ಡಿ.ಮಂಜುನಾಥ್ ಪರ ನಿಂತ ಸಾಹಿತಿಗಳು, ಲೇಖಕರು!writers stood up for D. Manjunath

Suddilive || Shivamogga

Literary figures and writers stood up for D. Manjunath!

Writers, manjunath


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅವರ ವಿರುದ್ಧ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ನೀಡಿರುವ ಷೋಕಾಸ್ ನೋಟಿಸ್ ಗೆ ಜಿಲ್ಲೆಯ ಕಸಾಪ ಸದಸ್ಯರು, ಸಾಹಿತಿಗಳು, ಲೇಖಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಭಾನುವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಕಸಾಪ ಸದಸ್ಯರು, ಹಿರಿಯ ಸಾಹಿತಿಗಳು, ಲೇಖಕರ ಸಮಾಲೋಚನೆ ಸಭೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುವುದರ ಜೊತೆಗೆ ಕಾನೂನು ಮತ್ತು ಚಳುವಳಿಗಳ ಮೂಲಕ ಮಹೇಶ್ ಜೋಷಿ ವಿರುದ್ಧ ಹೋರಾಟ ನಡೆಸಲು ನಿರ್ಣಯಿಸಲಾಯಿತು.

ಕಸಾಪ ರಾಜ್ಯಾಧ್ಯಕ್ಷರು ಸರ್ವಾಧಿಕಾರದ ಮೂಲಕ ಪರಿಷತ್ತಿನ ಆಡಳಿತ ನಡೆಸುತ್ತಿದ್ದಾರೆ. ಕಟ್ಟುವ ಕೆಲಸಕ್ಕಿಂತ ಒಡೆಯುವ ಕಾರ್ಯದಲ್ಲಿ ಮಗ್ನರಾಗಿರುವುದು ದುರಂತ. ಇದರಿಂದ ಕಸಾಪ ಸದಸ್ಯರ ಭಾವನೆಗೆ ಅತೀವ ನೋವಾಗಿದೆ. ಬೈಲಾ ತಿದ್ದುಪಡಿಗಳ ಮೂಲಕ ಸರ್ವಾಧಿಕಾರ ನಡೆಸುವ ಹುನ್ನಾರ ನಡೆಸಿರುವ ಮಹೇಶ್ ಜೋಷಿಯವರ ನಡೆಯು, ಪರಿಷತ್ತಿನ ಘನತೆ ಗೌರವ, ಧ್ಯೇಯೋದ್ದೇಶಗಳಿಗೆ ದಕ್ಕೆ ಉಂಟುಮಾಡುತ್ತಿದೆ.

ಮಹೇಶ್ ಜೋಷಿಯವರ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಮೊದಲು ಜೋಷಿಯವರನ್ನು ಪರಿಷತ್ತಿನ ಆಜೀವ ಸದಸ್ಯತ್ವದಿಂದ ಅಮಾನತ್ತುಗೊಳ್ಳಬೇಕಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಯಿತು.

ಮಹೇಶ್ ಜೋಷಿಯವರು ಕಸಾಪದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲು ಬೈಲಾ ತಿದ್ದುಪಡಿ ಮಾಡುವುದು, ಅವರ ನಡೆಯ ವಿರುದ್ಧ ಪ್ರತಿಭಟಿಸುವವರನ್ನು ಹತ್ತಿಕ್ಕುವ ಪ್ರಯತ್ನ ಮಾಡುವಂತಹ ವಿಚಾರಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದೇ ಅವಧಿಯಲ್ಲಿ ಎರಡನೇ ಬಾರಿಗೆ ಮತ್ತೆ ಬೈಲಾ ತಿದ್ದುಪಡಿ ತಂದು ಕಾರ್ಯಕಾರಿ ಸಮಿತಿಗಿದ್ದ ಅಧಿಕಾರವನ್ನು ಕಸಿದು ರಾಜ್ಯಾಧ್ಯಕ್ಷರೆ ನೇರವಾಗಿ ಎಲ್ಲಾ ಅಧಿಕಾರ, ತೀರ್ಮಾನಗಳನ್ನು ಚಲಾಯಿಸುವಂತಹ ಏಕವ್ಯಕ್ತಿ ಕೇಂದ್ರಿತ ವ್ಯವಸ್ಥೆ ರೂಪಿಸಿಕೊಳ್ಳಲು ಹೊರಟಿರುವುದು ಖಂಡನೀಯ ಎಂಬ ಅಭಿಮತ ಸಭೆಯಲ್ಲಿ ಮೇಳೈಸಿತು.

ಡಿ.ಮಂಜುನಾಥ ಅವರು ತಮ್ಮ ಕ್ರಿಯಾಶೀಲ ಚಟುವಟಿಕೆಗಳು, ಸಂಘಟನಾ ಕೌಶಲ್ಯತೆ ಮೂಲಕ ಇಡೀ ರಾಜ್ಯದಲ್ಲಿಯೆ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಸಂಘಟಿಸಿಕೊಂಡು ಬಂದಿದ್ದಾರೆ. ಅವರ ಬಗ್ಗೆ ಸುಳ್ಳು ಆಪಾದನೆಗಳು ಸಲ್ಲದು.   ಕ್ರಿಯಾಶೀಲತೆ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಮಾತುಗಳು ವ್ಯಕ್ತವಾದವು.

ಸ್ವಾತಂತ್ರ್ಯ ಹೋರಾಟಗಾರ ಪುಟ್ಟಣ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಕೀಲರಾದ ಕೆ.ಪಿ.ಶ್ರೀಪಾಲ್, ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರಾದ ಅಕ್ಷತಾ ಹುಂಚದಕಟ್ಟೆ, ಸಾಹಿತಿಗಳಾದ ತೀರ್ಥಹಳ್ಳಿ ಡಾ.ಜೆ.ಕೆ.ರಮೇಶ್, ಹೊಸನಗರ ಡಾ.ಶಾಂತರಾಮಪ್ರಭು, ಭದ್ರಾವತಿ ಜಿ.ವಿ.ಸಂಗಮೇಶ್ವರ, ಡಾ.ಹೆಚ್.ಟಿ.ಕೃಷ್ಣಮೂರ್ತಿ, ಡಾ.ಶೇಖರ್ ಗೌಳೇರ್, ಸತ್ಯನಾರಾಯಣ, ಎಂ.ನವೀನ್ ಕುಮಾರ್, ಮಂಜುನಾಥ ಕಾಮತ್, ಟಿ.ಕೆ.ರಮೇಶ್ ಶೆಟ್ಟಿ, ನಾಗರಕೋಡಿಗೆ ಗಣೇಶ ಮೂರ್ತಿ, ವಿ.ಟಿ.ಸ್ವಾಮಿ, ಮಹಾದೇವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

writers stood up for D. Manjunath

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close