Suddilive || Shivamogga
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್-Federation of Wine Merchants Associations urges to fulfill various demands
ಶಿವಮೊಗ್ಗದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ತನ್ನ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದೆ.
ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಟ ಶೇಕಡ 20 ರಷ್ಟು ಲಾಭಾಂಶ ನೀಡುವಂತೆ, ಹೆಚ್ಚುವರಿ ಅಬಕಾರಿ ಶುಲ್ಕವನ್ನ ಕಡಿಮೆಗೊಳಿಸುವಂತೆ, ಸನ್ನದು ಶುಲ್ಕವನ್ನ ಹೆಚ್ಚಿಸದಂತೆ, ಇದರಿಂದ ಮಾರಾಟ ವೃದ್ಧಿಯಾಗಿಲ್ಲ. ಸಿಎಲ್ 2 ಸನ್ನದುಗಳಲ್ಲಿ ಆಹಾರ ಪದಾರ್ಥಗಳು ಸಿಗುವಂತಾದರೆ ಬಡ ವರ್ಗದ ಪಾನೀಪ್ರಿಯರಿಗೆ ಅನುಕೂಲವಾಗಲಿದೆ.
ಸಿಎಲ್ 9 ಗಳಲ್ಲಿ ಮದ್ಯವನ್ನ ಪಾರ್ಸಲ್ ನೀಡಲು ಅವಕಾಶ ನೀಡಲು ಕಾನೂನು ತಿದ್ದಪಡಿಮಾಡಬೇಕು. ಇಲ್ಲಿ ಹೆಚ್ಚುವರಿ ಕೌಂಟರ್ ಗಳಿಗೆ ಶುಲ್ಕ ವಿಧಿಸಲು ಅವಕಾಶ ನೀಡುವಂತೆ ಸಂಘಟನೆ ಮನವಿ ಮಾಡಿದೆ. ಅಬಕಾರಿ ಕಾಯ್ದೆ ಕಲಂ 29 ನ್ನ ಪುನರ್ ವಿಮರ್ಶಿಸುವಂತೆ
ಎಂಎಸ್ಐಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವ ಕುರಿತು. ಸಿಎಲ್ 8, ಸಿಎಲ್ 8ಎ, ಮತ್ತು ಸಿಎಲ್ 8 ಬಿ ಸನ್ನದುಗಳ ಪಾಲನೆಗೆ ಕ್ರಮಕೈಗೊಳ್ಳುವಂತೆ, AROED ನ್ನ ಪುನರ್ ಪರಿಶೀಲಿಸಿ ರದ್ದುಗೊಳಿಸುವಂತೆ, ಸಿಎಲ್ 2 ಮತ್ತು ಸಿಎಲ್ 9, ಗಳ ಮದ್ಯಮಾರಾಟದ ವೇಳೆಯನ್ನ ಸಿಎಲ್ ನಂತೆ ಬದಲಾಯಿಸುವಂತೆ ಮೊದಲಾದ ಬೇಡಿಜೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.
urges to fulfill various demands