ನಗರ‌ ಸುದ್ದಿಗಳು

ವಿರೋಧದ ನಡುವೆಯೂ ಗೋಪಿ ವೃತ್ತದಲ್ಲಿ ರೈನ್ ಹೋಳಿ-ಹೋಳಿ ಹಬ್ಬದಲ್ಲಿ ಮಿಂದೆದ್ದ ಯುವ ಸಮೂಹ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಹೋಳಿಹಬ್ಬದಲ್ಲಿ ಯುವ ಸಮೂಹ ಮಿಂದೆದ್ದಿದೆ. ಗೋಪಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಹೋಳಿ ಹಬ್ಬಕ್ಕೆ ವ್ಯವಸ್ಥೆ ಮಾಡಿಕೊಂಡಿದೆ.

ನಿರಂತರ ಹಾಡುಗಳನ್ನ ಹಾಡುವ ಮೂಲಕ ಯುವಕರನ್ನ ಹೋಳಿ ಹಬ್ಬದಲ್ಲಿ ಸಮಿತಿ ಮುಳುಗಿಸಿದೆ. ರೈನ್ ಹೋಳಿಯ ವ್ಯವಸ್ಥೆಯನ್ನ ಮಾಡಲಾಗಿದೆ. ಇದರ ಜಿತೆಗೆ ಬೈಕ್ ಗಳಲ್ಲಿ ಗುಂಪು ಗುಂಪಾಗಿ ಯುವಕರು ಹಾರನ್ ಹಾಕಿಕೊಂಡು ನಗರ ಸಂಚರಿಸುವ ದೃಶ್ಯಗಳು ಲಭ್ಯವಾಗಿದೆ.

ಶಿವಮೊಗ್ಗದಲ್ಲಿ ರೈನ್ ಹೋಳಿಗೆ ನಿರ್ಬಂಧವಿಲ್ಲದಿದ್ದರೂ ಹಿಂದೂ ಸಂಘಟನೆಯಲ್ಲೇ ಕೆಲವರ ವಿರೋಧ ವ್ಯಕ್ತವಾಗುತ್ತಿರುವುದು ತಿಳಿದುಬಂದಿದೆ. ಈಗಾಗಲೇ ಬಾಗಲಕೋಟೆ ಮತ್ತು ಬೆಂಗಳೂರಿನಲ್ಲಿ ರೈನ್ ಹೋಳಿಗೆ ವಿರೋಧ ವ್ಯಕ್ತವಾಗಿದೆ.

ಆದರೂ ಅಲಂಕಾರ ಸಮಿತಿ ರೈನ್ ಹೋಳಿಗೆ ಅವಕಾಶ ಕಲ್ಪಿಸಿರುವುದು ಕೆಲವರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಏನೇ ಇರಲಿ, ಶಿವಮೊಗ್ಗದಲ್ಲಿ ಹೋಳಿಗೆ ರಂಗೇರಿದೆ.

ಇದನ್ನೂ ಓದಿ-https://suddilive.in/archives/11494

Related Articles

Leave a Reply

Your email address will not be published. Required fields are marked *

Back to top button