ಮೀನು ಹಿಡಿಯಲು ಹೋಗಿದ್ದ ಬಾಲಕರ ಮಿಸ್ಸಿಂಗ್ ಪ್ರಕರಣ ಸುಖಾಂತ್ಯದ ಹಾದಿಯಲ್ಲಿ-happy ending

Suddilive || Shivamogga

ಮೀನು ಹಿಡಿಯಲು ಹೋಗಿದ್ದ ಬಾಲಕರ ಮಿಸ್ಸಿಂಗ್ ಪ್ರಕರಣ ಸುಖಾಂತ್ಯದ ಹಾದಿಯಲ್ಲಿ-happy ending     -The case of missing boys who went fishing is on the way to a happy ending

Missing, happy ending


ಸಂಜೆ ಮೀನು ಹಿಡಿಯಲು ಹೋಗಿದ್ದ ಐವರು ಬಾಲಕರ ನಾಪತ್ತೆ ಪ್ರಕರಣ ಸುಖಾಂತ್ಯದ ಹಾದಿಯಲ್ಲಿದೆ. ಇನ್ನಿಬ್ಬರು ಸಧ್ಯಕ್ಕೆ ಓಡಿಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾದರೂ. ಅವರ ಮನವೊಲಿಕೆ ಪ್ರಯತ್ನ ನಡೆಯುತ್ತಿದೆ. 

ನಿಗದಿತ ಸಮಯಕ್ಕೆ ಮನೆಗೆ ಬಾರದ  ಬಾಲಕರಿಗಾಗಿ ಪೋಲಿಸರು ಹಾಗೂ ಗ್ರಾಮಸ್ಥರಿಂದ ಹುಡುಕಾಟ ಆರಂಭಿಸಿದ್ದರು. ಭದ್ರಾವತಿ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಸಂಜೆ 4-30 ರ ವೇಳೆಗೆ ಊರಿನ ಪಕ್ಕದಲ್ಲಿರುವ ಸಣ್ಣ ಚಾನೆಲ್ ನಲ್ಲಿ ಮೀನು ಹಿಡಿಯಲು ಹೋಗಿದ್ದರು. ಸಂಜೆಯಾದರು ಮನೆಗೆ ಬಾರದ ಹಿನ್ನಲೆಯಲ್ಲಿ  ಪೋಷಕರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು. 

ಬಾಲಕರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ  ಭದ್ರಾವತಿ ಗ್ರಾಮಾಂತರ ಪೊಲೀಸರು ಹುಡುಕಾರ ಆರಭಿಸಿದ್ದರು. ಮೀನು ಹಿಡಿಯಲು ಹೋಗಿದ್ದು ಪೋಷಕರಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ದಿಗಿಲು ಬಿದ್ದ ಬಾಲಕರು ರಾತ್ರಿ ತೋಟದಲ್ಲೇ ಉಳಿದಿದ್ದರು. 

ಬಸ್ ಸ್ಟ್ಯಾಂಡ್, ರೈಲ್ವೆ ನಿಲ್ದಾಣ ಸೇರಿ ಚಾನಲ್ ಪಕ್ಕದಲ್ಲಿ  ಗ್ರಾಮಸ್ಥರು ಹಾಗೂ ಪೊಲೀಸರು ಹುಡುಕಾಡಿದ್ದಾರೆ. ಎಂಟು ವರ್ಷ, ಹತ್ತು ವರ್ಷ ಹಾಗೂ ಹದಿನಾಲ್ಕು ವರ್ಷದ ಬಾಲಕರು ನಾಪತ್ತೆಯಾಗಿದ್ದರು. ಬೆಳಗ್ಗಿನ ಜಾವ ಊರಿನಿಂದ ಒಂದು ಕಿಮಿ ದೂರದಲ್ಲಿರುವ ತೋಟದಲ್ಲಿ ಬಾಲಕರು ದೊರೆತಿದ್ದಾರೆ.

ಗ್ರಾಮಸ್ಥರು ಬರುವುದನ್ನ ಕಂಡು ಐವರಲ್ಲಿ ಇಬ್ಬರು ಬಾಲಕರು ಓಡಿ ಹೋಗಿದ್ದಾರೆ. ಈ ಬಾಲಕರನ್ನೂ ಕರೆತರುವ ಪ್ರಯತ್ನದಲ್ಲಿ ಪೊಲೀಸರು ಮತ್ತು ಪೋಷಕರು ಇರುವುದಾಗಿ ತಿಳಿದು ಬಂದಿದೆ. 

happy ending

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close