Follow on Google news Follow on Google news
ಕ್ರೈಂ

ಹಣದ ಆಮಿಷ ತೋರಿಸಿ ಮಹಿಳೆಯರನ್ನ ವೈಶ್ಯವಾಟಿಕೆಗೆ ಬಳಕೆ- 6 ಮಹಿಳೆಯರು ರಕ್ಷಣೆ ಓರ್ವ ಬಂಧನ

ಸುದ್ದಿಲೈವ್/ಶಿವಮೊಗ್ಗ

ಮಹಿಳೆಯರಿಗೆ ಹಣದ ಆಮಿಷ ತೋರಿಸಿ ವೈಶ್ವಾವೃತ್ತಿಯಲ್ಲಿ ತೊಡಗಿಸಿದ ಆರೋಪದ ಮೇಲೆ ದಾಳಿ ನಡೆದಿದ್ದು, ದಾಳಿಯಲ್ಲಿ ಮೆಸೇಜ್ ಪಾರ್ಲರ್ ನ ಮಾಲೀಕರನ್ನ ಬಂಧಿಸಲಾಗಿದೆ. ಮಹಿಳೆಯರನ್ನ ರಕ್ಷಿಸಲಾಗಿದೆ. 6 ಜನ ಮಹಿಳೆಯರನ್ನ ರಕ್ಷಿಸಲಾಗಿದೆ.

ಗೋಪಾಲ ವೈ (34) ಮತ್ತು ವಿದ್ಯಾಶ್ರೀ ಎಂಬುವರು ಸುಮಾರು ಎರಡುವರ್ಷದಿಂದ ಕುವೆಂಪು ರಸ್ತೆಯಲ್ಲಿರುವ ರಾಯಲ್ ಆರ್ಚ್ ಎಂಬ ಸ್ಪಾ‌ ಮತ್ತು ಮೆಸಾಜ್ ಪಾರ್ಲರ್ ನಡೆಸುತ್ತಿದ್ದರು.

ನಿನ್ನೆ ರಾತ್ರಿ ಮಹಿಳಾ ಠಾಣೆಯ ಪೊಲೀಸರು ವೈಶ್ಯವಾಟಿಕೆ ಆರೋಪದಮೇಲೆ ದಾಳಿ ನಡೆಸಲಾಗಿದ್ದು 6 ಅಬಲೆಯರನ್ನ ರಕ್ಷಿಸಲಾಗಿದೆ. 6 ಜನ ಮಹಿಳೆಯರನ್ನ ಪೂಸಲಾಯಿಸಿ ಹಣದ ಆಮಿಷ ತೋರಿಸಿ ವೈಶ್ಯವಾಟಿಕೆ ದಂಧೆಯಲ್ಲಿ ತೊಡಗಿಸಲಾಗಿದೆ ಎಂಬ ಆರೋಪದ ಆಡಿ ಮಾಲೀಕ ಗೋಪಾಲ್ ವೈ ರನ್ನ‌ ಬಂಧಿಸಲಾಗಿದೆ.

ದಾಳಿಯಲ್ಲಿ ಗೋಪಾಲ್ ಹೆಂಡತಿ ಪರಾರಿಯಾಗಿದ್ದಾರೆ. ಗೋಪಾಲ್ ಗೆ ನ್ಯಾಯಾಂಗ ಬಂಧನವಾಗಿದೆ. ಈ ಪ್ರಕರಣದಲ್ಲಿ ಹೊಳಲ್ಕೆರೆ ನಿವಶಿಗಳಾದ ಜಗದೀಶ್ ಮತ್ತು ತಿಮ್ಮೇಶ್ ಎಂಬುವರನ್ನ ವಶಕ್ಕೆ ಪಡೆದು ವಿಚಾರಿಸಲಾಗಿದೆ.

ರಕ್ಷಿಸಲಾದ ಮಹಿಳೆಯರೆಲ್ಲ ಸ್ಥಳೀಯರು ಎಂದು ತಿಳಿದುಬಂದಿದೆ. ರಕ್ಷಣೆಗೊಳಪಟ್ಟ ಮಹಿಳೆಯರನ್ನ ಸುರಭಿ ಸಾಂತ್ವಾನ ಕೇಂದ್ರದಲ್ಲಿ ಬಿಡಲಾಗಿದೆ.

ಇದನ್ನೂ ಓದಿ-https://suddilive.in/?p=18022

Related Articles

Leave a Reply

Your email address will not be published. Required fields are marked *

Follow on Google news
Back to top button