Suddilive || Shivamogga
ಬಜಾರ್ ನಲ್ಲಿ ಕೆಲ ಅಂಗಡಿ ಒಪನ್ ಕೆಲ ಅಂಗಡಿ ಗಳು ಕ್ಲೋಸ್ -Some shops open in the bazaar, some shops close.
ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದ ಶಿವಮೊಗ್ಗದ ಮಂಜುನಾಥ್ ಅವರ ಪಾರ್ಥೀವ ಶರೀರ ಪಾದಯಾತ್ರೆ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ. ಈಗಾಗಲೇ ಬಜಾರ್, ಹೂವಿನ ಮಾರ್ಕೆಟ್ ರಸ್ತೆ ಗಳಲ್ಲಿ ಕೆಲ ಅಂಗಡಿಗಳ ಬಂದ್ ಆದರೆ ಕೆಲವು ಅಂಗಡಿಗಳು ತೆರೆದು ವ್ಯಾಪಾರ ನಡೆಯುತ್ತಿದೆ.
ಹೂವಿನ ಮಾರ್ಕೆಟ್ ರಸ್ತೆಯಲ್ಲಿ ಎಲ್ಲ ಹೂವಿನ ಅಂಗಡಿಗಳು ವ್ಯಾಪರ ನಡೆಸುತ್ತಿವೆ. ಬಜಾರ್ ನಲ್ಲಿ ದಿನಸಿ, ಚಿನ್ನಾ ಬೆಳ್ಳಿ ವ್ಯಾಪಾರದ ಅಂಗಡಿ ಗಳು ಬಂದ್ ಆದರೆ ಕೆಲ ಹೋಟೆಲ್, ಹಣ್ಣಿನ ಅಂಗಡಿಗಳು ವ್ಯಾಪಾರ ಆರಂಭಿಸಿವೆ.
ಹೊಳೆಹೊನ್ನೂರನ್ನ ದಾಟಿ ಪಾರ್ಥೀವ ಶರೀರ ಮುಂದು ಬಂದಿದ್ದು ಯಾವುದೇ ಕ್ಷಣದಲ್ಲಿ ಶಿವಮೊಗ್ಗ ತಲುಪಲಿದೆ. ಹೊಳೆಹೊನ್ನೂರು ಕ್ರಾಸ್ ಬಳಿ ಹಿಂದೂ ಸಂಘಟನೆಗಳು ಪಾರ್ಥೀವ ಶರೀರದ ಸ್ವಾಗತಕ್ಕೆ ಸಿದ್ದತೆಗೊಂಡಿದೆ.
some shops close