ಸ್ಥಳೀಯ ಸುದ್ದಿಗಳು

ಭೂಮಿ ಹಕ್ಕು ನೀಡುವಂತೆ ರೈತರಿಂದ ಪಾದಯಾತ್ರೆ

ಸುದ್ದಿಲೈವ್/ಶಿವಮೊಗ್ಗ

ನಕಲಿ ಸಕ್ಕರೆ ಕಾರ್ಖಾನೆ ಮಾಲೀಕತ್ವದ ಬಗ್ಗೆ ತನಿಖೆ ನಡೆಸಬೇಕು, ನಿವಾಸಿಗಳ ಭೂಮಿಹಕ್ಕನ್ನ ರಕ್ಷಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು 13 ಕ್ಕೂ ಹೆಚ್ಚು ಗ್ರಾಮಗಳಿಂದ ಪಾದಯಾತ್ರೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದಿದೆ.

ಸಾಲು ಸಾಲು ಟ್ರ್ಯಾಕ್ಟರ್ ಗಳ ಮೂಲಕ, ಕಾಲು ನಡೆಯ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಆಗಮಿಸಿ ಮನವಿ ಸಲ್ಲಿಸಲಿದರು. ಈ ಹೋರಾಟವನ್ನ ಶಿವಮೊಗ್ಗ ತಾಲೂಕು ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರ ನಿವಾಸಿಗಳ ಭೂಹಕ್ಕು ಸಮಿತಿ ಹಮ್ಮಿಕೊಂಡಿದೆ. ತೋಪಿನಘಟ್ಟ, ಮಲವಗೊಪ್ಪ, ಹರಿಗೆ, ನಿಧಿಗೆ, ಸದಾಶಿವಪುರ, ಚಿಕ್ಕಮರಡಿ, ಹರಪ್ಪನಹಳ್ಳಿ ಕ್ಯಾಂಪ್, ಹಾರೋಬೆನವಳ್ಳಿ ತಾಂಡ,

ತರಗನಹಳ್ಳಿ, ಪಿಳ್ಳಗೆರೆ, ಬಿ-ಬೀರನಹಳ್ಳಿ, ಹೊಸಮನೆ ತಾಂಡ, ಯರಗನಾಳ್ ಗ್ರಾಮದಿಂದ ರೈತರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆಯ ಮೂಲಕ ಬಂದು ಪ್ರತಿಭಟಿಸಿದರು.‌
ಬೇಡಿಕೆ
1. ಸಕ್ಕರೆ ಕಾರ್ಖಾನೆಯ ನಕಲಿ ಮಾಲೀಕರ ಮಾಲೀಕತ್ವದ ಬಗ್ಗೆ ತನಿಖೆ ಮಾಡಿಸುವುದು. 2. ಸರ್ಕಾರ ರೈತರು ಮತ್ತು ನಿವಾಸಿಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಉಳಿಸಲು 79 ಬಿ ಅಡಿಯಲ್ಲಿ ಸರ್ಕಾರದ ಅಧಿಸೂಚನೆಯಂತೆ ಹೆಚ್ಚುವರಿ (ಸೀಲಿಂಗ್ ಲಿಮಿಟ್) ಜಮೀನು ವಾಪಾಸ್ಸು ಪಡೆದ ಬಗ್ಗೆ ಸರ್ಕಾರದವತಿಯಿಂದ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟು ಸರ್ಕಾರದ ಮತ್ತು ರೈತರ ಆಸ್ತಿಯನ್ನು ಉಳಿಸಲು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುವುದು.

3. ಮೇಲ್ಕಂಡ ಎಲ್ಲಾ ಗ್ರಾಮಗಳಲ್ಲಿ ಜಮೀನು ಮತ್ತು ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ರಕ್ಷಣೆ ನೀಡುವುದು. 4. ಜಮೀನಿನಲ್ಲಿ ಮನೆ ಮತ್ತು ಜಮೀನು ವ್ಯವಸಾಯ ಮಾಡಿಕೊಂಡು ಬಂದ ರೈತರಿಗೆ ಮತ್ತು ನಿವಾಸಿಗಳಿಗೆ ಸಾಗುವಳಿ ಮತ್ತು ಹಕ್ಕುಪತ್ರ ನೀಡುವುದು.

5. 94 ಡಿ ಅಡಿಯಲ್ಲಿ 2ಇ ನಕ್ಷೆ ತಯಾರಿಸಿದ್ದು, ಇಲ್ಲಿಯವರೆಗೆ ಯಾವುದೇ ಹಕ್ಕುಪತ್ರ ನೀಡಿರುವುದಿಲ್ಲ. ಇದನ್ನು ತಕ್ಷಣ ಹಕ್ಕುಪತ್ರ ನೀಡುವುದು. 6. ಈಗಾಗಲೇ ನ್ಯಾಯಾಲಯದ ಆದೇಶದಂತೆ ಕೆಲವು ಜಮೀನುಗಳಿಗೆ ಹಕ್ಕುಪತ್ರಗಳನ್ನು ನೀಡಿದ್ದು, ಇನ್ನು ಕೆಲವು ರೈತರಿಗೆ ಹಕ್ಕುಪತ್ರ ಸಾಗುವಳಿ ನೀಡುವುದು ಬಾಕಿ ಇದ್ದು. ಇದನ್ನು ತಕ್ಷಣ ಹಕ್ಕುಪತ್ರ ನೀಡುವುದು.

7. ನಕಲಿ ಮಾಲೀಕ ಮತ್ತು ಗೂಂಡಾಗಳ ಸಹಾಯದಿಂದ ನೂರಾರು ಕಾರ್ಮಿಕರನ್ನು ಒಕ್ಕಲೆಬ್ಬಿಸಿ ಅವರ ಮನೆಗಳನ್ನು ಡೆಮಾಲಿಶ್ ಮಾಡಿದ್ದು, ನಕಲಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಅಲ್ಲಿಯೇ ಮನೆಗಳನ್ನು ಕಟ್ಟಿಸಿಕೊಡುವುದು.

8. ಕಾರ್ಖಾನೆ ಕಾರ್ಮಿಕರಿಗೆ ಬರಬೇಕಾಗಿರುವ ಬಾಕಿ ಹಣ ಕೊಡದೇ ಅನ್ಯಾಯವೆಸಗಿದ್ದು, ವೇತನ ಪಡೆಯದೇ ಇರುವ ಕಾರ್ಮೀಕರು ಹಾಗೂ ಗುತ್ತಿಗೆದಾರರಿಗೆ ಸಹ ವೇತನ ನೀಡಿ ನ್ಯಾಯ ದೊರಕಿಸಿಕೊಡುವುದು. ಮತ್ತು ಎಲ್ಲಾ ಕಾರ್ಮಿಕರಿಗೆ ಸರ್ಕಾರದಿಂದ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡುವುದು.

9. ಸರ್ಕಾರ ವಾಪಾಸ್ ಪಡೆದ ಜಮೀನಿನಲ್ಲಿ ಅಕ್ರಮವಾಗಿ ಪರಭಾರೆ ಮಾಡುವುದು ಕಂಡು ಬಂದಿದ್ದು, ತಕ್ಷಣ ಕಾನೂನು ಕ್ರಮ ಕೈಗೊಂಡು ಪರಭಾರ ಅಥವಾ ಯಾವುದೇ ನೋಂದಣಿಯಾಗದಂತೆ ತಡೆಯುವುದು. 10. ಕಾರ್ಖಾನೆ ನಕಲಿ ಮಾಲೀಕರು ಗೂಂಡಾಗಳ ಮುಖಾಂತರ ನಿವಾಸಿಗಳಿಗೆ, ರೈತರಿಗೆ ಮತ್ತು ಕಾರ್ಮೀಕರಿಗೆ ಎದರಿಕೆ-ಬೆದರಿಕೆ ಒಡ್ಡುತ್ತಿದ್ದು, ಮೇಲ್ಕಂಡ ನಮ್ಮಗಳಿಗೆ ಭಯ ಹುಟ್ಟಿಸುತ್ತಿದ್ದು ಈ ಮೇಲ್ಕಂಡ ನಕಲಿ ಮಾಲೀಕರಿಗೆ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಇದನ್ನೂ ಓದಿ-https://suddilive.in/archives/9794

Related Articles

Leave a Reply

Your email address will not be published. Required fields are marked *

Back to top button