Shivamogga || Shivamogga
ಏನೇ ಸಾಂತ್ರಾನ ಹೇಳಿದರೂ ಕಡಿಮೆನೆ-ಯು.ಟಿ.ಖಾದರ್-No matter what consolation you give, it's worthless - U.T. Khader
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಜುನಾಥ ಅವರ ಕುಟುಂಬಕ್ಕೆ ಎಷ್ಟೇ ಸಾಂತ್ವಾನ ಹೇಳಿದ್ರೂ ಕಡಿಮೆನೆ ಎಂದು ಶಿವಮೊಗ್ಗದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಜುನಾಥ್ ರಾವ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ನಿನ್ನೆಯೇ ಬರಬೇಕಾಗಿತ್ತು. ಬೇರೊಂದು ಕಾರ್ಯಕ್ರಮ ಇದ್ದದ್ದರಿಂದ ಇಂದು ಇಲ್ಲಿಗೆ ಬಂದಿದ್ದೇನೆ. ಮಂಜುನಾಥ್ ಕುಟುಂಬಸ್ಥರಿಗೆ ಎಷ್ಟೆ ಸಾಂತ್ವಾನ ಹೇಳಿದ್ರೂ ಕಡಿಮೆನೇ ಎಂದರು.
ಅವರ ನೋವು ಅವರಿಗೆ ಗೊತ್ತಿದೆ. ಅವರ ಜೊತೆ ದೇಶವೇ ಇದೆ. ಇಂತಹ ಘಟನೆ ಯಾರಿಗೂ ಆಗಬಾರದು. ಅ ಸಂದರ್ಭದಲ್ಲಿ ಸಹೋದರಿ ಪಲ್ಲವಿ ಅವರ ಧೈರ್ಯ ತೋರಿದ್ದಾರೆ. ಈಡೀ ದೇಶದ ಜನತೆ ಇವತ್ತು ಕೇಂದ್ರದ ಜೊತೆ ಇದ್ದಾರೆ. ದೇಶವನ್ನು ದುರ್ಬಲಗೊಳಿಸುವ ಕೆಲಸವನ್ನ ಭಯೋತ್ಪಾದಕರು ಮಾಡ್ತಿದ್ದಾರೆ.ಅವರನ್ನ ಬೆಂಬಲಿಸದವರನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ಜೊತೆ ಎಲ್ಲರೂ ಇರಬೇಕು. ರಾಜಕೀಯವನ್ನ ಬದಿಗಿಟ್ಟು, ಎಲ್ಲರೂ ಜೊತೆಗಿರಬೇಕು. ನೈತಿಕವಾಗಿ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು..ಈ ರೀತಿಯ ಕೃತ್ಯ ಮಾಡಿದವರು ಹಾಗೂ ಅವರಿಗೆ ಬೆಂಬಲ ನೀಡಿದವರನ್ನ ಮಟ್ಟ ಹಾಕಬೇಕು ಎಂದರು.
ಸರ್ಕಾರ ಪರಿಹಾರ ಘೋಷಿಸಿದ್ದು ಇದರ ಬಗ್ಗೆ ಪುನರ್ ಪರಿಶೀಲಿಸುವುದಾಗಿ ಹೇಳಿದರು. ಆನೆ ತುಳಿತಕ್ಕೆ ಕೇರಳ ವ್ಯಕ್ತಿ ಸಾವಾದರೆ, 25 ಲಕ್ಷ ರೂ ನೀಡಲಾಗಿದೆ. ಆದರೆ ಸ್ಥಳೀಯರಿಗೆ 10 ಲಕ್ಷ ರೂ. ನೀಡುತ್ತಿರುವುದು ಎಷ್ಟು ಸರಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಾದರ್ ಪುನರ್ ಪರಿಶೀಲಿಸುವುದಾಗಿ ಹೇಳಿದರು.
it's worthless - U.T. Khader