ಮಾಜಿ ಸಚಿವರಿಗೆ ಸಚಿವರು ಸಭಾಪತಿಗಳಿಂದ ಅಂತಿಮ ನಮನ-pay last respects to former ministers

Suddilive || Shivamogga 

ಮಾಜಿ ಸಚಿವರಿಗೆ ಸಚಿವರು ಸಭಾಪತಿಗಳಿಂದ ಅಂತಿಮ ನಮನ-Ministers and Speaker pay last respects to former ministers

Minister, former


ಅನಾರೋಗ್ಯ ಕಾರಣದ ಹಿನ್ನಲೆಯಲ್ಲಿ ಮಾಜಿ ಸಚಿವ ಬೇಗಾನೆ ರಾಮಯ್ಯ (83) ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು ಅವರ ಪಾರ್ಥೀವ ಶರೀರವನ್ನ ಶಿವಮೊಗ್ಗದ ಹೊಸಳ್ಳಿಯ ಸೀತಾ ಪಾರಂ ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 

ಗುಂಡೂರಾವ್ ಅವರು ಸಿಎಂ ಆಗಿದ್ದಾಗ ಪಂಚಾಯತ್ ರಾಜ್ ಸಚಿವರಾಗಿ ಬೇಗಾನೆ ರಾಮಯ್ಯ ಸೇವೆ ಸಲ್ಲಿಸಿದ್ದರು. ಶೃಂಗೇರಿಯಿಂದ ಶಾಸಕರಾಗಿ ಗೆದ್ದು ಬೇಗಾನೆ ರಾಮಯ್ಯ ಸಚಿವರಾಗಿದ್ದರು. 

ಇಂದು ಸಚಿವ ಮಧು ಬಂಗಾರಪ್ಪ ಮತ್ತು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಂತಿಮ ದರ್ಶನ ಪಡೆದರು. ಸಚಿವ ಮಧು ಬಂಗಾರಪ್ಪನವರ ಎದುರೆ ತ್ರಿವರ್ಣ ಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಹೇಳಲಾಗಿದೆ. 

ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ ಮತ್ತು ಕುಟುಂಬದವರಿಗೆ ಸಭಾಧ್ಯಕ್ಷರು ಸಾಂತ್ವನ ಹೇಳಿದ್ದಾರೆ. ಅಗಲಿದ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರಿಗೆ ಸಕಲ ಸರ್ಕಾರಿ ಗೌರವದೊಂದಗೆ ಅಂತಿಮ ನಮನ ಸಲ್ಲಿಸಲಾಯಿತು‌. 

ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿ ಖಾದರ್ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ವೇಳೆ  ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹಾಗೂ ವಿನಯ್ ಗುರೂಜಿ ಉಪಸ್ಥಿತರಿದ್ದರು. 

pay last respects to former ministers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close