ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ- imprisonment for trafficking illegal ganja

Suddilive|| Shivamogga

ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ಕಠಿಣ ಕಾರಾಗೃಹ ಶಿಕ್ಷೆ-Man sentenced to rigorous imprisonment for trafficking illegal ganja

Illegal, ganja



2021 ರಲ್ಲಿ ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಭದ್ರಾವತಿಗೆ ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮದ ಮುರುಗ ಎಲ್. ಬಿನ್ ಲಕ್ಷ್ಮಣ  ಎಂಬ ವ್ಯಕ್ತಿ 2021ರಲ್ಲಿ ಓಮಿನಿ ವ್ಯಾನ್ ಮೂಲಕ ಆಂದ್ರದ ರಾಜಮಂಡ್ರಿಯಿಂದ 50 ಕೆ.ಜಿ.430 ಗ್ರಾಂ ತೂಕದ ಒಣ ಗಾಂಜಾವನ್ನು ಕಾನೂನು ಬಾಹಿರವಾಗಿ ಸಾಕಾಣಿಕೆ ಮಾಡುವಾಗ ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು, ಪ್ರಕರಣ ದಾಖಲಿಸಿಕೊಂಡು ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣವನ್ನು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಕ್ಷಿ ಮತ್ತು ಇನ್ನಿತರೆ ಪೂರಕ ಸಾಕ್ಷ್ಯಾಧಾರಗಳಿಂದ ಹಾಗೂ ಸರ್ಕಾರದ ಪರ ಅಭಿಯೋಜಕರು ಮಂಡಿಸಿದ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪವು ದೃಡಪಟ್ಟಿದೆ ಎಂದು ಈ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ವಾಸ ಸಜೆ ಮತ್ತು ರೂ. 1.00 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 2 ವರ್ಷ ಹೆಚ್ಚುವರಿ ಸಾಧಾರಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್‌ರವರು ಏ.04 ರಂದು ತೀರ್ಪು ನೀಡಿ ಆದೇಶಿಸಿದ್ದಾರೆ.

ಸರ್ಕಾರದ ಪರ ಅಭಿಯೋಜಕರಾದ ಸುರೇಶ್ ಕುಮಾರ್ ಎ.ಎಂ. ವಾದ ಮಂಡಿಸಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close