ಸುರಕ್ಷಿತ ಪರಿಕರಗಳನ್ನು ಬಳಸದೆ ಕಾಳಿಂಗ ಸರ್ಪ ಹಿಡಿದ ವಿಡಿಯೋ ವೈರಲ್:ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ಸ್ನೇಕ್ ಅನೂಪ್

ಸುದ್ದಿಲೈವ್/ಸಾಗರ
ಅವೈಜ್ಞಾನಿಕವಾಗಿ ಕಾಳಿಂಗ ಸರ್ಪ ಹಿಡಿದ ವೈಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸ್ನೇಕ್ ಅನೂಪ್ ಬುಧವಾರ ಸಾಗರ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸೊರಬ ತಾಲೂಕಿನ ತಾಳಗುಪ್ಪ ಹೋಬಳಿಯ ಸಾಲೇಕೊಪ್ಪ ಕಲ್ಲಕಿ ಗುಡ್ಡದಿಂಬ ಬಸ್ ನಿಲ್ದಾಣದಲ್ಲಿ ನಿನ್ನೆ ಮಂಗಳವಾರ ಮೇ 23ರಂದು ಕುಗ್ವೆ ಗ್ರಾಮದ ಸಂತೋಷ ಎಂಬಾತ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡ 15 ಅಡಿ ಕಾಳಿಂಗ ಸರ್ಪವನ್ನು ಯಾವುದೇ ಸುರಕ್ಷಿತ ಪರಿಕರಗಳು ಉಪಯೋಗಿಸಿದೆ ಕೇವಲ ಒಂದು ದೊಣ್ಣೆಯಿಂದ ತಲೆಯ ಭಾಗವನ್ನು ಒತ್ತಿ ಹಿಡಿದು ಸರ್ಪವನ್ನು ಸೆರೆಹಿಡಿದಿದ್ದಾರೆ.
ಇಂತಹಾ ಸಮಯದಲ್ಲಿ ಕಾಳಿಂಗ ಸರ್ಪದ ತಲೆಯ ಭಾಗದ ಮೂಳೆಗೆ ಹಾನಿಗೊಳಗುವ ಜೊತೆಗೆ ಸರ್ಪಕ್ಕೆ ಉಸಿರಾಟದ ತೊಂದರೆ ಉಂಟಾಗಿ ಸಾವುನ್ನಪ್ಪುವ ಸಂಭವವೂ ಹೆಚ್ಚಿರುತ್ತದೆ. ಈ ರೀತಿ ಹಾವುಗಳನ್ನು ಹಿಡಿಯುವುದರಿಂದ ಆ ವೈಕ್ತಿಯ ಜೀವಕ್ಕೆ ಹಾನಿ ಉಂಟಾಗಬಹುದು , ಈ ರೀತಿ ಅವೈಜ್ಞಾನಿಕವಾಗಿ ಯಾವುದೇ ಪರಿಕರಗಳಿದೇ ಹಾವುಗಳನ್ನು ಹಿಡಿಯುವವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ-https://suddilive.in/?p=18014
