Suddilive || Shivamogga
ಡಿಸಿ ಜೊತೆಯ ಸಭೆಯ ನಂತರ ತಿಳಿಗೊಳ್ಳಲಿದೆಯಾ ಪರಿಸ್ಥಿತಿ?-Will the situation be clarified after the meeting with the DC?
ನಿನ್ನೆ ಡಿಸಿ ಕಚೇರಿ ಎದುರಿನ ಮೈದಾನಕ್ಕೆ ಬೇಲಿ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲಿ ತೆರವು ಕಾರ್ಯಾಚರಣೆ ನಡೆದರೂ ಬ್ಯಾರಿಕೇಡ್ ಹಾಕಲಾಗಿದೆ. ಹಾಗಾದರ ಪರಿಸ್ಥಿತಿ ಇಲ್ಲಿಗೆ ತಿಳಿಗೊಂಡಿತಾ? ಇಲ್ಲ ಎನ್ನುತ್ತವೆ ಮಾಹಿತಿಗಳು
ಮಾ.31 ಕ್ಕೆ ನಡೆದ ಈದುಲ್ ಫಿತ್ರು ಹಬ್ಬದ ಪ್ರಯುಕ್ತ ಇಲ್ಲಿರುವ ಜಾಗದಲ್ಲಿ ಪ್ರಾರ್ಥನೆಗಾಗಿ ಬೇಲಿ ಹಾಕಲಾಗಿತ್ತು. ಹಬ್ಬದ ಮು ಬೇಲಿ ಹಾಕಿದ್ದನ್ನ ಹಿಂದೂ ಸಂಘಟನೆಗಳು ವಿರೋಧಿಸಿ ಪ್ರತಿಭಟಿಸಿದ್ದವು. ಎಸ್ಪಿ ಮಿಥುನ್ ಕುಮಾರ್ ಅವರ ಸಮ್ಮುಖದಲ್ಲಿ ಬೇಲಿ ತೆರವಿಗೆ ಸಮಯಾವಕಾಶ ಪಡೆಯಲಾಗಿತ್ತು.
ನಿನ್ನೆ ಎಸ್ಪಿ ಅವರು ನೀಡಿದ ಸಮಯಾವಕಾಶದಲ್ಲಿಯೇ ಅಕ್ರಮ ಬೇಲಿ ತೆರವಾದರೂ ಸಹ ಸಾರ್ವಜನಿಕರ ಬಳಕೆಗೆ ಅವಕಾಶ ಸಿಕ್ಕಿಲ್ಲ. ಕಾರಣ ಪೊಲೀಸರ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಈ ಬ್ಯಾರಿಕೇಡ್ ನಿರ್ಮಾಣ ಇನ್ನೂ ತಿಳಿಗೊಂಡಿದೆಯಾ ಎಂದರೆ ಸಧ್ಯಕ್ಕೆ ತಿಳಿಗೊಂಡಿಲ್ಲ.
ಇಂದು ಸಹ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಕೆಲ ಸಂಘಟನೆಗಳ ಸಭೆ ನಡೆಯಲಿದೆ. ಈ ಸಭೆಯ ಬಳಿಕ ಏನು ತೀರ್ಮಾನವಾಗಲಿದೆ ಕಾದು ನೋಡಿ ಮುಂದಿನ ನಡೆಗಳು ನಡೆಯಲಿವೆ. 10 ಗಂಟೆಯ ನಂತರ ಸಭೆ ನಡೆಯುವ ಸಾಧ್ಯತೆಯಿದೆ.
ಈ ರೀತಿ ಡಿಸಿ ಜೊತೆಯ ಮೀಟಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಡಿಸಿ ಜೊತೆಯ ಸಭೆಯ ನಂತರ ಇಂದು ಮಧ್ಯಾಹ್ನ ಈದ್ಗಾ ಮೈದಾನ ಸಮಿತಿಯ ಸುದ್ದಿಗೋಷ್ಠಿ ಸಹ ಇದೆ.
meeting with the DC?