Suddilive || Bhadravathi
ಸದ್ದು ಗದ್ದಲವಿಲ್ಲದೆ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ -Kadakadte railway flyover inaugurated without any fuss
ಅಂತು ಇಂತೂ ಭದ್ರಾವತಿಯ ಕಟಡದಕಟ್ಟೆ ರೈಲ್ವೆ ಓವರ್ ಬ್ರಿಡ್ಜ್ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಸದ್ದಿಲ್ಲದೆ ಸಂಸದ ರಾಘವೇಂದ್ರ ರೈಲ್ವೆ ಓವರ್ ಬ್ರಿಡ್ಜ್ ನ್ನ ಲೋಕಾರ್ಪಣೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.
2022 ರಲ್ಲಿ 23 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂದಿದ್ದ ರೈಲ್ವೆ ಓವರ್ ಬ್ರಿಡ್ಜ್ ಗಜಗರ್ಭದಂತೆ ಮೂರು ವರ್ಷಗಳ ಬಳಿಕ ಲೋಕಾರ್ಪಣೆಯಾಗಿದೆ. ಇದಕ್ಕೆ ಅನೇಕ ಕಾರಣಗಳನ್ನ ಆಯಾ ಸಂದರ್ಭಗಳಲ್ಲಿ ಸಂಸದರು ಕೊಟ್ಟಿದ್ದಾರೆ. ವಾಹನ ಸವಾರರಿಗೆ ಮೈರು ವರ್ಷ ತೊಂದರೆಯಿಂದಲೇ ಓಡಾಡಿದ್ದು ಸತ್ಯ. 18 ತಿಂಗಳ ಕಾಮಗಾರಿ ಎಂದು ಹೇಳಲಾಗಿತ್ತು. 2024 ರಲ್ಲೇ ಲೋಕಾರ್ಪಣೆ ಆಗಲಿದೆ ಎಂದು ಹೇಳಲಾಯಿತು. ನಂತರ ಜನವರಿಗೆ ಡೇಟ್ ಫಿಕ್ಸ್ ಎನ್ನಲಾಯಿತು.
ನಂತರ ಏಪ್ರಿಲ್ 26 ಕ್ಕೆ ಲೋಕಾರ್ಪಣೆಯಾಗಿದೆ. ಯಾವುದೇ ಮೀಡಿಯಾಗಳಿಗೆ ತಿಳಿಸದೆ ಲೋಕಾರ್ಪಣೆ ಮಾಡಿರುವುದು ಸಹ ಅಚ್ಚರಿ ಮೂಡಿಸಿದೆ. ಭದ್ರಾವತಿಯ ಕಡದಟ್ಟೆ ಬಳಿ ಹಾದು ಹೋಗಿರುವ ಸುಸಜ್ಜಿತ ನೂತನ "ರೈಲ್ವೇ ಮೇಲ್ಸೇತುವೆ" ಇಂದು ಸಾರ್ವಜನಿಕರ ಬಳಕೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಈ ಸಮಯದಲ್ಲಿ ಭದ್ರಾವತಿ ಶಾಸಕ ಸಂಗಮೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ತಾಲ್ಲೂಕು ಅಧ್ಯಕ್ಷರಾದ ಶ್ರೀ ಧರ್ಮ ಪ್ರಸಾದ್ ಅವರು, ಶಾಸಕರುಗಳಾದ ಶ್ರೀ ಅರುಣ್ , ಶ್ರೀಮತಿ ಬಲ್ಕಿಶ್ ಬಾನು ಅವರು, ಮುಖಂಡರಾದ ಶ್ರೀ ಮಂಗೋಟೆ ರುದ್ರೇಶ್ ಅವರು, ಶ್ರೀಮತಿ ಶಾರದಾ ಅಪ್ಪಾಜಿ ಅವರು ಸೇರಿದಂತೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
inaugurated without any fuss