Suddilive || Shivamogga
ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಪ್ರತಿಭಟನೆ -Vishwa Hindu Parishad Bajrang Dal protest in Shivamogga
ಕಾಶ್ಮೀರದಲ್ಲಿ ಹಿಂದೂಗಳನ್ನ ಟಾರ್ಗೆಟ್ ಮಾಡಿಕೊಂಡು ಹತ್ಯೆಮಾಡಿದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿ ಇಂದು ನಗರದ ಉಷಾ ನರ್ಸಿಂಗ್ ಹೋಮ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಿದೆ.
ವೃತ್ತದಲ್ಲಿ ಭಯೋತ್ಪಾದಕರ ಪ್ರತಿಕೃತಿಯನ್ನ ದಹಿಸಲಾಯಿತು. ಇದೇವೇಳೆ ಭಯಾತ್ಪೋದಕರ ಗುಂಡಿಗೆ ಬಲೊಯಾದ ಮಂಜುನಾಥ್ ರಾವ್ ಅವರ ಪೋಟೊ ಹಿಡಿದು ಪ್ರತಿಭಟಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ವಾಸುದೇವ್ ರಜೆಯ ನಿಮಿತ್ತ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಜುನಾಥ್ ಗುಂಡಿಗೆ ಬಲಿಯಾಗಿದ್ದಾರೆ. ಈ ಕೃತ್ಯದಲ್ಲಿ ಹಿಂದೂಗಳನ್ನ ಗುರಿಯಾಗಿಸಿ ಕೊಲ್ಲಲಾಗಿದೆ. ಇದನ್ನ ನಾವುಗಳೇ ಪ್ರಶ್ನೆ ಹಾಕಿಕೊಳ್ಳುವ ಮೂಲಕ ಹಿಂದೂಗಳ ರಕ್ಷಣೆ ಎಷ್ಟು ಮುಖ್ಯ ಎಂದು ತಿಳಿಯಲಿದೆ ಎಂದರು.
ಎಂಎಲ್ ಸಿ ಡಿ.ಎಸ್ ಅರುಣ್, ಮಧ್ಯಾಹ್ನದ ವೇಳೆ ಉಗ್ಋ ಅಟ್ಟಹಾಸ ಮೆರೆದಿರುವುದು ತಿಳಿಯಿತು. ನಮ್ಮ ಶಿವಮೊಗ್ಗದ ಜನರೇ ಹತ್ಯೆಯಾಗಿರುವುದು ಅಚ್ಚರಿ ಮೂಡಿಸಿದೆ. ಒಂದು ವರೆ ವರ್ಷ ಹಿಂದೆ ಆ ಜಾಗಕ್ಕೆ ಹೋಗಿದ್ವಿ. ಪಾಕಿಸ್ತಾನ ಬಾರ್ಡರ್ ಹತ್ತಿರ ಕಾಣುತ್ತೆ. ಇತ್ತೀಚಿನ ದಿನಗಳಲ್ಲಿ ಜನ ಕಾಶ್ಮೀರಕ್ಕೆ ಹೋಗುವಂತಾಗಿತ್ತು. ಮೋದಿ ನೇತೃತ್ವದ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನ ರಾಷ್ಟ್ರಧ್ವಜ ಹಾರಿಸಿದ್ವಿ. 370 ಅರ್ಟಿಕಲ್ ತೆಗೆಯಲಾಯಿತು.
ಅಲ್ಲೊಂದು ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ ಉತ್ತೇಜನ ಸಿಕ್ಕಿದೆ. ಅಮಿತ್ ಶಾ ನುಗ್ಗಿ ಹೊಡೀತಾರೆ. ಆದರೆ ಕಾಶ್ಮೀರದಲ್ಲಿ ಬೇರೆಯ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂತಹ ಕೃತ್ಯ ನಡೆದಯುತ್ತಿದೆ. ನಮ್ಮ ಭಾರತದಲ್ಲಿಯೇ ಇದ್ದುಕೊಂಡು ದೇಶಕ್ಕೆ ತೊಂದರೆ ಕೊಡುವುದು ಅವರ ಉದ್ದೇಶವಾಗಿದೆ ಎಂದು ದೂರಿದರು. ಉಗ್ರರ ತಾಕತ್ತು ಮುರಿಯುವ ಶಕ್ತಿ ಭಾರತಕ್ಕಿದೆ. 26 ಜನ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಫಾರೂಕ್ ಅಬ್ದುಲ್ಲಾರಿಗೆ ಆಗದಿದ್ದರೆ ರಾಜೀನಾಮೆ ನೀಡಿ ಎಂದು ದೂರಿದರು.
ಈ ವೇಳೆ ಮಂಜುನಾಥ್ ಅವರ ಸಾವಿಗೆ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಸಂಘಟನೆಯ ಆನಂದ್ ರಾವ್ ಜಾದವ್, ರಮೇಶ್ ಬಾಬು, ಅಂಕುಶ್, ಸುರೇಶ್ ಬಾಬು ಮೊದಲಾದವರು ಉಪಸ್ಥಿತರಿದ್ದರು.
ಅದರಂತೆಯೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಬಿಜೆಪಿ ಪಕ್ಷ ಭಯೋತ್ಪಾದಕರ ದಾಳಿಗೆ ಬಲಿಯಾದ ಮಂಜುನಾಥ್ ಅವರ ಫೊಟೊ ಹಿಡಿದುಕೊಂಡು ಎರಡು ನಿಮಿಷ ಮೌನಾಚರಣೆ ನಡೆಸಿತು.
protest in Shivamogga