ಅಕ್ರಮ ಗೋಕಸಾಯಿ ಖಾನೆ ಮೇಲೆ ಎರಡನೇ ಬಾರಿಗೆ ದಾಳಿ-raid on illegal cow slaughterhouse

 Suddilive || Bhadravathi

ಅಕ್ರಮ ಗೋಕಸಾಯಿ ಖಾನೆ ಮೇಲೆ ಎರಡನೇ ಬಾರಿಗೆ ದಾಳಿ -Second raid on illegal cow slaughterhouse

Illegal, cow slaghter

ಭದ್ರಾವತಿ ತಾಲೂಕು ವೀರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಳ್ಳಿ ಗ್ರಾಮದಲ್ಲಿ ಅಕ್ರಮ ಕಸಾಯಿ ಖಾನೆಯ ಪಕ್ಕದಲ್ಲಿ ಯಾವುದೇ ಪರವಾಗಿ ಇಲ್ಲದೆ ತಂದಿರಿಸಿದ್ದ 17 ಗೋವುಗಳನ್ನ ಭದ್ರಾವತಿ ಗ್ರಾಮಾಂತರ ಪೊಲೀಸರು ರಕ್ಷಿಸಿದ್ದಾರೆ. 

ನಿನ್ನೆ ರಾತ್ರಿ ವೀರಾಪುರ ಗ್ರಾಮದಲ್ಲಿ 12 ಕರುಗಳು ಮತ್ತು 6 ಹೋರಿಗಳನ್ನ ತಂದಿರಿಸಲಾಗಿದೆ. ಮಾಂಸ ಮಾರಾಟ ಮಾಡುವ ಅಕ್ರಮ ಗೋಕಸಾಯಿ ಖಾನೆಯಾಗಿದೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ದಾಳಿ ನಡೆಸಿ 17 ಹಸುಗಳನ್ನ ರಕ್ಷಿಸಲಾಗಿದೆ. 

ಈಗ ನಡೆದ ಕಸಾಯಿ ಖಾನೆಯ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು. ಗೋಮಾಂಸಗಳು ಪತ್ತೆಯಾಗಿತ್ತು. ಈಗ ಇದು ಎರಡನೇ ಬಾರಿ ದಾಳಿ ನಡೆಸಲಾಗುತ್ತಿದೆ. ಒಮ್ಮೆ ಕಸಾಯಿ ಖಾನೆ ಮೇಲೆ ದಾಳಿ ನಡೆದರೆ ಅದನ್ನ ಸಂಪೂರ್ಣ ಸೀಜ್ ಮಾಡಬೇಕು. ತಹಶೀಲ್ದಾರ್ ಮೂಲಕ ಕ್ರಮ ಜರುಗಿಸಬೇಕು. ಆದರೆ ಎರಡೆರಡು ಬಾರಿ ಗೋವಿನ ವಧೆಯಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಹಿಂದೂ ಸಂಘಟನೆ ಪೊಲೀಸರ ದಾಳಿಯ ಮೇಲೆ ಸಂಶಯ ವ್ಯಕ್ತಪಡಿಸಿವೆ. 

ರಕ್ಷಣೆ ಮಾಡಿ ಪೊಲೀಸರ ಸಹಾಯದಿಂದ ಕೂಡ್ಲಿ ಶೃಂಗೇರಿ ಮಠಕ್ಕೆ ಗೋವು ಗಳನ್ನು ಬಿಡಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.

 raid on illegal cow slaughterhouse

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close