ಕ್ರೈಂ
ಈಜಲು ಹೋದ ಬಾಲಕ ನೀರುಪಾಲು

ಸುದ್ದಿಲೈವ್/ತೀರ್ಥಹಳ್ಳಿ
ತುಂಗ ನದಿಗೆ ಈಜಲು ತೆರಳಿದ್ದ 16 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ನೀರಲ್ಲಿ ಮುಳುಗಿದ್ದ ಯುವಕ ನೀರು ಪಾಲಾಗಿದ್ದು ನಂತರ ನಡೆದ ಶೋಧಕಾರ್ಯದಲ್ಲಿ ಬಾಲಕ ಹೆಣವಾಗಿ ಪತ್ತೆಯಾಗಿದ್ದಾನೆ.

ತೀರ್ಥಹಳ್ಳಿಯ ಛತ್ರಕೇರಿಯ ಜಯಲಕ್ಷ್ಮೀ ಸಾಮಿಲ್ ಬಳಿ ನದಿಗೆ ಇಳಿದಿದ್ದ ಅಶ್ವಥ್ ನೀರುಪಾಲಾಗಿದ್ದ. ನೀರು ಪಾಲಾಗಿದ್ದ ಯುವಕನಿಗಾಗಿ ಅಗ್ನಿಶಾಮಕ ದಳದವರು ಶೋಧಕಾರ್ಯ ನಡೆದಿತ್ತು.
ಶೋಧಕಾರ್ಯದಲ್ಲಿ ಅಶ್ವಥ್ ಶವವಾಗಿ ಪತ್ತೆಯಾಗಿದ್ದಾನೆ. ತೀರ್ಥಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ-https://suddilive.in/?p=18006
