ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ- ಗಂಡ ಮಾವ ಅರೆಸ್ಟ್-husband and father-in-law arrested

 Suddilive || Bhadravathi

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆ- ಗಂಡ ಮಾವ ಅರೆಸ್ಟ್-Woman found hanging, husband and father-in-law arrested

Husband, arrested

ಭದ್ರಾವತಿಯ ಹೆಚ್ ಕೆ ಜಂಕ್ಷನ್ ನಲ್ಲಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದು ಪತ್ತೆಯಾಗಿದ್ದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ಆಗಿ ದಾಖಲಾಗಿದೆ. 

ಅಶ್ವಿನಿ ಅಲಿಯಾಸ್ ತೇಜಸ್ವಿನಿ (28) ಎಂಬ ಮಹಿಳೆ ನಿನ್ನೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಣದ ವಿಚಾರವಾಗಿ ಗಲಾಟೆಯಾಗಿದ್ದು ಅತ್ತೆ, ಮಾವ ಮತ್ತು ಗಂಡ ಪ್ರಮೊದ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. 


ಅಶ್ವಿನಿ ಮತ್ತು ಪ್ರಮೋದ್ 10 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವೆ ಮೊದಲಿನಿಂದಲೂ ಹಣದ ವಿಚಾರದಲ್ಲಿ ಗಲಾಟೆಯಾಗುತ್ತಿತ್ತು. ನಿನ್ನೆ ವಿವಾಹಿತ ಮಹಿಳೆಗೆ ಕಟ್ಟಿಗೆಯಲ್ಲಿ ಹೊಡೆದು ನೇಣು ಬಿಗಿದ ಸ್ಥಿಯಲ್ಲಿ ಪತ್ತೆಯಾಗುವಂತೆ ಮಾಡಲಾಗಿದೆ ಎಂದು ತವರು ಕುಟುಂಬ  ಗಂಡ ಪ್ರಮೋದ್ ಮತ್ತು ಪ್ರಮೋದ್ ತಂದೆಯವರ ವಿರುದ್ಧ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 

ಘಟನಾ ನಡೆದ ಸ್ಥಳದಲ್ಲಿ ಅತ್ತೆ ಇಲ್ಲದ ಕಾರಣ ಆಕೆಯನ್ನ ಬಂಧಿಸಲಾಗಿಲ್ಲ. ಕೊಲೆಗೆ ಮತ್ತು ಆತ್ಮಹತ್ಯೆಗೆ ಈ ಮೂವರು ಕಾರಣ ಎಂಬ ಅಶ್ವಿನಿ ತವರು ಮನೆಯವರ ದೂರಿನ ಆಧಾರದ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸರು ಇಬ್ಬರನ್ನ ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. 

husband and father-in-law arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close