವಿದ್ಯುತ್ ಖಾಸಗೀಕರಣ ಮಾಡದೆ ಇರುವುದು, ಖಾಸಗೀಕರಣದ ಹುನ್ನಾರವಾಗಿರುವ ರೈತರ ಐ.ಪಿ ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಣೆಯನ್ನು ಮಾಡಬಾರದು, ಏತ ನೀರಾವರಿ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡುವುದು ಇನ್ನು ಹಲವಾರು ಸಮಸ್ಯೆಗಳನ್ನ ಒಳಗೊಂಡ ರೈತರ ಪ್ರಣಾಳಿಕೆಯನ್ನು ಕರ್ನಾಟಕ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸಭೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿ.ಜೆ.ಪಿ, ಕಾಂಗ್ರೇಸ್, ಜೆ.ಡಿ.ಎಸ್ ಪಕ್ಷಗಳಿಗೆ ಕೊಡಲಾಗಿತ್ತು.

ಈ ಸಭೆಯಲ್ಲಿ ಬಿ.ಜೆ.ಪಿ ಪಕ್ಷದಿಂದ ಯಾರು ಭಾಗವಹಿಸಿರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾದ ಪ್ರೋ. ರಾಧಕೃಷ್ಣ, ಕರ್ನಾಟಕದ ಉಸ್ತುವಾರಿ ಆನಂದಶರ್ಮಾ ಭಾಗವಹಿಸಿ ರೈತರ ಸಮಸ್ಯೆಗಳಿರುವ ಈ ಪ್ರಣಾಳಿಕೆಯನ್ನ ಒಪ್ಪಿ ಈಡೇರಿಸುವುದಾಗಿ ಗ್ಯಾರಂಟಿ ಪತ್ರಕ್ಕೆ ಪಕ್ಷದ ಪರವಾಗಿ ಪ್ರೋ. ರಾಧಕೃಷ್ಣರವರು ಸಹಿ ಹಾಕಿದ್ದಾರೆ.

ಮತ್ತು ಜೆ.ಡಿ.ಎಸ್ ಪಕ್ಷದಿಂದ ತಿಪ್ಪೇಸ್ವಾಮಿಯವರು ಪ್ರಣಾಳಿಕೆಯನ್ನ ಒಪ್ಪಿ ಸಹಿ ಹಾಕಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿರುವ ಬೇಡಿಕೆಗಳನ್ನ ತಕ್ಷಣವೇ ಈಡೇರಿಸಬೇಕು. ಜೊತೆಗೆ ಈ ಮುಂಗಾರು ಮಳೆಗೆ ಮನೆ ಹಾನಿ, ಬೆಳೆ ಹಾನಿ, ಜನ-ಜನುವಾರು ಸಾವನಪ್ಪಿದ್ದಾರೆ. ಇದಕ್ಕೆ ತಕ್ಷಣ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಘವೇಂದ್ರ.ಕೆ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ,
ಜಿಲ್ಲಾ ಹಸಿರುಸೇನೆ ಸಂಚಾಲಕರಾದ ಎಂ.ಡಿ ನಾಗರಾಜ್,
ತಾ||ಗೌರವಾಧ್ಯಕ್ಷರಾದ ಎಂ.ಹೆಚ್ ತಿಮ್ಮಪ್ಪ,
ತಾ|| ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ,
ತಾ|| ಕಾರ್ಯದರ್ಶಿ ಜಿ.ಬಿ ರವಿ,
ರೈತ ಮುಖಂಡರಾದ ನಾಗರಾಜ್, ಎನ್.ಡಿ ಮಲ್ಲೇಶಪ್ಪ, ಶಿವರಾಜ್, ವೀರೇಶ್, ಹಾಗೂ ಗ್ರಾಮಸ್ಥರು ಹಾಜರಿದ್ದರು.

ಇದನ್ನೂ ಓದಿ-https://suddilive.in/?p=18050

Related Articles

Leave a Reply

Your email address will not be published. Required fields are marked *

Follow on Google news
Back to top button