ಕ್ರೀಡಾಕೂಟದಲ್ಲಿ ಶಾಸಕರ ಚೆನ್ನಿ ಬಗ್ಗೆ ಸಚಿವರು ಹೇಳಿದ್ದೇನು?minister say about the MLA

 Suddilive || Shivamogga

ಕ್ರೀಡಾಕೂಟದಲ್ಲಿ ಶಾಸಕರ ಚೆನ್ನಿ ಬಗ್ಗೆ ಸಚಿವರು ಹೇಳಿದ್ದೇನು?What did the minister say about the MLA in the Kreedakuta?


Minister, MLA

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಇವರ ಸಂಹಮಯುಕ್ತ ಆಶ್ರಯಗಳಲ್ಲಿ ಎರಡು ದಿನಗಳ ವರೆಗೆ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ-2025 ಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. 

ಗೋವಿಂದ ಸ್ವಾಮಿ, ಜ್ಯೋತಿ, ಕನ್ಯಾಕುಮಾರಿ ಇವರುಗಳು ಕ್ರೀಡಾ ಜ್ಯೋತಿ ಹಿಡಿದು ಬಂದವರನ್ನ  ಸಚಿವರು ಸ್ವೀಕರಿಸಿದರು‌. ಕ್ರೀಡಾ ಪ್ರತಿಜ್ಞೆ ವಹಿಸಲಾಯಿತು. 

ಕ್ರೀಡಾಕೂಟವನ್ನ ಉದ್ಘಾಟಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ರಾಜಕಾರಣಿಗೆ ಐದು ವರ್ಷಕ್ಕೊಮ್ಮೆ ಪರೀಕ್ಷೆ ಬರುತ್ತದೆ‌ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಜೀವನದಲ್ಲಿ ಒಮ್ಮೆ ಪರೀಕ್ಷೆ ಎದುರಿಸಿ ಪಾಸ್ ಆದರೆ ಸಾಕು ಜೀವನ ಇಡಿ ಸರ್ಕಾರಿ ಕೆಲಸ ಮಾಡಬಹುದಾಗಿದೆ.

ಶಿಕ್ಷಕರಿಗೆ 60 ಜನರಿಗೆ ಇಪಿಎಲ್  ರೆಸಿಡೆನ್ಷಿಯಲ್ ತರವೇತಿ ನೀಡಲಾಗಿದೆ. ಇವರಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲು ಕೋರಿರುವೆ ಅವರಿಗೆ ಪರೀಕ್ಷೆ ನಡೆಸಲಾಗುವುದು. ಮಕ್ಕಳಿಗೆ ಹೇಗೆ ಹೋಳಿಕೊಡಲಾಗುತ್ತದೆ ಹಾಗೆ ಕಲಿಯುಯ್ತಾವೆ. ಫಿಸಿಕಲ್ ತರಬೇತಿ ಕಲಿಸಕೊಡಲಾಗುತ್ತದೆ ಎಂದರು.

ಹೆಚ್ಚುಮೊತ್ತದ ವಿಮೆ ನೌಕರರಿಗೆ ನೀಡಲಾಗುತ್ತಿದೆ. ಸಿಆಂಡ್ ಆರ್ ಬದಲಾವಣೆಗೆ ಅನುವು ಮಾಡಿಕೊಡಲಾಗುತ್ತಿದೆ. 6 ರಿಂದ ಒಂದು ವರ್ಷದ ಒಳಗೆ ಬದಲಾವಣೆ ಮಾಡಲಾಗುವುದು. 32 ಸಾವಿರ ಶಿಕ್ಷಕರು ವರ್ಗಾವಣೆ ಆಗಬಹುದು. 12 ಸಾವಿರ ಶಿಕ್ಷಕರನ್ನ ನೇಮಿಸಲಾಗುವುದು ಎಂದರು. 

ಎನ್ ಪಿಎಸ್ ಒಪಿಎಸ್ ಬಗ್ಗೆ ಪಕ್ಷದ ಪ್ರನಾಳಿಕೆ ಇದೆ ಮಾಡಲಾಗುವುದು. ಸರ್ಕಾರಿ ನೌಕರರ ರಾಜ್ಯ ನಟ್ಟದ ಮುಕ್ತಾಯದ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಸುವ ಚಿಂತನೆ ನಡೆಯುತ್ತಿದೆ.  

ಚೆನ್ನಿಯವರ ಬಗ್ಗೆ ಹುಷಾರ್ ಆಗಿ ಮಾತನಾಡಬೇಕಿದೆ 

ಶಾಸಕ ಚೆನ್ನಿಯವರ ಬಗ್ಗೆ ಖುಷಿ ಖುಷಿಯಾಗಿಯೇ ಮಾತನಾಡಿದ ಸಚಿವ ಮಧು ಬಂಗಾರಪ್ಪ ನಮ್ಮವರು ಶಿವಮೊಗ್ಗದಲ್ಲಿ ಗೆದ್ದಿದ್ದರೆ ಖುಷಿಯಾಗಿತ್ತು. ನೀವು ಗೆದ್ದಿರುವುದು ಇನ್ನೂ ಖುಷಿಯಾಗಿದೆ ಎಂದು ಭಾಷಣದ ಮಧ್ಯೆ ಪ್ರಸ್ತಾಪಿಸಿದರು. 

ಚೆನ್ನಿ ಮತ್ತು ನಮ್ಮ ಬಾಂಧವ್ಯ ಹೀಗೆ ಉತ್ತಮವಾಗಿದೆ. ಆದರೆ ಕೆಲವೊಮ್ಮೆ ಹುಷಾರಾಗಿ ಮಾತನಾಡಬೇಕಿದೆ. ಇಲ್ಲ ಅಂದರೆ ಚೆನ್ನಿ ಅವರು ನಮ್ಮನ್ನ ತೀಕ್ಷ್ಣವಾಗಿ ಟೀಕೆಗೆ ಗುರಿ ಮಾಡಲಿದ್ದಾರೆ. ಸದನದಲ್ಲೂ ಹಾಗೆನೆ ಹೊರಗಡೆನೂ ಹಾಗೆ. ನಾನು ಸಹ ಸದನದಲ್ಲಿ ನಾನು ಬರುವ ತನಕ ಗಲಾಟೆ ಮಾಡಿ ನಾನು ಬಂದ ಮೇಲೆ ಸುಮ್ಮನಿರುವಂತೆ  ಹೇಳಿರುವೆ ಹಾಗೆ ಅವರು ನಡೆದುಕೊಳ್ಳುತ್ತಾರೆ ಎಂದರು

ಇದಕ್ಕೂ ಮೊದಲು ಸಚಿವರು ಬಲೂನ್ ಬಿಡುವ ಮೂಲಕ ಮತ್ತು ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಉದ್ಘಾಟಿಸಲಾಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close