Suddilive || Shivamogga
Materials worth Rs 2½ lakh stolen from new building under construction
ಮನೆಕಟ್ಟಲು ಮುಂದಾಗಿದ್ದ ಮಾಲೀಕರಿಗೆ ಶಾಕ್ ಆಗಿದೆ. ಮನೆಗೆ ಅಳವಡಿಸಲು ತಂದಿಡಲಾಗಿದ್ದ ಪಬ್ಲಿಂಗ್ ವಸ್ತುಗಳನ್ನ ಕಳವು ಮಾಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಟೌನ್ ಆಲ್ಕೊಳ ವಿಕಾಸ ಶಾಲೆ ಹತ್ತಿರವಿರುವ ಐಶ್ವರ್ಯ ಎನ್ ಕ್ಲೈವ್ ಬಡಾವಣೆಯಲ್ಲಿ ನಿವೇಶನ ಸಂಖ್ಯೆ 48,49,50 ರಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಮನೆಗೆ ಬೇಕಾದ ಪ್ಲಂಬಿಂಗ್ ಸಾಮಾನುಗಳನ್ನು ದಿನಾಂಕ 26/03/2025 ರಂದು ಮನೆಯ ಒಳಾಂಗಣ ಕೆಲಸಕ್ಕೆ ಬೇಕಾದ ಪ್ಲಂಬಿಂಗ್ ಸಾಮಾನುಗಳಾದ ಎಲ್ಲೋ, ಕಾಲರ್, ಟೀ, ಬೆಂಡ್, ಎಂಟಿಎ, ಎಂಗೆಲ್ ಕಾಕ್, ಎಫ್ ಟಿ ಎ, ಬಾಲ್ ವಾಲ್ಸ್,ಎನ್ ಆರ್ ವಿ, ರಿಡಿವಿಂಗ್ ಕಪ್ಪರ್ ಗಳಲ್ಲಿ ಕೆಲವೊಂದನ್ನು ಫಿಟ್ ಮಾಡಿ ಉಳಿದವುಗಳನ್ನೆಲ್ಲಾ ನೆಲ ಮಹಡಿಯ ಬೆಡ್ ರೂಮ್ ನಲ್ಲಿ ಮತ್ತು ಮೊದಲನೇ ಮಹಡಿಯ ಹೆಡ್ ರೂಮ್ ನಲ್ಲಿ ಇಡಲಾಗಿತ್ತು.
ಅಂದು ಸಂಜೆ 06-30 ಗಂಟೆಗೆ ಮನೆಗೆ ಬೀಗವನ್ನು ಹಾಕಿಕೊಂಡು ಹೋಗಿದ್ದು, ದಿನಾಂಕ 27/03/2025 ರಂದು ಬೆಳಗ್ಗೆ 09-30 ಗಂಟೆಗೆ ಮಾಲೀಕರು ನಿರ್ಮಾಣ ಹಂತದ ಮನೆಗೆ ಬಂದು ಬೀಗ ತೆಗೆದು ಒಳಗೆ ಹೋಗಿ ಕೆಲಸಗಾರರಿಗೆ ಕೆಲಸಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಡಲು ಹೋದಾಗ ಬೆಡ್ ರೂಮ್ ಮತ್ತು ಹೆಡ್ ರೂಮ್ ನಲ್ಲಿದ್ದ ಎಲೆ, ಕಾಲರ್, ಟೀ, ಬೆಂಡ್, ಎಂಟಿಎ, ಎಂಗೆಲ್ ಕಾಕ್, ಎಫ್ ಟಿಎ, ಬಾಲ್ ವಾಲ್ಸ್,ಎನ್ ಆರ್ ವಿ, ರಿಡಿವಿಂಗ್ ಕಪ್ಪರ್ ಗಳು ಕಾಣೆಯಾಗಿದ್ದವು.
ನಿರ್ಮಾಣ ಹಂತದ ಮನೆಯ ಮೊದಲನೇಯ ಮಹಡಿಯಲ್ಲಿರುವ ಓಪನ್ ಕಿಟಕಿಯ ಮುಖಾಂತರ ಮನೆಯೊಳಗೆ ಬಂದು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ಲಂಬಿಂಗ್ ಸಾಮಾನುಗಳ ಅಂದಾಜು ಬೆಲೆ 2,50,000/- ರೂ ಗಳಾಗಿದ್ದು, ಕಳುವಾದ ಬಗ್ಗೆ ವಿನೋಬ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
stolen from new building under construction