Suddilive || Shivamogga
ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಅಮಾನತ್ತಿಗೆ ಕಿಮ್ಮತ್ತಿಲ್ಲ ಎಂಬಂತಾಗಿದೆ. ಸೇವೆಯಿಂದ ಅಮಾನತಾದ ಹೋಂ ಗಾರ್ಡ್ ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೋಂ ಗಾರ್ಡ್ ಕಮಾಡೆಂಟ್ ನಿಂದ ಕಣ್ಣೊರೆಸುವ ತಂತ್ರ ನಡೆದಿದೆಯಾ ಎಂಬ ಅನುಮಾನಗಳು ಹೆಚ್ಚಾಗಿವೆ. ಹಾರ್ನಹಳ್ಳಿಯಲ್ಲಿ ನಡೆದ ಪರೇಡ್ ಗೆ ಡಿ.ರಾಘು ಹಾಜರಾಗುವ ಮೂಲಕ ಅಮಾನತು ಕಣ್ಣೆರುವ ತಂತ್ರವಾಗಿದೆಯಾ ಎಂಬ ಅನುಮಾನಕ್ಕೆ ಪ್ರಕರಣ ಬಂದು ನಿಂತಿದೆ.
ಇಂದು ನಡೆದ ಪರೇಡ್ ನಲ್ಲಿ ಅಮಾನತಾದ ರಾಘು ಭಾಗಿಯಾಗಿ, ಪರೇಡ್ ಗೆ ಹಾಜರಾದವರ ಪಟ್ಟಿಯಲ್ಲಿ ಆತನ ಹೆಸರು ಉಲ್ಲೇಖವಾಗಿದೆ. ಸಿಇಟಿ ಪರೀಕ್ಷೆಯ ವೇಳೆ ಆದಿ ಚುಂಚನಗಿರಿಯಲ್ಲಿ ಕರ್ತವ್ಯದಲ್ಲಿದ್ದ ಹೋಮ್ ಗಾರ್ಡ್ ಡಿ.ರಘು ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು. ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಡಿಸಿ ಮೂರು ದಿನಗಳ ಹಿಂದೆ ಇಬ್ಬರನ್ನು ಅಮಾನತು ಗೊಳಿಸಿದ್ದರು.
ಆರೋಪ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಿದ್ದ ಹೋಂ ಗಾರ್ಡ್ ಕಮಾಂಡೆಂಟ್ ಡಾ. ಚೇತನ್, ಕಲಾವತಿ ಹಾಗೂ ರಾಘು ಅಮಾನತುಗೊಂಡಿದ್ದರು. ಏಪ್ರಿಲ್ 18ರಂದು ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು.
ಅಮಾನತುಗೊಂಡಿದ್ದರು ಪರೇಡ್ ಗೆ ರಘು ಹಾಜರಾಗಿ ಅಚ್ಚರಿ ಮೂಡಿಸಿದ್ದಾನೆ. ಇದರಿಂದ ಅಮಾನತ್ತು ಕಾಟಾಚಾರ ಎಂಬುದು ಸಾಬೀತಾಗಿದೆ. ವಿಪ್ರ ಸಮಾಜದ ಪ್ರತಿಭಟನೆ ಮುಂದುವರೆದಿರುವ ನಡುವೆಯೇ ಕರ್ತವ್ಯಕ್ಕೆ ರಘು ಹಾಜರಾಗಿದ್ದಾರೆ. ಇದರಿಂದ ಡಿಸಿ ಮತ್ತು ಹೋಮ್ ಗಾರ್ಡ್ ಕಮಾಂಡೆಂಟ್ ಅಮಾನತುಗೊಳಿಸಿರುವುದು ನಾಟಕನಾ ಎಂಬ ಅನುಮಾನ ಶುರಾವಗಿದೆ. ವಿಪ್ರ ಸಮಾಜದ ಕಣ್ಣೊರೆಸುವ ತಂತ್ರಕ್ಕೆ ಮುಂದಾಯಿತೇ ಜಿಲ್ಲಾಡಳಿತ ಎಂಬಂತಾಗಿದೆ.
suspension is an eye-catching tactic