ರಾಜಕೀಯ ಸುದ್ದಿಗಳು

ಯುವನಿಧಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ

ಸುದ್ದಿಲೈವ್/ಶಿವಮೊಗ್ಗ

ಯುವನಿಧಿ ಕಾರ್ಯಕ್ರಮಕ್ಕೆ ಬರುವವರಿಗೆ ಪಕ್ಷದ ಮುಖಂಡರೇ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮಲೆನಾಡಿನ ಆಕ್ರೋಶ ವೇದಿಕೆ ಅಡಿಯಲ್ಲಿ ಹೋರಾಡಿದಂತೆ ಪಕ್ಷದ ಮುಖಂಡರೆಲ್ಲಾ ತಂಡ ರಚಿಸಿಕೊಂಡು ಕಾರ್ಯಕ್ರಮ‌ಯಶಸ್ವಿಗೊಳಿಸಲು ಸಚಿವ ಮಧು ಬಂಗಾರಪ್ಪ ಸೂಚಿಸಿದರು.

ಇಂದು ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಹಣ ದುರುಪಯೋಗ ಮಾಡೋದು ಬೇಡ. ಶೇ.96 ರಷ್ಟು  ಗ್ಯಾರೆಂಟಿಯ ಯೋಜನೆ ಮತದಾರರಿಗೆ ಉಪಯೋಗವಾಗಿದೆ.  ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗಳು  ಜನರ ಮನದಲ್ಲಿ ಮಂದಹಾಸ ಮೂಡಿಸಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚನೆಗೊಂಡ ನಂತರ ಐದನೇ ಗ್ಯಾರೆಂಟಿ ಗೆ ಚಾಲನೆ ನೀಡಲಾಗಿದೆ. ಬಿಜೆಪಿ ಭದ್ರಕೋಟೆಗೆ ಯುವನಿಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಬಲಪ್ರದರ್ಶಿಸಬೇಕಿದೆ ಎಂದರು.

ಎಂಪಿ, ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭಾರಿಯಾಗಬೇಕಿದೆ. ಗಟ್ಟಿ ಸಂಘಟನೆ ಆಗಬೇಕಿದೆ. ಸಂಘಟನೆ ಆಗದಿದ್ದರೆ ನಾವು ಮುಂಬರುವ ಚುನಾವಣೆಯನ್ನ ಗೆಲ್ಲೋದು ಕಷ್ಟ ಎಂದರು. ಬಿಜೆಪಿ ಲೋಕಸಭಾ ಚುನಾವಣೆಗೆ ಹೊರಟಿದ್ದಾರೆ. ರಾಮ ದೇವರನ್ನ‌ ರಾಜಕೀಯ ಮಾಡಿಕೊಂಡಿದ್ದಾರೆ.‌ ಸಿಎಂ ಗೆ ಆಹ್ವಾನ ಇಲ್ಲವೆಂಬುದನ್ನ‌ದುರುಪಯೋಗ ಮಾಡಿಕೊಳ್ಳಲಾಗಿದೆ. ಅಯೋಧ್ಯ ರಾಮನಿಗೆ ಇಲ್ಲಿಂದಲೇ ಕೈ ಮುಗಿದರೆ ಬೇಡ ಎನ್ನುತ್ತಾರಾ ಎಂದು ತಿಳಿಸಿದರು.

ಈ ಕ್ಷೇತ್ರದ ಎಂಪಿ ನಾಲ್ಕು ವರೆ ವರ್ಷ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಈಗ ಟವರ್ ಹಾಕಿಸುತ್ತೇನೆ. ರಸ್ತೆ ಸೇತುವೆ ಮಾಡಿಸುತ್ತೇನೆ ಎಂದು ಹೊರಟಿದ್ದಾರೆ. ಚುನಾವಣೆ ಸಮಯವನ್ನ ಬಳಸಿಕೊಳ್ಳುವ ಯತ್ನ ಮಾಡಿದ್ದೀರಿ. ಕೇಂದ್ರ ಸರ್ಕಾರ ನಿಮ್ಮದೇ ಇದ್ದರೂ ಶರಾವತಿ ಸಂತ್ರಸ್ತರಿಗೆ ನೆಲೆ ಕಾಣಿಸಲು ಎಂಪಿ ರಾಘವೇಂದ್ರರಿಗೆ ಆಗಲಿಲ್ಲ ಎಂದು ದೂರಿದರು.

ಶಾಸಕ ಸಂಗಮೇಶ್ವರ್ ಮಾತನಾಡಿ, ಕಾಂಗ್ರೆಸ್ ಯೋಜನೆಯನ್ನ ಬಿಜೆಪಿ ಕಾಪಿ ಮಾಡುತ್ತಿದೆ. ಜಾತ್ಯಾತೀತ ಪಕ್ಷ ಕಾಂಗ್ರೆಸ್ ಆಗಿದೆ. ಪಕ್ಷ ನಮಗೆ ಏನು ಮಾಡಿದೆ ಎನ್ನುವುದಕ್ಕಿಂತ ಪಕ್ಷಕ್ಕೆ ನಮ್ಮ ಕಾಣಿಕೆ ಏನು ಎಂಬುದು ಮುಖ್ಯ ಹಾಗಾಗಿ ಯುವನಿಧಿ ಕಾರ್ಯಕ್ರಮವನ್ನ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿಸೋಣ ಎಂದರು .ಬಿಜೆಪಿ-ಜೆಡಿಎಸ್ ಒಂದಾಗಿದೆ.  ಜೆಡಿಎಸ್ ಸಹ ಕೋಮುವಾದಿ ಪಕ್ಷವಾಗಿದೆ ಎಂದು ದೂರುವುದನ್ನ ಮರೆಯಲಿಲ್ಲ.

ಸಚಿವ ಎಂಸಿ ಸುಧಾಕರ್ ಮಾತನಾಡಿ, ಜನವರಿ 12 ಪ್ರಮುಖ ಕಾರ್ಯಕ್ರಮ. ನಾಲ್ಕು ಗ್ಯಾರೆಂಟಿಯನ್ನ ಈಗಾಗಲೇ ಜನರಿಗೆ ಯಶಸ್ವಿಯಾಗಿ ನೀಡಲಾಗಿದೆ. ಐದನೇ ಕಾರ್ಯಕ್ರಮಕ್ಕೆ ಜನವರಿ 12 ರಂದು ಲೋಕಾರ್ಪಣೆಯಾಗುತ್ತಿದೆ. ಜನರಲ್ಲಿ ಧರ್ಮದ ವಿಷ ಬೀಜ ಬಿತ್ತಿರುವ ಬಿಜೆಪಿಗೆ ಈ ಕಾರ್ಯಕ್ರಮದ ಮೂಲಕ ಸರಿಯಾದ ಉತ್ತರ ನೀಡಬೇಕಿದೆ ಎಂದರು.

ವೈದ್ಯರು, ಇಂಜಿನಿಯರ್ ಮತ್ತು ಇತರೆ ನಾನ್ ಟೆಕ್ನಿಕಲ್ ಪದವೀಧರರು ಕಾರ್ಯಕ್ರಮದ ಫಲಾನುಭವಿಗಳಾಗಿರುತ್ತಾರೆ. ಈ ಕಾರ್ಯಕ್ರಮವನ್ನ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಸರ್ಕಾರ ನುಡಿದಂತೆ ನಡೆದಿರುವುದಾಗಿ ಜನರಲ್ಲಿ ಹೇಳಬೇಕಿದೆ ಎಂದರು.

ಶಿವಮೊಗ್ಗಕ್ಕೆ ಹೋರಾಟದ ಹಿನ್ನಲೆಯ ಇರುವುದರಿಂದ ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮ ಲೋಕಾರ್ಪಣೆ ಮಾಡಲಾಗುತ್ತಿದೆ. ಗ್ಯಾರೆಂಟಿಯನ್ನ‌ ಲೋಕಾರ್ಪಣೆ ಮಾಡುವುದರಿಂದ ಕಾರ್ಯಕರ್ತರನ್ನ ಹುರಿದುಂಬಿಸುವುದೂ ಸಹ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/6096

Related Articles

Leave a Reply

Your email address will not be published. Required fields are marked *

Back to top button