Suddilive || Shivamogga
ಸಚಿವರ ಶ್ರಮಧಾನದ ಫೊಟೊ ವೈರಲ್-Minister's Shramdhana photo goes viral
ಇದೊಂದು ಫೊಟೊ ಶ್ರಮಧಾನದ ಪ್ರತೀಕವಾಗಿದೆ. ಅಂದು ನಾಯಕ ಮಧು ಬಂಗಾರಪ್ಪನವರಿಗೆ ಅಧಿಕಾರವಿರಲಿಲ್ಲ. ಶಾಸಕ ಸ್ಥಾನ ಮಾತ್ರವಿತ್ತು. ಇಂದು ಎಲ್ಲವೂ ಇದೆ. ಶಾಸಕರಾಗಿದ್ದಾಗ ನರೇಗಾ ಯೋಜನೆಯಡಿ ಶ್ರಮದಾನ ಮಾಡಿರುವ ಫೋಟೋವೊಂದು ಲಭಿಸಿದೆ. ಆ ಫೋಟೊಗೆ ಇಂದು ಸಹ ಬೇಡಿಕೆಯಿದೆ.
ಇಷ್ಟೆಲ್ಲ ಪೀಠಿಕೆ ಹಾಕಲು ಸಹ ಕಾರಣವಿದೆ. ದಿನಾಂಕ 07.04.2025ರ ಸೋಮವಾರ ಬೆಳಗ್ಗೆ 8 ಗಂಟೆಗೆ ಉದ್ಯೋಗ ಖಾತ್ರಿ (MNREGA) ಯೋಜನೆಯಡಿ ಸೊರಬ ತಾಲೂಕು ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗು ಅಡುಗೆ ಮನೆ ನಿರ್ಮಾಣದ ಶಂಕುಸ್ಥಾಪನೆಗೆ ಶ್ರಮದಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಡಿ. ಸುಧಾಕರ್ ರವರು ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಜಿಲ್ಲೆಯ - ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜೀವ್ ಗಾಂಧಿಯವರ ಕನಸಿನ ಯೋಜನೆಯನ್ನು ಅಂದು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರು ಪರಿಣಾಮಕಾರಿಯಾಗಿ ಜಾರಿಗೆ ತಂದು ದುಡಿಯುವ ಕೈಗಳಿಗೆ ಉದ್ಯೋಗದ ಜೊತೆಗೆ ರಾಷ್ಟ್ರೀಯ ಸಾಕ್ಷರತಾ ಆಂದೋಲನಕ್ಕೆ ನಾಂದಿ ಹಾಡಿದರು. ಇಂತಹ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವ ಮಧು ಬಂಗಾರಪ್ಪ ಕೋರಿದ್ದಾರೆ.
Minister's Shramdhana photo goes viral