ಕುಡಿಯುವ ನೀರಿನ ಅಭಾವವಿಲ್ಲದಿದ್ದರು ಇಲ್ಲದಿದ್ದರು ನಗರದಲ್ಲಿ ಹಲವೆಡೆ ಸಮಸ್ಯೆ

ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಈಗ ಮಳೆಯಾಗದಿದ್ದರೂ ಮುಂದಿನ ಮೂರು ತಿಂಗಳ ವರೆಗೆ ಕುಡಿಯುವ ನೀರಿನ ಕೊರತೆ ಇಲ್ಲದಿದ್ದರೂ. ನಗರದ ಹೊರಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

ಬೊಮ್ಮನ್ ಕಟ್ಟೆಯ ಡಿ ಬ್ಲಾಕ್, ಎಫ್ ಬ್ಲಾಕ್ ಸಿ ಬ್ಲಾಕ್ ಕಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬ್ಲಾಕ್ ಗಳಲ್ಲಿ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಒಂದು ದಿನ ಮಿಸ್ ಆದರೂ ಇದು ನಾಲ್ಕು ದಿನಕ್ಕೊಮ್ಮೆ ನೀರು ಬಿಡುವಂತಾಗಿತ್ತು.
ಈ ಬಾರಿ ಮಳೆ ಮೇ ತಿಂಗಳಲ್ಲಿ ಜಲಾನಯನ ಪ್ರದೇಶದಲ್ಲಿ ಆಗದ ಕಾರಣ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ಎಂದು ಭಾವಿಸಲಾಗಿದೆ. ನಗರಕ್ಕೆ ಗಾಜನೂರಿನ ತುಂಗ ಡ್ಯಾಂ ನಿಂದ ಬರಬೇಕಾಗಿದ್ದು ತುಂಗ ಜಲಾನಯನ ಪ್ರದೇಶದಲ್ಲಿ ಮ ನೀರಿನ ಸಮಸ್ಯೆ ಆಗಿದೆ ಎಂದು ಭಾವಿಸಲಾಗಿತ್ತು.
ಈಗ ಗಾಜನೂರಿನ ಅಣೆಕಟ್ಟಿನ ಎಇಇ ನೀರಿನ ಸಮಸ್ಯೆ ಕುರಿತು ಸ್ಪಷ್ಟಪಡಿಸಿದ್ದಾರೆ. ಡ್ಯಾಂನಲ್ಲಿ ಅರ್ಧ ಟಿಎಂಸಿ ನೀರಿದ್ದು ಸಧ್ಯಕ್ಕೆ ಮಳೆ ಬಾರದಿದ್ದರೂ ಮುಂದಿನ ಮೂರು ತಿಂಗಳ ವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಎಂದಿದ್ದಾರೆ.
ವಾರ್ಡ್ ನಂಬರ್ 2 ರಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಬಿಜೆಪಿಯ ನೂತನ ಶಾಸಕ ಚನ್ನ ಬಸಪ್ಪ ನೇತೃತ್ವದಲ್ಲಿ ಸಭೆ ನಡೆಸಿ ಕುಡಿಯುವ ನೀರು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಎಇಇ ಸಿದ್ದಪ್ಪನವರು ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/?p=18037
