ಅರಣ್ಯ ಇಲಾಖೆಯವರಿಂದ ದೌರ್ಜನ್ಯದ ಆರೋಪ-ದಿಡೀರ್ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ
ಅರಣ್ಯ ಇಲಾಖೆಯವರು ಬೂದಿಗೆರೆ ಗ್ರಾಮದಲ್ಲಿ ನಿರ್ಮಿಸಿರುವ ಸೇತುವೆ ರಸ್ತೆಗೆ ಎರಡೂ ಬದಿಯಲ್ಲಿ ಮಣ್ಣು ಏರಿಸಲು ಬಿಡುತ್ತಿಲ್ಲವೆಂದು ಆರೋಪಿಸಿ ಇಂದು ಗ್ರಾಮಸ್ಥರು ದಿಡೀರ್ ಪ್ರತಿಭಟನೆ ನಡೆಸಿದರು.

ಬೂದಿಗೆರೆ ಸರ್ವೆ ನಂಬರ್ 7 ರಲ್ಲಿ ಸೇತುವೆ ನಿರ್ಮಿಸಿರುವ ರಸ್ತೆಗೆ ಮಣ್ಣು ತೆಗೆಯಲು ಅರಣ್ಯ ಇಲಾಖೆಯವರು ಆಕ್ಷೇಪಿಸಿದ್ದಾರೆ. ಅಲ್ಲದೆ ಗ್ರಾಮದ ಹಾಲೇಶ್ ಎಂಬುವರ ಮೇಲೆ ಅರಣ್ಯ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಲ್ಕೊಳ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಣ್ಣು ತೆಗೆಯುವ ಜೆಸಿಬಿಯನ್ನೂ ಅರಣ್ಯ ಇಲಾಖೆಯವರು ವಶಕ್ಕೆ ಪಡೆದಿದ್ದು ಹಾಲೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಅಧಿಕಾರಿಗಳನ್ನ ಕೂಡಲೇ ಅಮಾನತು ಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜಕಾರಣಿಗಳಿಂದ ಇಲ್ಲಿನ ಮಣ್ಣುಗಳು ಲೂಟಿ ಹೊಡೆಯಲಾಗಿದೆ. ಆಗ ಕಣ್ಣು ಮುಚ್ಚಿಕೊಂಡಿದ್ದ ಅರಣ್ಯ ಇಲಾಖೆ ಸಾರ್ವಜನಿಕರ ಕೆಲಸ ನಡೆಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ-https://suddilive.in/?p=17999
