ಸ್ಥಳೀಯ ಸುದ್ದಿಗಳು

ಸೂಡಾ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ-ಭದ್ರಾವತಿಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿಯ ಸ್ಥಾನ ಈ ಬಾರಿ ಮುಸ್ಲೀಂ ಸಮುದಾಯಕ್ಕೆ ಸಿಗುವ ಬಗ್ಗೆ ನಿನ್ನೆ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಸಹ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದು ಈ ಬಾರಿ ಅವರಿಗೆ ಸಂದುವ ಸಾಧ್ಯತೆ ಹೆಚ್ಚಿದೆ.

ಈ ಹಿನ್ನಲೆಯಲ್ಲಿ ಈ ಬಾರಿ ಯಾರು ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಕಳೆದ ಹಲವು ತಿಂಗಳಿಂದ ನಿಗಮ ಮಂಡಳಿ ಮತ್ತು ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಸ್ಥಾನ ಪಡೆಯಲು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಹೆಚ್ಚಾಗಿದೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತರನ್ನ ನೇಮಿಸಬೇಕೆಂಬ ಆಕ್ಷೇಪವನ್ನ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಸುದ್ದಿಗೋಷ್ಠಿ ನಡೆಸಿ ನಿಗಮ ಮಂಡಳಿ ಮತ್ತು ಸೂಡಾ ಅಧ್ಯಕ್ಷ ಸ್ಥಾನವನ್ನ ಅಲ್ಪಸಂಖ್ಯಾತರಿಗೆ ಬಿಟ್ಟುಕೊಡುವಂತೆ ಆಗ್ರಹಿಸಿದ್ದರು.  ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ ಸುಂದರೆಶ್ ಅಲ್ಪಸಂಖ್ಯಾತ ಘಟಕದ ಮುಖಂಡರಿಗೆ  ಸೂಡಾ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು.

ಆದರೆ ಯಾರದು ಎಂಬುದರ ಬಗ್ಗೆ ಸುಂದರೇಶ್ ಬಾಯಿಬಿಟ್ಟಿರಲಿಲ್ಲ. ಆದರೆ ಅಲ್ಪಸಂಖ್ಯಾತ ಮುಖಂಡ ವಕೀಲ ನಯಾಜ್ ಅಹ್ಮದ್ ಅವರ ಹೆಸರು ಸಂಭವನೀಯ ಪಟ್ಟಿಯಲ್ಲಿ ಕೇಳಿಬಂದಿದೆ. ಈ ಸ್ಥಾನಕ್ಕೆ ಈವರೆಗೆ ಹತ್ತು ಮಂದಿ ಹೆಸರು ಕೇಳಿ ಬಂದಿದೆ, ಈ ನಡುವೆ ಅಡ್ವೊಕೇಟ್ ನಿಯಾಜ್ ಅಹಮದ್ ಹೆಸರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂಬ ಮಾತು ಪಕ್ಷದ ವಲಯದಿಂದ ಕೇಳಿ ಬಂದಿದೆ.

ನಿಯಾಜ್ ಅಹಮದ್ ಮತ್ತು ಎಸ್.ಕೆ.ಮರಿಯಪ್ಪ ಹೆಸರು ಅಂತಿಮ ಹಂತದಲ್ಲಿದೆ ಎನ್ನಲಾಗಿತ್ತು. ಯಾವಾಗ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ಮತ ಹಾಕಿಸಿಕೊಳ್ಳುವಾಗ ಮುಸ್ಲೀಂ‌ರಿಗೆ ಭರವಸೆ ನೀಡಿದ್ದ ಪಕ್ಷ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿತೋ ಮರಿಯಪ್ಪನವರ ಹೆಸರು ಹಿಂದಕ್ಕೆ ಸರಿದಿದೆ ಎನ್ನಲಾಗಿದೆ. ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲ ನಿಯಾಜ್ ಅಹಮದ್ ಅವರ ಹೆಸರು ಕಾಂಗ್ರೆಸ್ ಹೈಕಮಾಂಡ್ ಕೈ ತಲುಪಿದೆ ಎನ್ನಲಾಗಿದೆ.  ಈ ಹಿಂದೆ ಕಲೀಮ್ ಪಾಷಾ ಅವರ ಹೆಸರು ಬಹುತೇಕ ಫೈನಲ್ ಆಗಿತ್ತು.

ನಂತರ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಅವರ ಹೆಸರನ್ನುಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸೂಡಾ ಮತ್ತಿತರ ಹುದ್ದೆಗಳಿಗೆ ಮುಸ್ಲಿಮರ ಹೆಸರನ್ನು ಶಿಫಾರಸು ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ  ಭರವಸೆ ನೀಡಿದ್ದರು ,ಹಾಗಾಗಿ ಈ ಸ್ಥಾನಕ್ಕಾಗಿ . ಆಸಿಫ್ ಮಸೂದ್, ಮೊಹಮ್ಮದ್ ಆರಿಫ್ ಉಲ್ಲಾ, ಅಫ್ತಾಬ್ ಪರ್ವೇಜ್ ಕೂಡ ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ವಕೀಲರಿಗೆ ಈ ಅದೃಷ್ಟ ಲಕ್ಷ್ಮಿ ಒಲಿದು ಬರುವ ನಿರೀಕ್ಷೆ ಹೆಚ್ಚಿದೆ. ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8311

Related Articles

Leave a Reply

Your email address will not be published. Required fields are marked *

Back to top button