Suddilive || Bhadravathi
ಇಂಟರ್ ಸಿಟಿ ರೈಲು 1 ವರೆ ಗಂಟೆ ತಡವಾಗಿ ಚಲಿಸಿದ್ದೇಕೆ?intercity train running 1 and a half hours late
ತರೀಕೆರೆ ಮತ್ತು ಶಿವಪುರದಲ್ಲಿ ಇಂಟರ್ ಸಿಟಿ ರೈಲು ಸುಮಾರು ಒಂದು ವರೆ ಗಂಟೆ ನಿಂತ ಪರಿಣಾಮ ರೈಲು ಪ್ರಯಾಣಿಕರಿಗೆ ಅಡಚಣೆ ಉಂಟಾಗಿದೆ.
ಎಲೆಕ್ಟ್ರಿಕ್ ಸಮಸ್ಯೆ ಉಂಟಾದ ಪರಿಣಾಮ ತರೀಕೆರೆ ಮತ್ತು ಶಿವಪುರದಲ್ಲಿ ಸುಮಾರು ಹೊತ್ತು ರೈಲು ತಡವಾಗಿ ಚಲಿಸಿದೆ.
ಮಧ್ಯಾಹ 2-51 ಕ್ಕೆ 16205 ತಾಳಗುಪ್ಪ ಮೈಸೂರು ರೈಲು ಮತ್ತು ಬೆಂಗಳೂರಿನಿಂದ ತಾಳಗುಪ್ಪ ಹೋಗುವ 20651 ರೈಲು 1 ವರೆ ಗಂಟೆ ತಡವಾಗಿ ಚಲಿಸಿದೆ.
16205 ರೈಲು ತಾಳುಗುಪ್ಪ ನಿಲ್ದಾಣವನ್ನ ಬಿಟ್ಟ ಇಂಟರ್ ಸಿಟಿ ರೈಲು ಶಿವಮೊಗ್ಗಕ್ಕೆ 11 ನಿಮಿಷ ತಡವಾಗಿ ಬಂದು ತಲುಪಿತ್ತು. 13 ನಿಮಿಷ ತಡವಾಗಿ ನಿಲ್ದಾಣವನ್ನ ಬಿಟ್ಟ ರೈಲು ತರೀಕೆರೆಯನ್ನ 15 ನಿಮಿಷ ತಡವಾಗಿ ಬಂದು ತಲುಪಿದೆ.
1 ಕಾಲು ಗಂಟೆ ತರೀಕೆರೆಯಲ್ಲೇ ನಿಂತ ರೈಲು 7 ಗಂಟೆಯ ನಂತರ ಚಲಿಸಿದೆ. ಶಿವಪುರದ ಬಳಿ ನಿಂತ ರೈಲು ನಂತರ ಬೀರೂರನ್ನ ತಡವಾಗಿ ತಲುಪಲಿದೆ. ಎಲೆಕ್ಟ್ರಿಕ್ ನಲ್ಲಿ ಸಮಸ್ಯೆ ಉಂಟಾಗಿ ಈ ಅಡಚಣೆ ನಡೆದಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಅದರಂತೆ ಮಧ್ಯಾಹ್ನ ಹೊರಟ 20651 ಇಂಟರ್ ಸಿಟಿ ರೈಲು ತರೀಕೆರೆ ಮತ್ತು ಶಿವಪುರದಲ್ಲಿ 1 ವರೆ ಗಂಟೆ ತಡವಾಗಿ ಚಲಿಸಿದೆ.
intercity train running 1 and a half hours late