ಸ್ಥಳೀಯ ಸುದ್ದಿಗಳು

ಹರಕೆರೆಯಲ್ಲಿ ಮಹಾಶಿವರಾತ್ರಿ-ಹರಿದು ಬರುತ್ತಿರುವ ಭಕ್ತಸಾಗರ

ಸುದ್ದಿಲೈವ್/ಶಿವಮೊಗ್ಗ

ಮಹಾಶಿವರಾತ್ರಿ ಅಂಗವಾಗಿ ಇಂದು ಶಿವನ ದೇವಸ್ಥಾನದಲ್ಲಿ ಪೂಜೆ ಹವನ ಕಾರ್ಯಕ್ರಮಗಳು ಜರುಗುತ್ತಿವೆ. ಶಿವಮೊಗ್ಗದ ಹರಕೆರೆಯ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಬೆಳಗ್ಗಿನಿಂದ ಪೂಜೆ ಕೈಂಕರ್ಯಗಳು ಹಮ್ಮಿಕೊಳ್ಳಲಾಗಿದೆ.

ದೇವರಿಗೆ ಇಂಧೂಶೇಖರ ಭಟ್ಟರಿಂದ ದೇವರಿಗೆ ರುದ್ರಾಭಿಷೇಕ, ರುದ್ರಪಠನ ಕಾರ್ಯಕ್ರಮ ನಡೆದಿದೆ. ಸಮುದ್ರ ಮಂಥನ ನಡೆದ ವೇಳೆ ಬಂದ ವಿಷವನ್ನ ಶಿವ ಲೋಕಕಲ್ಯಾರ್ಥವಾಗಿ ಸೇವಿಸಿ ಗಂಟಲಿನಲ್ಲಿರಿಸಿಕೊಂಡಿದ್ದನು.

ಯಾವಾಗ ಶಿವ ವಿಷನನ್ನ ಗಂಟಲಿನಲ್ಲಿರಿಸಿಕೊಂಡಿರುತ್ತಾನೆ ನಿದ್ರೆಗೆ ಜಾರದಂತೆ ಭಕ್ತರು ರಾತ್ರಿವಿಡಿ ಎಚ್ಚರವಹಿಸಿದ್ದರು. ಬೆಳಿಗ್ಗೆ ಅಷ್ಟು ಹೊತ್ತಿಗೆ ವಿಷದ ಆರ್ಭಟ ಕಡಿಮೆಯಾಗಿರುತ್ತದೆ. ಇದು ಪುರಾಣದಲ್ಲಿ ಬರುವ ಕಥೆಯಾಗಿದೆ.  ಇಂದು ಶಿವ ಪಾರ್ವತಿಯ ಮದುವೆಯ ದಿನವೂ ಆಗಿರುವುದರಿಂದ ಇಂದು ರಾತ್ರಿ9-30 ರಲ್ಲಿ ಬೆಳಗ್ಗಿನ 6 ಗಂಟೆಗೆ ಬಂದು ನಾಲ್ಕು ಜಾವದ ಪೂಜೆ ನಡೆಯಲಿದೆ.

ರಾಮನು ಸೀತೆ ಅನ್ವೇಷಣೆಯಲ್ಲಿದ್ದಾಗ ತುಂಗ ನದಿಯ ತಟದಲ್ಲಿ ಬಂದಿದ್ದ ರಾಮನು ಶಿವನ ಬಗ್ಗೆ ಪ್ರಾರ್ಥಿಸಿದ್ದನು. ಶಿವನಿಗೆ ಪೂಜಿಸಿ ಮುಂದೆ ಸಾಗಿದ್ದ ಎಂಬ ನಂಬಿಕೆ ಇದೆ. ಇಂದು ದೇವರಿಗೆ ಕೈಲಾಸ ಪರ್ವತದ ಅಲಂಕಾರ ಮಾಡಲಾಗಿದೆ. ಶಿವ ಜಲಪ್ರಿಯವಾದುದರಿಂದ ಅಭಿಷೇಕ ನಡೆದಿದೆ.

ದೇವಸ್ಥಾನಕ್ಕೆ ಭಕ್ತರ ಸಾಗರ ಹರಿದು ಬಂದಿದೆ. ದೇವರ ದರ್ಶನಕ್ಕೆ ಪ್ರವೇಶ ದ್ವಾರದಿಂದ ಹಗ್ಗಗಳನ್ನ‌ ನಿರ್ಮಿಸಲಾಗಿದೆ. ಮಧ್ಯಾಹ್ನ 2 ನಂತರ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸಂಜೆಹೊತ್ತಿಗೆ ಭಕ್ತರ ಸಾಲು ಹೆಚ್ಚಾಗಲಿದೆ. ದೇವಸ್ಥಾನದ ಸುತ್ತಮುತ್ತ ಜಾತ್ರ ಮಹೋತ್ಸವದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ-https://suddilive.in/archives/10289

Related Articles

Leave a Reply

Your email address will not be published. Required fields are marked *

Back to top button