ಗ್ರಾಮಠಾಣ ಆಸ್ತಿ ವಕ್ಫ್ ಆಸ್ತಿ ಆಗಿದ್ದೇಗೆ?ಶಾಸಕ ಚೆನ್ನಿ-Why did the village station property become waqf property? MLA Chenni

 Suddilive || Shivamogga

ಗ್ರಾಮಠಾಣ ಆಸ್ತಿ ವಕ್ಫ್ ಆಸ್ತಿ ಆಗಿದ್ದೇಗೆ?ಶಾಸಕ ಚೆನ್ನಿ-Why did the village station property become waqf property? MLA Chenni

Waqf, property


ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ಜಾಗವನ್ನ ರಂಜಾನ್ ಹಬ್ಬದ ಹಿಂದೆ ಹೇಗಿತ್ತೋ ಹಾಗೆ ಬಿಟ್ಟುಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು. 

ಮಾಧ್ಯಮಗಳಿಗೆ ಮಾತನಾಡಿದ ಅವರು,  ಖಾತೆ ಏರಿಸುವಾಗ ಆದ ಲೋಪಗಳು ಇವೆ. ಮೈಸೂರು ರಾಜರ ಕಾಲದ ವೇಳೆ ಗೆಜೆಟೆ ನೋಟಿಫಿಕೇಷನ್ ಇದೆ. ಈಗಿನ ಗೆಜೆಟ್ ನೋಟಿಫಿಕೇಷನ್ ಏನಿದೆ ಎಂಬುದು ಸಹ ಇದೆ. ಅವರು ಹೇಳುವ ಈದ್ಗ ಬೇರೆ, 2012 ರಲ್ಲಿ ಸೂಡಾ ನಿರ್ಣಯದಂತೆ ನಿರ್ಣಯವಾಗಿರುವುದು ಬೇರೆ.  2012 ಕ್ಕೂ ಮುಂಚೆ ಏನಿತ್ತು ಅದನ್ನ‌ನಾವು ನೋಡಿದ್ದೇವೆ ಎಂದರು. 

ಕಂದಾಯ ಕಟ್ಟಲು ಇರುವ ಟೈಟಲೇ ವಕ್ಫ್ ಆಸ್ತಿಯಲ್ಲ. ಈ ಆಸ್ತಿ ಏನು ಎಂಬುದರ ಬಗ್ಗೆ ಸರ್ಕಾರದಲ್ಲಿ ಇರುವ ದಾಳಲೆಗಳೆ ನಮ್ಮ‌ಬಳಿಯಿದೆ. 2018-2019 ರಲ್ಲಿ ವಕ್ಫ್ ಆಸ್ತಿಯದು ಖಾತೆ ಏರಿಸಲಾಗಿದೆ. ಕೋರ್ಟ್ ನಲ್ಲಿ ಇದನ್ನ ಚಾಲೆಂಜ್ ಮಾಡಲಾಗುವುದು ಎಂದರು. 

ಈ ಜಾಗ ಮೊದಲು ವಸತಿ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಇದು ಗ್ರಾಮ ಠಾಣ ಇದು. ಗ್ರಾಮ ಠಾಣ ಹೇಗೆ ವಕ್ಫ್ ಆಸ್ತಿಯಾಗುತ್ತೆ ಗೊತ್ತಿಲ್ಲ. ಈ ಬಗ್ಗೆ ಗಂಭೀರ ಯೋಚನೆ ಮಾಡಿದ್ದೇವೆ. ಇಡೀ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ರೈತರ, ದೇವಸ್ಥಾನದ ಆಸ್ತಿಯನ್ನ ವಕ್ಫ್ ಆಸ್ತಿ ಎನ್ನಲಾಗುತ್ತಿದೆ. ಇದು ಸರಿಯಲ್ಲ.‌ ಈ ಹಿನ್ನಲೆಯಲ್ಲಿ ವಕ್ಫ್ ಬಿಲ್ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗುತ್ತಿದೆ ಎಂದರು.

ವಕ್ಫ್ ಗೆ ಅಮೆಂಡ್ ಮೆಂಟ್ ಬಿಲ್ ತರಲಾಗಿದೆ. ಈ ರೀತಿ ಏಕಾಏಕಿ ನಮ್ಮದು ಎನ್ನುವುದಕ್ಕೆ ತಡೆಯಾಗಿದೆ. ಡಿಸಿ ಕಚೇರಿಯ ಎದುರಿನ ಜಾಗ ಸಾರ್ವಜನಿಕ ಆಸ್ತಿ ಆಗಲಿದೆ ಎಂದ ಶಾಸಕರು ಇನ್ನೆರಡು ದಿನಗಳಲ್ಲಿ ಬಗೆಹರಿಸಲಾಗುತ್ತದೆ. ಇದರ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಮೊದಲು ಹೇಗೆ ಇರುತ್ತೆ ಆಗ ಮಾಡಲಾಗುವುದು ಎಂದರು. 

ಕಾಲಮಿತಿಯ ಒಳಗೆ ನಿರ್ಣಯವಾಗಲಿದೆ. ಇದು ಯಾವುದೇ ಕಾರಣಕ್ಕೂ ನಾಗರೀಕರ ಬಳಕೆ ಆಗಬೇಕಿದೆ. ಮಿತಿ ಮೀರುವ ಪರಿಸ್ಥಿತಿ ನಿರ್ಮಾಣವಾದಾಗ ಪಕ್ಷ ರಸ್ತೆಗಿಳಿದು ಪ್ರತಿಭಟಿಸಲಾಗುವುದು. ಅದು ಪಾರ್ಕಿಂಗ್ ಒಪನ್ ಸ್ಪೇಸ್ ಆಗಿ ಉಳಿಯಬೇಕು. ಬೇರೆ ರೀತಿಯ ಚಟುವಟಿಕೆಗೆ ಅವಕಾಶ ನೀಡಬಾರದು‌ ಎಂದು ಹೇಳಿದರು. 

ಅವರು ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲಿ ಆದರೆ ಉದ್ದಟತನದ ವರ್ತನೆ ಮಾಡಬಾರದು. ಸಿಡಿಪಿಯಲ್ಲಿ ಪಾರ್ಕ್ ಅಂಡ್ ಒಪನ್ ಸ್ಪೇಸ್ ಎಂದು ಇದೆ. ಆಟ ಮೈದನ ಎಂದರೆ ಆಟದ ಮೈದಾನವಾಗಲಿದೆ, ಪಾರ್ಕಿಂಗ್ ಎಂದರೆ ಪಾರ್ಕಿಂಗ್ ಆಗಲಿ ಒಟ್ಟಿನಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡಬೇಕು. ಇದು ಸರ್ಕಾರದ ಆಸ್ತಿಯಾಗಿದೆ ಎಂದರು. 

ರಾಜ್ಯ ಸರ್ಕಾರವೇ ಪಾಲಿಕೆಗೆ ಒತ್ತಡ ಹಾಕಿದೆ. ದೊಡ್ಡದೊಡ್ಡ ಅಧಿಕಾರಿಗಳು ಒತ್ತಡ ಹಾಕಿರುವುದರಿಂದ ಪಾಲಿಕೆ ಅಧಿಕಾರಿಗಳು ಕೈಚೆಲ್ಲಿ ಕೂತಿದ್ದಾರೆ. ಇದು ತಪ್ಪು ಎಂದು ತೋರಿಸಿದ್ದೇವೆ. ಇದನ್ನ ಸರಿಪಡಿಸಲಾಗುವುದು ಎಂದರು. 

ಈ ವೇಳೆ, ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮೋಹನ್ ರೆಡ್ಡಿ, ಜ್ಞಾನೇಶ್ವರ್ ಮೊದಲಾದವರು ಉಪಸ್ಥಿತರಿದ್ದರು. 

Why did the village station property become waqf property? MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close