ಒಂದು ಕಡೆ ಉಗ್ರರ ರೇಖಾಚಿತ್ರ ಬಿಡುಗಡೆ, ಇನ್ನೊಂದು ಕಡೆ ಮೃತ ಮಂಜುನಾಥನ ದೇಹ ರವಾನಿಗೆ ಸಿದ್ದತೆ-The release of the drawings

 Suddilive || jammu

ಒಂದು ಕಡೆ ಉಗ್ರರ ರೇಖಾಚಿತ್ರ ಬಿಡುಗಡೆ, ಇನ್ನೊಂದು ಕಡೆ ಮೃತ ಮಂಜುನಾಥನ ದೇಹ ರವಾನಿಗೆ ಸಿದ್ದತೆ-On one hand, the release of the drawings of the terrorists, on the other hand, the readiness to send the body of the deceased Manjunatha

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ 30 ಜನ ಬಲಿಯಾಗಿದ್ದು ಅದರಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಅವರು ಸಾವನ್ನಪ್ಪಿದ್ದರು. ದಾಳಿ ನಡೆಸಿದ ಉಗ್ರರ ಫೊಟೊ ಬಿಡುಗಡೆಯಾಗಿದೆ. 

ಆಸೀಫ್, ಸುಲೇಮಾನ್ ಮತ್ತು ಅಬು ಎಂಬುವರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಆಸೀಫ್ ಶೇಖ್ ಎಂಬ ಸ್ಥಳೀಯ ಮತ್ತು ಆಸೀಫ್ ಫೌಜಿಯ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. 

ಇತ್ತಕಡೆ ಕಾಶ್ಮೀರದ  ಉಗ್ರರ ದಾಳಿಗೆ  ಸಾವನ್ನಪ್ಪಿದವರ ಮೃತದೇಹಗಳ ರವಾನೆಗೆ ಅಂತಿಮ ಸಿದ್ಧತೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್‌ ಅವರ ಪಾರ್ಥೀವ ಶರೀರದ ಮುಂದೆ ಅವರ ಪತ್ನಿ ಪಲ್ಲವಿ ಕಣ್ಣಿರಾದರು. ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಪಲ್ಲವಿ ಅವರನ್ನು ಸಂತೈಸಿದರು.

ಅನಂತನಾಗ್‌ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಬೆಂಗಳೂರಿನ ಭರತ್‌ ಭೂಷಣ್‌, ಮಧುಸೂದನ್‌ ಸೋಮಿಶೆಟ್ಟಿ ಮತ್ತು ಶಿವಮೊಗ್ಗದ ಮಂಜುನಾಥ ರಾವ್‌ ಅವರ ಮೃತದೇಹಗಳು ಇಲ್ಲಿಯೇ ಇರಿಸಲಾಗಿದೆ.

the release of the drawings

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close