ಸಾಮಾಜಿಕ ಜಾಲತಾಣದ ಕಾಮೆಂಟ್ಸ್ ಗೆ ಮೃತ ಮಂಜುನಾಥ ಪತ್ನಿ ಕಣ್ಣೀರು!tears for comments on social media

Suddilive || Shivamogga

ಸಾಮಾಜಿಕ ಜಾಲತಾಣದ ಕಾಮೆಂಟ್ಸ್ ಗೆ  ಮೃತ ಮಂಜುನಾಥ ಪತ್ನಿ ಕಣ್ಣೀರು!Manjunatha's wife is in tears for comments on social media!

Tears, social Media

ಕಾಶ್ಮೀರದಲ್ಲಿ ಮೊನ್ನೆ ನಡೆದ ಉಗ್ರದ ಗುಂಡಿನ ದಾಳಿಯಲ್ಲಿ ದೇಶದ 26 ನಾಗರಿಕರು ಸಾವನಪ್ಪಿ ಅವರ ಕುಟುಂಬದಲ್ಲಿ ಶೋಕ ಮನೆಮಾಡಿದೆ. ಇಂಥ ಸಮಯದಲ್ಲಿ ನಮ್ಮ ಶಿವಮೊಗ್ಗದ ಮಂಜುನಾಥ್ ಅವರ ಸಾವು ಅವರ ಕುಟುಂಬಕ್ಕೆ ಎಲ್ಲಿಲ್ಲದ ನಷ್ಟ ಉಂಟು ಮಾಡಿದೆ. ಇದೇ ಸಮಯದಲ್ಲಿ ಮಂಜುನಾಥ್ ಪತ್ನಿ ತೋರಿದ ಧೈರ್ಯ ಇಡೀ ದೇಶವೇ ಮೆಚ್ಚಿಕೊಂಡಿದೆ. 

ಇಂಥ ಸಮಯದಲ್ಲಿ ಕಿಡಿಗೇಡಿಗಳು ಅವರ ಧೈರ್ಯವನ್ನು ಕುಗ್ಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಕಮೆಂಟ್ ಹಾಕಿ ನಿಂದಿಸುತ್ತಿದ್ದಾರೆ ಇದರಿಂದ ಮಂಜುನಾಥ ಪತ್ನಿ ಪಲ್ಲವಿ ಕಣ್ಣೀರಿಡುತ್ತಿದ್ದಾರೆ.

ಪಾಕಿಸ್ತಾನ ಪೋಷಿತ ಉಗ್ರಗಾಮಿಗಳು ಮೊನ್ನೆ ನಡೆಸಿದ ಗುಂಡಿನ ದಾಳಿಯಿಂದಾಗಿ ಸಾವನ್ನ ಕಂಡ ಫ್ಯಾಮಿಲಿಯಲ್ಲಿ ಈಗ ದಿಕ್ಕೆ ತೋಚದಂತಾಗಿದೆ. ಇನ್ನು ದೇಶ ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದೆ. ಹಾಗೆ ಉಗ್ರರಿಂದ ಸಾವನಪ್ಪಿದ ಕುಟುಂಬಗಳಿಗೂ ಧೈರ್ಯ ತುಂಬ ಕೆಲಸಗಳು ನಡೆಯುತ್ತಿವೆ. 

ಅದೇ ರೀತಿ ತನ್ನ ಕಣ್ಣೆದುರೇ ತನ್ನ ಗಂಡನನ್ನು ಕಳೆದುಕೊಂಡು ಶಿವಮೊಗ್ಗಕ್ಕೆ ತನ್ನ ಮಗನನ್ನ ಸೇಫ್ ಆಗಿ ಕರೆದುಕೊಂಡು ಬಂದಂತಹ ಗಟ್ಟಿಗಿತ್ತಿ ಪಲ್ಲವಿ ತೋರಿದ ಧೈರ್ಯಕ್ಕೆ ಇಡೀ ದೇಶವೇ ಸೆಲ್ಯೂಟ್ ಮಾಡ್ತಾ ಇದೆ. ಆದರೆ ಕಿಡಿಗೇಡಿಗಳು ಮಾತ್ರ ತಮ್ಮ ದುಷ್ಟ ಬುದ್ಧಿಯನ್ನ ತೋರುತ್ತಿದ್ದಾರೆ. ಮಂಜುನಾಥ್ ರಾವ್ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್ ಮಾಡುವುದರ ಮೂಲಕ ಕಣ್ಣೀರಿಡಿಸಿದ್ದಾರೆ. ಇದನ್ನ ಕುದ್ದು ಪಲ್ಲವಿ ಅವರೆ ಮಾಧ್ಯಮದ ಜೊತೆಗೆ ಹಂಚಿಕೊಂಡು ಕಣ್ಣೀರಿಡುತ್ತಾ ವಿಕೃತ ಮನಸ್ಸುಗಳ ನಡುವೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಗಂಡನನ್ನ ಕಳೆದುಕೊಂಡ ನೋವು, ಇನ್ನೊಂದು ಕಡೆ ವಿಕೃತ ಮನಸ್ಸುಗಳ ಕೆಟ್ಟ ಕಮೆಂಟ್ಗಳು ಈಗ ಅವರನ್ನ ಕುಗ್ಗಿಸುವ ಕೆಲಸಕ್ಕೆ ಮುಂದಾಗಿದೆ. ಈ ಬಗ್ಗೆ ಅವರ ಮಾತನ್ನು ಕೇಳಿದರೆ ಎಂತವರಿಗೂ ಕೂಡ ನೋವುಂಟು ಮಾಡುವುದಲ್ಲದೆ, ವಿಕೃತ ಮನಸ್ಸುಗಳ ಮೇಲೆ ಕೋಪ ಬರಿಸುವುದಂತು ಸಹಜ..

ಇನ್ನೊಂದೆಡೆ ಈ ರೀತಿಯ ಕೆಟ್ಟ ಕಮೆಂಟ್ಗಳಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯುತ್ತರ ನೀಡುವುದರ ಜೊತೆಗೆ ಎಚ್ಚರಿಕೆಯನ್ನು ಕೆಲವರು ನೀಡುತ್ತಿದ್ದಾರೆ. ಅಂತಹ ವಿಕೃತ ಕಿಡಿಗೇಡಿಗಳಿಗೆ ತರಾಟೆಯನ್ನು ತೆಗೆದುಕೊಂಡಿದ್ದಾರೆ. ಒಬ್ಬ ಧೈರ್ಯವಂತ ಮಹಿಳೆಗೆ ಈ ರೀತಿ ಕಾಮೆಂಟ್ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಮಹಿಳೆಯರು ಕೂಡ ದನಿಯೆತ್ತಿದ್ದು, ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೇಳಿಕೊಂಡಿದ್ದಾರೆ. 

ಇಂತಹ ಮನಸ್ಥಿತಿಗಳು ನಮ್ಮ ದೇಶದಲ್ಲಿ ಇರಬಾರದು,  ದೇಶವೇ ನೋವಿನಲ್ಲಿದೆ ಇಂಥ ಸಮಯದಲ್ಲಿ ಅವರಿಗೆ ಅದರಲ್ಲೂ ಒಂದು ಹೆಣ್ಣು ಮಗುವಿಗೆ ಬೆನ್ನಿಗೆ ನಿತ್ತು ಸಹೋದರ ರೀತಿಯಲ್ಲಿ ಧೈರ್ಯ ತುಂಬಾ ಕೆಲಸ ಮಾಡಬೇಕೆ ಹೊರತು, ಅವರಿಗೆ ಕುಗ್ಗಿಸುವ ಕೆಲಸ ಮಾಡಬಾರದು ಇದೊಂದು ರೀತಿಯಲ್ಲಿ ದೊಡ್ಡಮಟ್ಟಿನ ಅಪರಾಧ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ದೇಶದಲ್ಲಿ ಹುತಾತ್ಮರಾದ ಕುಟುಂಬಗಳಿಗೆ ಸಿಗಬೇಕಾದ ಸರ್ಕಾರಿ ಗೌರವಗಳೆಲ್ಲವೂ ದೊರೆತಿವೆ. ಅದರ ಜೊತೆ ಆ ಕುಟುಂಬಗಳಿಗೂ ನೆರವಾಗುವ ಅವಶ್ಯಕತೆ ಇದೆ. ಇದೇ ಸಮಯದಲ್ಲಿ ಅವರ ಪಡುತ್ತಿರುವ ನೋವಿನ ಜೊತೆ ಮತ್ತೊಂದು ನೋವನ್ನ ಉಂಟು ಮಾಡುತ್ತಿರುವುದು ವಿಪರ್ಯಾಸವೇ ಸರಿ.

tears for comments on social media!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close