ರಾಷ್ಟ್ರೀಯ ಸುದ್ದಿಗಳು

ಶಬರಿ ಮಲೆಯಲ್ಲಿ ಅವ್ಯವಸ್ಥೆ-ಕೇರಳ ಸಿಎಂ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಶಬರಿಮಲೆಯಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ಸಾಲು ಸಾಲು ಅವ್ಯವಸ್ಥೆಯ ಪಟ್ಟಿಯನ್ನ ಶಬರಿಮಲೆ ಕ್ಷೇಮಾಭಿವೃದ್ಧಿ ಸಮಿತಿ ಸಂಚಾಲಕ ಸತೀಶ್ ಶಿವಮೊಗ್ಗದಲ್ಲಿ  ಬಿಚ್ಚಿಟ್ಟಿದ್ದಾರೆ.  ಪಟೆಯಲ್ಲಿನ ಅವ್ಯವಸ್ಥೆಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಕಾರಣರಾಗಿದ್ದು ರಾಜನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಟು‌ವರ್ಷದ ಮಗು ನೂಕು ನುಗ್ಗಲಿಗೆ ಸಿಕ್ಕಿ ಮೃತಪಟ್ಟಿದೆ.ರಸ್ತೆ ಬದಿಯಲ್ಲಿ‌ ಮಲಗಿದ್ದ ಯುವಕನ ಮೇಲೆ ಬಸ್ ಹರಿದು ಕಾಲು ಊನವಾಗಿದೆ. 24 ಗಂಟೆ ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಬೇಕಿದೆ. ಊಟ ಉಪಹಾರ ನೀರಿನ ವ್ಯವಸ್ಥೆ ಸಹ ಇಲ್ಲ ಎಂದು  ಆಕ್ಷೇಪಣೆ ಎತ್ತಿದ್ದಾರೆ

ಹೊರ ರಾಜ್ಯದಿಂದ ಬಂದ ವಾಹನ ತಡೆದು ನಿಲ್ಲಿಸಿ 18-20 ಗಂಟೆ ನಂತರ ಬಿಡ್ತಿದ್ದಾರೆ. ಕೇರಳ ಸರಕಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದೆ. 150-200 ಬಸ್ ಹೋಗುವ ಬದಲು ಕೇವಲ 50 ಬಸ್ ಗಳನ್ನು ಬಿಡ್ತಿದ್ದಾರೆ ಎಂದು ದೂರಿದರು.

ಈ ವರ್ಷ ಉಚಿತವಾಗಿ ನೀರು ಆಹಾರ ಕೊಡುತ್ತಿದ್ದ ಸೇವಾ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿತ್ತು. ಸುಗಮ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು. ಸೇವಾ ಸಂಸ್ಥೆಗಳಿಗೆ ಆಹಾರ ನೀರು ವಿತರಣೆಗೆ ಅವಕಾಶ ನೀಡಬೇಕು. ದೇವಸ್ಥಾನ ಸಮಿತಿಯಲ್ಲಿ ದೈವ ಭಕ್ತಿ‌ ಇಲ್ಲದವರು, ಹಿಂದು ವಿರೋಧಿಗಳು ಇದ್ದಾರೆ ಎಂದರು.

ಹೀಗಾಗಿಯೇ ಈ ಸಮಸ್ಯೆ ಅಲ್ಲಿ ತಲೆದೋರುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಕೊಡಬೇಕು. ಭಕ್ತಾದಿಗಳಿಗೆ ರಕ್ಷಣೆ ಕೊಡಬೇಕು ಎಂದು ಸತೀಶ್ ಆಗ್ರಹಿಸಿದ್ದಾರೆ.‌

ಇದನ್ನೂ ಓದಿ-https://suddilive.in/archives/4912

Related Articles

Leave a Reply

Your email address will not be published. Required fields are marked *

Back to top button