Suddilive || Shivamogga
If Sharavati drowning victims in Chodanal and Bydanal are not given legal documents, they will reach the office - Teenashree
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮದ್ಯಾಂತರ ಅರ್ಜಿ ಸಲ್ಲಿಸಿತ್ತು. ಜ.20 ರೊಳಗೆ ರಾಜ್ಯ ಮತ್ತು ಕೇಂದ್ರದ ಕಾರ್ಯದರ್ಶಿಗಳು ಭೂಮಿ ಬಗೆಹರಿಸಲಿ ಎಂದು ಸೂಚಿಸಿತ್ತು.
ದೆಹಲಿಯಲ್ಲಿ ಒಟ್ಟಿಗೆ ಸಭೆ ನಡೆಸಿದರು. ಉಸ್ತುವಾರಿ ಸಚಿವರು ಮತ್ತು ಸಂಸದರು ಸಮಸ್ಯೆ ಬಗೆಹರಿಸಿದರು ಎಂದು ಹೇಳಿಕೊಂಡರು. ಈಗ ರಾಜ್ಯ ಮತ್ತು ಕೇಂದ್ರ ಆದೇಶವನ್ನ ಇಟ್ಟುಕೊಂಡು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ವೆ ಕಾರ್ಯ ನಡೆಸಲಾಯಿತು.ಚೋರಡಿಯ ಬ್ಯಾಡನಾಳ ಚೋಡನಾಳದ ಗ್ರಾಮಗಳು ಸೇರಿದಂತೆ ಹಲವೆಡೆ ಇರುವ ಮುಳುಗಡೆ ಸಂತ್ರಸ್ತರಿಗೆ ತಳಮಳ ಆರಂಭವಾಗಿದೆ.
1962 ರಲ್ಲಿ ಮುಳುಗಡೆ ಸಂತ್ರಸ್ತರಿಗೆ ನೋಡಿದ ಹಕ್ಕುಪತ್ರ ನೀಡಲಾಗಿತ್ತು. ಹಕ್ಕುಪತ್ರ ನೀಡಿದ ಮೇಲೆ ಸಮಸ್ಯೆ ಬಂದರೆ ರಾಜ್ಯ ಸರ್ಕಾರ ಬಗೆಹರಿಸಬೇಕು. 1963 ರಲ್ಲಿ ಅರಣ್ಯ ಕಾಯ್ದೆ ರಚನೆಯಾಗಿ 1969 ರಲ್ಲಿ ಜಾರಿಗೆ ಬಂತು. 1962 ರಲ್ಲಿ ನೀಡಿದ ಬ್ಯಾಡನಾಳ ಚೋಡನಾಳ ಗ್ರಾಮಸ್ಥರಿಗೆ 50 ಹಕ್ಕುಪತ್ರ ನೀಡಿರುವಿಗೆ ಸರ್ವೆ ಕೈಬಿಡಲಾಗಿದೆ ಎಂದು ದೂರಿದರು.
ಹಕ್ಕಪತ್ರ ಪಡೆದವರಿಗೆ ಕಿರುಕುಳ ನೀಡುವ ಅಧಿಕಾರಿಗಳು ಹೊಣೆಗೇಡಿಗಳಾಗಿದ್ದಾರೆ. ನಾವು ಹಕ್ಕುಪತ್ರ ಕೊಟ್ವಿ ಎಂದು ಹೇಳುವ ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಕಣ್ಣು ಮುಚ್ಚಿ ಜುಳಿತಿರುವುದೇಕೆ? ನೀವು ಅಧಿಕಾರಿಗಳಕೈಗೊಂಬೆನಾ ಸರಿ ಮಾಡಿಕೊಡಿ ಎಂದು ಆಗ್ರಹಿಸಿದರು.
17 ಸಾವಿರ ಮರಗಳು ಶರಾವತಿ ಪಂಪ್ ಹೌಸ್ ನಿರ್ಮಿಸಲು ನಾಶವಾಗಲಿದೆ ಪರಿಸರ ವಾದಿಗಳು ಆರೋಪಿಸಿದ್ದಾರೆ. ಹಕ್ಕುಪತ್ರ ಪಡೆದವರಿಗೆ ಸರ್ವೆ ಮಾಡಿಕೊಡಿ ಇಲ್ಲವಾದಲ್ಲಿ ಕಚೇರಿಗೆ ನುಗ್ಗಿ ಘೇರಾವ್ ಮಾಡಲಾಗುವುದು. ಇದನ್ನ ವಾರದೊಳಗೆ ಬಗೆಹರಿಸಿಕೊಡಬೇಕೆಂದರು.
they will reach the office - Teenashree